ಧೂಮಪಾನದ ವಿರುದ್ಧ ಕಠಿಣ ಕಾನೂನು ಜಾರಿಗೆ 88% ಭಾರತೀಯ ಬೆಂಬಲ: ಸಮೀಕ್ಷೆ

ಭಾರತದಲ್ಲಿ ತಾಂಬಾಕು ನಿಯಂತ್ರಣಕ್ಕಾಗಿ ಕಠಿಣ ಕಾನೂನುಗಳನ್ನು ಜಾರಿಗೆ ತರಲು 88% ಜನರು ಒಲವು ತೋರಿಸಿದ್ದಾರೆ. ತಾಂಬಾಕು ನಿಯಂತ್ರಿಸಲು ಜನರು ಒಪ್ಪಿದ್ದಾರೆ ಎಂದು ನವದೆಹಲಿ ಮೂಲದ ಕಸ್ಟಮರ್ ವಾಯ್ಸ್ ಎಂದು ಸ್ವಯಂಸೇವಾ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.

ಈ ಸಂಸ್ಥೆಯು ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಯ ಪ್ರಕಾರ, 80% ಕ್ಕೂ ಹೆಚ್ಚು ಭಾರತೀಯ ವಯಸ್ಕ ನಾಗರಿಕರು ಸಿಗರೇಟ್, ಬೀಡಿ ಮತ್ತು ತಂಬಾಕು ಬಳಕೆಯನ್ನು ಬಹಳ ಗಂಭೀರ ಸಮಸ್ಯೆ ಎಂದು ಹೇಳಿದ್ದಾರೆ. ಅಲ್ಲದೆ, ಪ್ರಸ್ತುತ ತಂಬಾಕು ನಿಯಂತ್ರಣ ಕಾನೂನುಗಳನ್ನು ಬಲಪಡಿಸಲು ಶೇ.88 ಮಂದಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದೆ.

18 ವರ್ಷಕ್ಕಿಂತ ಮೇಲ್ಪಟ್ಟ 1,476 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಹತ್ತು ಭಾರತೀಯರಲ್ಲಿ ಸುಮಾರು ಒಂಬತ್ತು ಮಂದಿ ಕಠಿಣ ಕ್ರಮಗಳು ಜಾರಿಯಾಗಬೇಕು ಎಂಬುದರ ಪರವಾಗಿದ್ದಾರೆ. ವಯಸ್ಸು ಮತ್ತು ಲಿಂಗದಂತಹ ಎಲ್ಲಾ ಜನಸಂಖ್ಯಾ ಮತ್ತು ಭೌಗೋಳಿಕ ವಿಭಾಗಗಳಿಂದಲೂ ಈ ಕ್ರಮಕ್ಕೆ ಬೆಂಬಲ ಹೆಚ್ಚಿನ ಸಂಖ್ಯೆಯಲ್ಲಿದೆ. ತಂಬಾಕು ಬಳಕೆದಾರರು ಸಹ ಈ ವಿಚಾರವನ್ನು ಬೆಂಬಲಿಸುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಬೇಕು. ವಿಮಾನ ನಿಲ್ದಾಣಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ವಿಶೇಷ ಧೂಮಪಾನ ಪ್ರದೇಶಗಳ ಮುಚ್ಚಬೇಕು. ಅಲ್ಲದೆ, ಸರಾಗವಾಗಿರುವ ಸಿಗರೇಟ್ ಮತ್ತು ಬೀಡಿಗಳ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಬೇಕು ಎಂಬ ಅಭಿಪ್ರಾಯಗಳು ಕೇಳಿಬಂದಿವೆ.

ತಂಬಾಕು ನಿಯಂತ್ರಣ ಕಾನೂನು COTPA 2003 ರ ತಿದ್ದುಪಡಿ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿದೆ – ಇದು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ ಪ್ರಮುಖ ಹೆಜ್ಜೆಯಾಗಿದೆ ಎಂದು ಕಸ್ಟಮರ್ ವಾಯ್ಸ್ ಸಿಒಒ ಆಶಿಮ್ ಸನ್ಯಾಲ್ ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ತಾಲ್ಲೂಕು ಪಂಚಾಯತಿ ರದ್ದು?: ಮುಂದಿನ ಅಧಿವೇಶನದಲ್ಲಿ ನಿರ್ಧರಿಸಲಾಗುವುದು: ಈಶ್ವರಪ್ಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights