ದೇವಸ್ಥಾನಕ್ಕೆ ಭೂಮಿ ಕೊಡಲು ನಿರಾಕರಿಸಿದ ಕುಟುಂಬ; ಗೋಮೂತ್ರ ಕುಡಿದು, ಶೂ ಹೊತ್ತುಕೊಳ್ಳುವಂತೆ ಒತ್ತಾಯ

ದೇವಸ್ಥಾನಕ್ಕೆ ತನ್ನ ಸಂಪೂರ್ಣ ಭೂಮಿಯನ್ನು ನೀಡಲು ನಿರಾಕರಿಸಿದ ಕಾರಣ ಕುಟುಂಬವೊಂದನ್ನು ಸಮುದಾಯದಿಂದ ಬರಿಷ್ಕರಿಸಲಾಗಿದೆ. ಅವರು ಮತ್ತೆ ಸಮುದಾಯಕ್ಕೆ ಮರಳಲು ಗೋಮೂತ್ರ ಕುಡಿಯಲೇಬೇಕು ಮತ್ತು ತಲೆ ಮೇಲೆ ಶೂ ಹೊತ್ತುಕೊಳ್ಳಬೇಕು ಎಂದು ಷರತ್ತು ಹಾಕಿರುವ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ.

ಗುನಾದಲ್ಲಿರುವ ಶಿವಾಜಿ ನಗರ ಪ್ರದೇಶದ ನಿವಾಸಿ ಹೀರಾ ಲಾಲ್ ಘೋಸಿ ಅವರು ಮಂಗಳವಾರ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಸ್ಥಳೀಯ ಪಂಚಾಯತಿಯು ತನ್ನ ತಲೆಯ ಮೇಲೆ ಬೂಟುಗಳನ್ನು ಹೊತ್ತುಕೊಳ್ಳಬೇಕು, ಗಡ್ಡವನ್ನು ಬೋಳಿಸಿಕೊಳ್ಳಬೇಕು ಮತ್ತು ಕುಟುಂಬ ಸದಸ್ಯರಿಗೆ ಗೋಮೂತ್ರವನ್ನು ಕುಡಿಯಲು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.

ದೇವಸ್ಥಾನ ನಿರ್ಮಾಣಕ್ಕೆ ತನ್ನ ಕುಟುಂಬದ ಒಡೆತನದಲ್ಲಿರುವ ಸಂಪೂರ್ಣ ಜಮೀನನ್ನು ದಾನ ಮಾಡುವಂತೆ ಆರಂಭದಿಂದಲೂ ಒತ್ತಾಯಿಸಲಾಗುತ್ತಿದೆ ಎಂದು ಘೋಸಿ ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹೇಯ ಕೃತ್ಯ: ಬಾಲಕಿಯ ಮೇಲೆ 400 ಮಂದಿ ಕಾಮುಕರಿಂದ ಅತ್ಯಾಚಾರ

‘ನಮ್ಮ ಕುಟುಂಬವು ದೇವಾಲಯದ ನಿರ್ಮಾಣಕ್ಕಾಗಿ ನಮ್ಮ ಭೂಮಿಯ ಒಂದು ಭಾಗವನ್ನು ದಾನ ಮಾಡಿದೆ. ಆದರೆ ಪಂಚಾಯತ್ ಸದಸ್ಯರು ಸಂಪೂರ್ಣ ಭೂಮಿ ಬೇಕು ಎಂದು ಹೇಳುತ್ತಿದ್ದಾರೆ. ಅದು ನಮನ್ನು ಭೂರಹಿತರನ್ನಾಗಿ ಮಾಡುತ್ತದೆ. ಹೀಗಾಗಿ ನಾವು ಸಂಪೂರ್ಣ ಭೂಮಿ ನೀಡಲು ನಿರಾಕರಿಸಿದ್ದೇವೆ. ಅದಕ್ಕಾಗಿ, ನಮ್ಮ ಕುಟುಂಬವನ್ನು ಸಮುದಾಯದಿಂದ ಬಹಿಷ್ಕರಿದ್ದಾರೆ. ನಮ್ಮ ಮನೆಗೆ ಯಾರೂ ಬರುವುದಿಲ್ಲ. ಸಮುದಾಯದ ಯಾರನ್ನೂ ನಮ್ಮ ಕುಟುಂಬದವರು ಮದುವೆಯಾಗಂತೆ ತಡೆಯಲಾಗುತ್ತಿದೆ; ಎಂದು ತಿಳಿಸಿದ್ದಾರೆ.

ಘೋಸಿ ಅವರ ದೂರಿನ್ನು ಅಧರಿಸಿ ತನಿಖೆಗೆ ಆದೇಶಿಸಲಾಗಿದೆ. ಪ್ರಕರಣ ಸಾಬೀತಾದಲ್ಲಿ, ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಫ್ರಾಂಕ್ ನೊಬೆಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಅಂಬಾಲಾ ಜೈಲಿನಿಂದ ತಂದ ಮಣ್ಣಿನಲ್ಲಿ ಗಾಂಧಿ ಹಂತಕ ಗೋಡ್ಸೆಯ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಹಿಂದೂ ಮಹಾಸಭಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights