ದೆಹಲಿಯಲ್ಲಿ ರೈತರ ಹೋರಾಟ ಬೆಂಬಲಿಸಿ ರಾಜ್ಯಾದಾದ್ಯಂತ ಕರಾಳ ದಿನ ಆಚರಣೆಗೆ ಕರೆ!
ದೆಹಲಿಯಲ್ಲಿ ರೈತರ ಹೋರಾಟ ಬೆಂಬಲಿಸಿ ರಾಜ್ಯಾದಾದ್ಯಂತ ಕರಾಳ ದಿನ ಆಚರಣೆಗೆ ಕರೆ ನೀಡಲಾಗಿದೆ.
ಮೇ 26ರಂದು ರಾಜ್ಯಾದಾದ್ಯಂತ ಕರಾಳ ದಿನ ಆಚರಣೆಗೆ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಕರೆ ಕೊಟ್ಟಿದ್ದಾರೆ. 26ರಂದು ರೈತರ ಮನೆ ಮೇಲೆ ಕಪ್ಪು ಬಾವುಟ ಹಾರಿಸಲಾಗುತ್ತದೆ. ಜೊತೆಗೆ ರೈತರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಳ್ಳುತ್ತಾರೆ.
ಇದೇ ಮೇ 26ಕ್ಕೆ ದೆಹಲಿಯಲ್ಲಿ ರೈತರು ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಸುತ್ತಿರುವ ಹೋರಾಟಕ್ಕೆ 6 ತಿಂಗಳು ತುಂಬುತ್ತಿದ್ದು ಈ ಹಿನ್ನೆಲೆ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ದೇಶದಾದ್ಯಂತ ಕರಾಳ ದಿನ ಆಚರಿಸಲು ಘೋಷಿಸಿದೆ. ಈ ಆಚರಣೆಗೆ ರಾಷ್ಟ್ರೀಯ ಪಕ್ಷ ಹಾಗೂ ರಾಜ್ಯದ ಸ್ಥಳೀಯ ಪಕ್ಷ ಜೆಡಿಎಸ್ ಸೇರಿದಂತೆ ಒಟ್ಟು 12 ಪ್ರಮುಖ ರಾಜಕೀಯ ಪಕ್ಷಗಳು ಬೆಂಬಲ ಘೋಷಿಸಿವೆ.
ಕರಾಳ ದಿನ ಆಚರಣೆಗೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಜನತಾ ದಳ, ನ್ಯಾಷನಲ್ ಕಾಂಗ್ರೆಸ್ ಪಾರ್ಟಿ, ತೃಣಮೂಲ ಕಾಂಗ್ರೆಸ್, ಶಿವಸೇನಾ, ದ್ರಾವಿಡ ಮುನ್ನೇತ್ರ ಕಳಗಂ, ಜಾರ್ಝಂಡ ಮುಕ್ತ ಮೋರ್ಚಾ, ಜೆಕೆಪಿಎ, ಸಮಾಜವಾದಿ ಪಾರ್ಟಿ, ರಾಷ್ಟ್ರೀಯ ಜನತಾ ದಳ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಕಮ್ಯುನಿಸ್ಟ್ ಆಫ್ ಇಂಡಿಯಾ ಬೆಂಬಲ ಸೂಚಿಸಿವೆ.