ಫ್ಯಾಕ್ಟ್‌ಚೆಕ್ : ಬುರ್ಖಾ ಧರಿಸಿದ್ದ ವ್ಯಕ್ತಿಯಿಂದ ಮಗು ಅಪಹರಣ ವಿಡಿಯೊ ! ನಡೆದಿದ್ದೇನು ?

ಬುರ್ಖಾಧಾರಿಯೊಬ್ಬರು ಮಗುವೊಂದನ್ನು ಬುರ್ಖಾದೊಳಗೆ ಬಚ್ಚಿಟ್ಟುಕೊಂಡು ಓಡಿ ಹೋಗುತ್ತಿರುವ ಮತ್ತು ವ್ಯಕ್ತಿಯೊಬ್ಬರು ಕಾರಿನಲ್ಲಿ ಅವರನ್ನು ಹಿಂಬಾಲಿಸುತ್ತಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರಿನಲ್ಲಿದ್ದ ವ್ಯಕ್ತಿ ಮತ್ತು ಇನ್ನೊಬ್ಬ ಮಹಿಳೆಯು, ಬುರ್ಖಾಧಾರಿಯನ್ನು ಹಿಡಿಯುತ್ತಾರೆ. ಆಗ ಬುರ್ಖಾ ಧರಿಸಿದ್ದದ್ದು ಪುರುಷ ಎಂಬುದು ಗೊತ್ತಾಗುತ್ತದೆ. “ಬುರ್ಖಾದ ನೆಪದಲ್ಲಿ ಏನೆಲ್ಲಾ ನಡೆಯುತ್ತಿದೆ ನೋಡಿ,  ಬುರ್ಖಾ ಧರಿಸಿ ಏನು ಕೆಲಸ ಮಾಡತ್ತಿದ್ದಾರೆ ನೋಡಿ, ಬುರ್ಖಾದೊಳಗೆ ಭಯೋತ್ಪಾದನೆಯ ಮುಖವಾಡವಿದೆ, ಬುರ್ಖಾ ಭಯೋತ್ಪಾದನೆ ಚಟುವಟಿಕೆಗಳನ್ನು ಮರೆಮಾಡುತ್ತದೆ, ಬುರ್ಖಾ ಅಪರಾಧವನ್ನು ಉತ್ತೇಜಿಸುತ್ತದೆ, ಎಂಬ ಹೇಳಿಕೆಯೊಂದಿಗೆ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ.

‘ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಬುರ್ಖಾಧಾರಿಗಳು ಮಕ್ಕಳ ಕಳ್ಳರು. ಹೀಗಾಗಿ ಅವರ ಬಗ್ಗೆ ಎಚ್ಚರದಿಂದ ಇರಿ’ ಎಂಬ ಸಂದೇಶವನ್ನು ವಿಡಿಯೊ ಜತೆಗೆ ಹಂಚಿಕೊಳ್ಳಲಾಗಿದೆ. ಕೆಲವರು ಬುರ್ಖಾವನ್ನು ನಿಷೇಧ ಮಾಡಿ ಎಂದು ಆಗ್ರಹಿಸಿದ್ದಾರೆ. ಈ ಫೊಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೋವನ್ನು ಸ್ಕ್ರೀನ್‌ಶಾಟ್‌ ಮೂಲಕ ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ 14 ಜುಲೈ 2022 ರಂದು ಅಪ್‌ಲೋಡ್ ಮಾಡಿದ ವೈರಲ್ ವೀಡಿಯೊದ ಮೂಲ ಆವೃತ್ತಿ ಲಭ್ಯವಾಗಿದ್ದು. ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ವೈರಲ್ ವೀಡಿಯೊವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಎಂದು ನಮೂದಿಸಲಾಗಿದೆ. ಮನರಂಜನಾ ಉದ್ದೇಶಗಳಿಗಾಗಿ ಮಾಡಲಾಗಿದೆ. ಇದರಿಂದ ಈ ವಿಡಿಯೋ ಸ್ಕ್ರಿಪ್ಟ್ ಮಾಡಿರುವುದು ಸ್ಪಷ್ಟವಾಗಿದೆ.

ಇದು ಸುಳ್ಳು ಸುದ್ದಿ ಎಂದು ‘ದಿ ಲಾಜಿಕಲ್ ಇಂಡಿಯನ್’ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ಇದು ಕಿರುಚಿತ್ರವೊಂದರ ಭಾಗ. ಸೋನು ಚೌಧರಿ ಫಿಲ್ಮ್ಸ್‌ ಎಂಬ ಸಂಸ್ಥೆಯು ಈ ಕಿರುಚಿತ್ರವನ್ನು ನಿರ್ಮಿಸಿದೆ. ಇದು ಮನರಂಜನೆಯ ಉದ್ದೇಶಕ್ಕಾಗಿ ನಿರ್ಮಿಸಿದ ಕಿರುಚಿತ್ರ ಎಂದು ಅದರಲ್ಲೇ ಹೇಳಲಾಗಿದೆ. ಈ ಕಿರುಚಿತ್ರವನ್ನು ತಿರುಚಿ, ಬುರ್ಖಾವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸ್ಕ್ರಿಪ್ಟೆಡ್ ಮಾಡಲಾದ ವಿಡಿಯೊವನ್ನು ನೈಜ ಘಟನೆ ಎಂದು ಬಿಂಬಿಸಿ ಬುರ್ಖಾಧರಿಸಿದ ವ್ಯಕ್ತಿಯು ಮಕ್ಕಳನ್ನ ಅಪಹರಿಸುತ್ತಿರುವಂತೆ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಸರ್ಕಾರಿ ಶಾಲೆಯಲ್ಲಿ ನಕಲಿ ಶಿಕ್ಷಕ – ವೈರಲ್ ವಿಡಿಯೋದ ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights