ಫ್ಯಾಕ್ಟ್‌ಚೆಕ್: FIFA ವಿಶ್ವಕಪ್‌ನಲ್ಲಿ ನೀಡಿದ ಬ್ಯಾಗ್‌ ಮೇಲೆ ಮೋದಿ ಫೋಟೋ ಹಾಕಲಾಗಿತ್ತೆ?

FIFA ವಿಶ್ವಕಪ್-2022 ಅನ್ನು ಕತಾರ್‌ನಲ್ಲಿ ಆಯೋಜಿಸಲಾಗಿದೆ. FIFA ವಿಶ್ವಕಪ್ ನ ಅದ್ಧೂರಿ ಉದ್ಘಾಟನಾ ಸಮಾರಂಭಕ್ಕೆ ತೆರೆ ಬಿದ್ದಿದೆ. ಅದೇ ಸಮಯದಲ್ಲಿ, ಫುಟ್ಬಾಲ್ ಅಭಿಮಾನಿಗಳನ್ನು ಕತಾರ್ ವಿಶೇಷ ರೀತಿಯಲ್ಲಿ ಸ್ವಾಗತಿಸುತ್ತಿದೆ. ಅವರಿಗೆ ವಿಶೇಷ ಉಡುಗೊರೆ ನೀಡಲಾಗುತ್ತಿದ್ದು, ಅದರಲ್ಲಿ ಮಿಸ್ಕ್, ಅಂಬರ್ ಸೇರಿದಂತೆ ಹಲವು ವಸ್ತುಗಳನ್ನು ಒಳಗೊಂಡಿದೆ.

ಈ ಉಡುಗೊರೆ ಬ್ಯಾಗ್‌ನ ಹಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಉಡುಗೊರೆ ಬ್ಯಾಗ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಹಾಕಲಾಗಿದ್ದು ಅವರ ಜನಪ್ರಿಯ ಘೋಷಣೆಯಾದ  – “FIFA World Cup Qatar-2022 Sabka Saath- Subka Vikas” ಎಂಬ ಸ್ಲೋಗನ್ ಅನ್ನು ಬರೆಯಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ, ಪರಿಶೀಲಿಸಿದ ಅಕೌಂಟ್‌ ಹ್ಯಾಂಡಲ್‌ ಬಳಕೆದಾರ ವಾಸಿಮ್ ಆರ್. ಖಾನ್ ಈ ಫೋಟೋವನ್ನು ಹಂಚಿಕೊಂಡಿದ್ದು “ನನ್ನ ಹೆಮ್ಮೆ ನನ್ನ @PMOIndia ಎಂದು ಬರೆದಿದ್ದಾರೆ.

wrk

ಹಾಗಿದ್ದರೆ ವಾಸಿಮ್ ಆರ್ ಖಾನ್ ತಮ್ಮ ಟ್ವಿಟರ್‌ನಲ್ಲಿ ಹೇಳಿಕೊಂಡಂತೆ ಕತಾರ್‌ನಲ್ಲಿ ನಡೆಯುತ್ತಿರುವ FIFA ವಿಶ್ವಕಪ್‌ನಲ್ಲಿ ಅಭಿಮಾನಿಗಳಿಗೆ ನೀಡಿದ ಉಡುಗೊರೆಯ ಕಿಟ್‌ ಮೇಲೆ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಇರಿಸಲಾಗಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ಅನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, arabi21.com ನಲ್ಲಿ ಪ್ರಕಟವಾದ ವರದಿಯನ್ನು ಕಂಡುಕೊಂಡಿದ್ದೇವೆ. ಈ ವರದಿಯನ್ನು 20 ನವೆಂಬರ್ 2022 ರಂದು ಪೋಸ್ಟ್ ಮಾಡಲಾಗಿದೆ. ವರದಿಯ ಮುಖ್ಯಾಂಶಗಳು “FIFA ವಿಶ್ವಕಪ್-2022 ಕತಾರ್ ಉದ್ಘಾಟನಾ ಸಮಾರಂಭದಲ್ಲಿ ಅಭಿಮಾನಿಗಳಿಗೆ ವಿಶೇಷ ಉಡುಗೊರೆಗಳನ್ನು ನೀಡುವ ಮೂಲಕ ಅಚ್ಚರಿಯನ್ನುಂಟುಮಾಡಿದೆ” ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಲಾಗಿದೆ.

arabic

ಅರೇಬಿಕ್
ಮೂಲ: ಅರಬಿ 21

ಈ ವರದಿಯ ಪ್ರಕಾರ, ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ 2022 ರ ಸಂಘಟಕರು ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಹಾಜರಿದ್ದ ಅಭಿಮಾನಿಗಳನ್ನು ಅಚ್ಚರಿಗೊಳಿಸಲು ಉತ್ಸುಕರಾಗಿದ್ದರು, ದೋಹಾದ ಅಲ್ ಬೈಟ್ ಸ್ಟೇಡಿಯಂನ ಸ್ಟ್ಯಾಂಡ್‌ನಲ್ಲಿ ವಿಶೇಷ ಉಡುಗೊರೆಗಳನ್ನು ನೀಡಿದರು.

ಇಂಟರ್‌ನ್ಯಾಶನಲ್ ಫೆಡರೇಶನ್ ಆಫ್ ಫುಟ್‌ಬಾಲ್ ಅಸೋಸಿಯೇಷನ್ಸ್ (FIFA) ಮತ್ತು ಸಮಿತಿಯ ನಡುವೆ ಸಮನ್ವಯ ಸಾಧಿಸಿವ ಉದ್ದೇಶದಿಂದ ಅಭಿಮಾನಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅವಿಸ್ಮರಣೀಯ ಅನುಭವಗಳನ್ನು ನೀಡಿ ಈ ಜಾಗತಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸವ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎಂದು ಸಮಿತಿ ಹೇಳಿಕೊಂಡಿದೆ.

ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಅಭಿಮಾನಿಗಳಿಗೆ ಸಮಿತಿ ನಿಗದಿಪಡಿಸಿದ ಸಾಂಕೇತಿಕ ಉಡುಗೊರೆಗಳನ್ನು ನೀಡಲಾಗಿದ್ದು ಅದರ ಫೋಟೋಗಳು ಮತ್ತು ವೀಡಿಯೊಗಳನ್ನು ಪ್ರಸಾರ ಮಾಡಲಗಿತ್ತು, ಕತಾರ್, ಕತಾರಿ ಪರಂಪರೆ ಮತ್ತು ಸಾಮಾನ್ಯವಾಗಿ ಅರಬ್ ಸಂಸ್ಕೃತಿಯಲ್ಲಿ ವಿಶ್ವಕಪ್ ಅನ್ನು ವ್ಯಕ್ತಪಡಿಸುವ ಉಡುಗೊರೆಗಳು ಮತ್ತು ಬಹುಮಾನಗಳಿಂದ ತುಂಬಿದ ಬ್ಯಾಗ್‌ಗಳನ್ನು ಉಡುಗೊರೆಯಾಗಿ ಪ್ರತಿಯೊಬ್ಬ ಅಭಿಮಾನಿಗೆ ನೀಡಲಾಯಿತು.

ಹಿರಿಯ ಪತ್ರಕರ್ತ ಮೊಹಮ್ಮದ್ ಅಲ್ಜಾಜರ್ ಅವರು ಟ್ವೀಟ್ ಮಾಡಿದ್ದು, ಅವರು ಈ ಟ್ವೀಟ್‌ನಲ್ಲಿ ಶೀರ್ಷಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದು- ವಿಶ್ವಕಪ್ ಆರಂಭಕ್ಕೂ ಮುನ್ನ ಪ್ರೇಕ್ಷಕರಿಗೆ “ಮಿಸ್ಕ್ ಮತ್ತು ಅಂಬರ್” ಉಡುಗೊರೆ, ಎಂದು ಹಂಚಿಕೊಂಡಿದ್ದಾರೆ.

arabi21.com ಮತ್ತು ಪತ್ರಕರ್ತ ಮೊಹಮ್ಮದ್ ಅಲ್ಜಾಜರ್ ವೈರಲ್ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಅದರಲ್ಲಿ ಎಲ್ಲೂ ಪ್ರಧಾನಿ ಮೋದಿಯವರ ಫೋಟೋ ಇಲ್ಲ. ಕೆಳಗಿನ ಕೊಲಾಜ್‌ನಲ್ಲಿ ನೀವು ಅದನ್ನು ನೋಡಬಹುದು.

freak

ಇದೇ ವೇಳೆ ವೀಕ್ಷಕರೊಬ್ಬರು ಈ ಗಿಫ್ಟ್ ಬ್ಯಾಗ್‌ನ ವಿಡಿಯೋ ಮಾಡಿ ಪ್ರೇಕ್ಷಕರಿಗೆ ಗಿಫ್ಟ್‌ನಲ್ಲಿ ಏನೆಲ್ಲಾ ವಸ್ತುಗಳನ್ನು ನೀಡಲಾಗಿದೆ ಎಂಬುದನ್ನು ತೋರಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ವಾಸಿಂ ಆರ್.ಖಾನ್ ಅವರು ಹಂಚಿಕೊಂಡಿರುವ ಚಿತ್ರ ನಕಲಿ ಎಂಬುದು ವಾಸ್ತವ ಪರಿಶೀಲನೆಯಿಂದ ಸ್ಪಷ್ಟವಾಗಿದೆ. ಪ್ರೇಕ್ಷಕರಿಗೆ ಕತಾರ್ ನಲ್ಲಿ ನೀಡಿದ ಉಡುಗೊರೆ ಬ್ಯಾಗ್‌ನಲ್ಲಿ ಯಾವುದೇ ನಾಯಕರ ಚಿತ್ರ ಇಲ್ಲ, ಅದೇ ಚಿತ್ರವನ್ನು ಎಡಿಟ್ ಮಾಡಿ ಪ್ರಧಾನಿ ಮೋದಿಯವರ ಫೋಟೊವನ್ನು ಹಾಕಿ ಸಬ್ ಕಾ ಸಾಥ್ , ಸಬ್‌ ಕಾ ವಿಕಾಸ್‌ ಎಂದು ಶೀರ್ಷಿಕೆ ಕೊಟ್ಟು, ಕತಾರ್ ನಲ್ಲಿ ನಡೆಯುತ್ತಿರುವ FIFA ವಿಶ್ವಕಪ್‌ನಲ್ಲಿ ಇದನ್ನು ನೀಡಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಗುಜರಾತ್‌ನಲ್ಲಿ BJP ಅಭ್ಯರ್ಥಿಗೆ ಮತದಾರರು ಚಪ್ಪಲಿಹಾರ ಹಾಕಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights