ಕೆಟ್ಟ ಮಾಲಿನ್ಯ ಹೊಂದಿರುವ ನಗರಗಳಲ್ಲಿ ಬೆಂಗಳೂರಿಗೆ 3ನೇ ಸ್ಥಾನ: ಮೊದಲ ಸ್ಥಾನದಲ್ಲಿ ದೆಹಲಿ!

ಗಾರ್ಡನ್‌ ಸಿಟಿ ಎಂದೇ ಖ್ಯಾತಿ ಪಡೆದಿರುವ ರಾಜಧಾನಿ ಬೆಂಗಳೂರು 2020ರ ಅತಿ ಹೆಚ್ಚು ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದು, ಭಾರತದ ಅತ್ಯಂತ ಮಾಲಿನ್ಯ ನಗರಗಳಲ್ಲಿ ಒಂದು ಎಂಬ ಕುಖ್ಯಾತಿಗೆ ಕಾರಣವಾಗಿದೆ.

ಗಾರ್ಡನ್‌ ಸಿಟಿ ಆಫ್‌ ಇಂಡಿಯಾ 2020 ಎಂಬ ಹೆಸರಿನಲ್ಲಿ ಗ್ರೀನ್‌ ಪೀಸ್‌ ಸಮೀಕ್ಷೆ ನಡೆಸಿದ್ದು, ಭಾರತದ ಅತ್ಯಂತ ಕೆಟ್ಟ ಮಾಲಿನ್ಯ ಹೊಂದಿರುವ ನಗರಗಳ ಪೈಕಿ ಬೆಂಗಳೂರು 3ನೇ ಸ್ಥಾನ ಪಡೆದುಕೊಂಡಿದೆ. ದೆಹಲಿ ಮೊದಲನೇ ಸ್ಥಾನ ಮತ್ತು ಮುಂಬೈ ಎರಡನೇ ಸ್ಥಾನದಲ್ಲಿವೆ ಎಂದು ಹೇಳಿದೆ.

ಮಾಲಿನ್ಯದಿಂದಾಗಿ 2020ರಲ್ಲಿ ದೆಹಲಿಯಲ್ಲಿ ಅಂದಾಜು 54 ಸಾವಿರ ಜನರು ಸಾವನ್ನಪ್ಪಿದ್ದಾರೆ, ಮುಂಬೈನಲ್ಲಿ 25 ಸಾವಿರ ಜನರು ಮರಣ ಹೊಂದಿದ್ದಾರೆ ಎಂದು ಗ್ರೀನ್‌ ಪೀಸ್‌ ವರದಿ ಹೇಳಿದೆ.

ಅತಿ ಹೆಚ್ಚು ಮರಗಳು, ಉತ್ತಮ ಪರಿಸರ ವ್ಯವಸ್ಥೆಯನ್ನು ಹೊಂದಿದ್ದ ಬೆಂಗಳೂರು ಗಾರ್ಡನ್‌ ಸಿಟಿ ಎಂಬ ಖ್ಯಾತಿಯನ್ನು ಪಡೆದುಕೊಂಡಿತ್ತು. ಆದರೆ, ತರುವಾಯ ಅಭಿವೃದ್ಧಿಯ ಹೆಸರಿನಲ್ಲಿ ನಡೆದ ಮರಗಳ ಮಾರಣ ಹೋಮದಿಂದಾಗಿ, ಗಾರ್ಡನ್‌ ಸಿಟಿ ಕಾಂಕ್ರಿಟ್‌ ಸಿಟಿಯಾಗಿ ಬದಲಾಗುತ್ತಿದೆ. ಇದರಿಂದಾಗಿ ಅತ್ಯಂತ ಕೆಟ್ಟ ಮಾಲಿನ್ಯ ಹೊಂದಿರುವ ನಗರಗಳಲ್ಲಿ ಮೂರನೇ ಸ್ಥಾನ ಪಡೆದಿದೆ.

‘ನಾವು ಶುದ್ಧ ಇಂಧನದ ಮೇಲೆ ಪಳೆಯುಳಿಕೆ ಇಂಧನವನ್ನು ಆಯ್ಕೆ ಮಾಡಿದಾಗ, ನಮ್ಮ ಆರೋಗ್ಯವು ಅವಿರ್ಮವಾಗಿರುತ್ತದೆ. ಕಲುಷಿತ ಗಾಳಿ ಕ್ಯಾನ್ಸರ್ ಮತ್ತು ಪಾರ್ಶ್ವವಾಯುವಿನಿಂದ ಸಾವುಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅಸ್ತಮಾ ದಾಳಿಗಳಲ್ಲಿ ಹೆಚ್ಚಳ ಮತ್ತು ಕೊರೊನಾ ಲಕ್ಷಣಗಳ ತೀವ್ರತೆಯನ್ನು ಇನ್ನಷ್ಟು ಉಲ್ಬಣಿಸುತ್ತದೆ’ ಎಂದು ಗ್ರೀನ್ ಪೀಸ್ ಇಂಡಿಯಾದ ಹವಾಮಾನ ಪ್ರಚಾರಕ ಅವಿನಾಶ್ ಚಂಚಲ್ ತಿಳಿಸಿದ್ದಾರೆ.

ಇದನ್ನೂ ಓದಿ: BJP ಮುಕ್ತವಾಗುತ್ತಿವೆ ಸ್ಥಳೀಯ ಸಂಸ್ಥೆಗಳು; ಆಂಧ್ರದ 3,221 ಪಂಚಾಯತ್‌ ಸ್ಥಾನಗಳಲ್ಲಿ BJP ಗೆದ್ದಿದ್ದು 13 ಮಾತ್ರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights