ಪತ್ರಕರ್ತೆ ಗೌರಿ ಹತ್ಯೆ ಪ್ರಕರಣ: ಐವರು ಆರೋಪಿಗಳ ಜಾಮೀನು ಅರ್ಜಿ ವಜಾ!

ಹಿರಿಯ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್‌ ಅವರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು, ಜಾಮೀನು ನೀಡಲು ನಿರಾಕರಿಸಿದೆ.

ಹತ್ಯೆ ಪ್ರಕರಣದ ಐವರು ಆರೋಪಿಗಳಾದ ಅಮಿತ್ ದಿಗ್ವೇಕರ್, ಸುರೇಶ್ ಎಚ್., ರಾಜೇಶ್ ಡಿ. ಬಂಗೇರ, ಸುರೇಶ್ ಹಾಗೂ ಸುಧನ್ವ ಎಂಬ ಆರೋಪಿಗಳು ಜಾಮೀನ ಕೋರಿ ಅರ್ಜಿ ಸಲ್ಲಿದ್ದರು.

ಅರ್ಜಿಯ ಪರಿಶೀಲನೆ ನಡೆಸಿರುವ ಬೆಂಗಳೂರಿನ 1ನೇ ಸಿಟಿ ಸಿವಿಲ್ ಕೋರ್ಟ್, ಅರ್ಜಿಯನ್ನು ವಜಾಗೊಳಿಸಿದ್ದು, ಜಾಮೀನು ನೀಡಲಾಗುವುದಿಲ್ಲ ಎಂದು ಹೇಳಿದೆ.

2017ರ ಸೆಪ್ಟೆಂಬರ್ 05 ರಂದು ಗೌರಿ ಲಂಕೇಶ್‌ ಅವರನ್ನು ಅವರ ನಿವಾಸ ಬಳಿ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಗೈದಿದ್ದರು.

ಇದನ್ನೂ ಓದಿ: ಗೌರಿ ಲಂಕೇಶರಂತೆ ನನ್ನನ್ನೂ ಕೊಲ್ಲಬಹುದು ಎನ್ನಿಸಿತ್ತು: ವಕೀಲೆ ದೀಪಿಕಾ ಸಿಂಗ್‌ ರಜಾವತ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights