ಫ್ಯಾಕ್ಟ್‌ಚೆಕ್ : KYC ಸಲ್ಲಿಸುವಂತೆ BSNL ಹೆಸರಿನಲ್ಲಿ ಹರಿದಾಡುತ್ತಿರುವ ಸಂದೇಶ ಅಸಲಿಯೋ? ನಕಲಿಯೋ?
ಬಿಎಸ್‌ಎನ್‌ಎಲ್ ಎಂಬ ಸಾರ್ವಜನಿಕ ಟೆಲಿಕಾಂ ಸಂಸ್ಥೆ ಭಾರತದಲ್ಲಿ ಇದೆ ಎಂಬುದನ್ನೆ ಜನರು ಮರೆಯುವಷ್ಟು ಅಂಚಿಗರ ಸರಿದಿದೆ. ಇನ್ನೊಂದು ಕಡೆ BSNL (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶವೊಂದು ವೈರಲ್ ಆಗುತ್ತಿದೆ. 24 ಗಂಟೆಯೊಳಗೆ KYC ಯನ್ನು ಸಲ್ಲಿಸದಿದ್ದರೆ ನಿಮ್ಮ ಸಂಖ್ಯೆಯನ್ನು ಅಮಾನತ್ತುಗೊಳಿಸಲಾಗುತ್ತದೆ, ತಕ್ಷಣವೆ ಕರೆ ಮಾಡಿ ಎಂದು ಬಿಎಸ್‌ಎನ್‌ಎಲ್ ಲೋಗೋ ಇರುವ ಪತ್ರವೊಂದು ವೈರಲ್ ಆಗುತ್ತಿದೆ.
“ಆತ್ಮೀಯ ಗ್ರಾಹಕರೇ, ನಿಮ್ಮ SIM KYC ಅನ್ನು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಅಮಾನತುಗೊಳಿಸಿದೆ. ನಿಮ್ಮ SIM ಕಾರ್ಡ್ ಅನ್ನು 24 ಗಂಟೆಗಳ ಒಳಗೆ ನಿರ್ಬಂಧಿಸಲಾಗುತ್ತದೆ. ತಕ್ಷಣವೇ ಕರೆ ಮಾಡಿ” ಎಂದು ಸಂದೇಶದಲ್ಲಿ ಹೇಳಲಾಗಿದೆ.
ಹಾಗಿದ್ದರೆ ಈ ಸಂದೇಶದ ಪತ್ರದ್ಲಿ ಉಲ್ಲೇಖವಾಗಿರುವ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಬಿಎಸ್‌ಎನ್‌ಎಲ್ ನಿಂದ ಬಂದಿದೆ ಎನ್ನಲಾದ ಸಂದೇಶವನ್ನು ಪರಿಶೀಲಿಸಲು ಸರ್ಚ್ ಮಾಡಿದಾಗ, ಇದೊಂದು ನಕಲಿ ಮತ್ತು ವಂಚನೆಯ ಸಂದೇಶ ಎಂದು ಪಿಐಬಿ ಫ್ಯಾಕ್ಟ್‌ಚೆಕ್ ತಂಡ ವರದಿಯನ್ನು ಪ್ರಕಟಿಸಿದೆ.
It is being claimed in a notice that the customer's KYC has been suspended by @TRAI and the sim card will be blocked within 24 hrs#PIBFactCheck
❌These claims are #Fake
✅@BSNLCorporate never sends any such notices
✅Never share your personal & bank details with anyone pic.twitter.com/R8WWgGOB06
— PIB Fact Check (@PIBFactCheck) February 7, 2023
ಟೆಲಿಕಾಂ ಕಂಪನಿಗಳು KYC ವಿವರಗಳನ್ನು ಕೇಳಿದಾಗ, ಅದು ಅಧಿಕೃತ ಚಾನಲ್‌ಗಳ ಮೂಲಕವೇ ಹೊರತು ಅಪರಿಚಿತ ಸಂಖ್ಯೆಗಳ ಮೂಲಕ ಅಲ್ಲ ಎಂಬುದನ್ನು ಬಳಕೆದಾರರು ಗಮನಿಸಬೇಕು. ಬಳಕೆದಾರರು ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬಾರದು ಅಥವಾ ಯಾವುದೇ ಸಂಖ್ಯೆಗಳಿಗೆ ಕರೆ ಮಾಡಬಾರದು ಮತ್ತು ಅವುಗಳನ್ನು ನಿರ್ಲಕ್ಷಿಸಬಾರದು ಎಂದು ತಿಳಿಸಿದೆ.
SIM ಕಾರ್ಡ್‌ಗಳ KYC ಪರಿಶೀಲನೆಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಸ್ಕ್ಯಾಮರ್‌ಗಳು ಬಳಕೆದಾರರನ್ನು ಕೇಳುತ್ತಾರೆ, ಅದು ವಿಫಲವಾದರೆ ಅವರು ತಮ್ಮ ಸಂಖ್ಯೆಗಳಿಗೆ ಪ್ರವೇಶವನ್ನು ಕಳೆದುಕೊಳ್ಳುತ್ತಾರೆ. ಬಳಕೆದಾರರು ಅಂತಹ ಅಪ್ಲಿಕೇಶನ್ ಅನ್ನು ಪ್ರವೇಶಿಸುತ್ತಿದಂತೆ, ಸ್ಕ್ಯಾಮರ್‌ಗಳು ಬಳಕೆದಾರರನ್ನು ಆನ್‌ಲೈನ್ ರೀಚಾರ್ಜ್ ಮಾಡಲು ಕೇಳುತ್ತಾರೆ.
ಇದು ವಂಚಕರು ಬಳಕೆದಾರರ ಬ್ಯಾಂಕಿಂಗ್ ವಿವರಗಳನ್ನು ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ, ಅದರ ಮೂಲಕ ಅವರು ತಮ್ಮ ಬ್ಯಾಂಕ್ ಖಾತೆಯಿಂದ ಹಣ ಮಂಗಮಾಯ ಮಾಡುತ್ತಾರೆ. ಬಳಕೆದಾರರು ಡೌನ್‌ಲೋಡ್ ಮಾಡುವ ಅಪ್ಲಿಕೇಶನ್ ಗಳು ಸ್ಕ್ರೀನ್ ಮಿರರಿಂಗ್ ಅಪ್ಲಿಕೇಶನ್‌ನಂತೆ( ನೀವು ನಿಮ್ಮ ಮೊಬೈಲ್‌ನಲ್ಲಿ ಏನೇ ಮಾಡಿದರೂ ಅದನ್ನು ಇನ್ನೊಂದು ಸ್ಕ್ರೀನ್ ಮೂಲಕ ನೋಡಬಹುದು) ಕಾರ್ಯನಿರ್ವಹಿಸುತ್ತದೆ, ಇದು ವಂಚಕರಿಗೆ ಬಳಕೆದಾರರ ಎಲ್ಲಾ ವಿವರಗಳನ್ನು ನೀಡುತ್ತದೆ. ಹಾಗಾಗಿ ಇಂತಹ ಸಂದೇಶಗಳನ್ನು ನಂಬಬೇಡಿ.
ಒಟ್ಟಾರೆಯಾಗಿ ಹೇಳುವುದಾದರೆ, ಬಿಎಸ್‌ಎನ್‌ಎಲ್ ಈ ರೀತಿಯಾದ ಯಾವುದೇ ಸಂದೇಶವನ್ನು ಯಾವ ಗ್ರಾಹಕರಿಗೂ ಕಳುಹಿಸುವುದಿಲ್ಲ. ಇದರ ಜೊತೆಗೆ ಟ್ರಾಯ್ ಕೂಡ ಯಾವುದೇ KYC ರದ್ದು ಪಡಿಸುವ ಕುರಿತು ಮಾಹಿತಿ ನೀಡಿಲ್ಲ. ಹಾಗಾಗಿ ಇದೊಂದು ವಂಚನೆಯ ಜಾಲ ಎಂದು PIB ಫ್ಯಾಕ್ಟ್‌ಚೆಕ್ ತಂಡ ಸಾರ್ವಜನಿಕರನ್ನು ಎಚ್ಚರಿಸಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ದುರಾದೃಷ್ಟವಶಾತ್ ‘ನಾನು ಹಿಂದೂ’ ಎಂದು ನೆಹರೂ ಹೇಳಿದ್ದರೆ?