ಫ್ಯಾಕ್ಟ್‌ಚೆಕ್ : ವರದಕ್ಷಿಣೆ ಕೇಳಿದ ವರನಿಗೆ ಮದುವೆ ಮನೆಯಲ್ಲೆ ಚಪ್ಪಲಿ ಸೇವೆ ಮಾಡಿದ ಮಾವ! ವಿಡಿಯೋ ಹಿಂದಿನ ವಾಸ್ತವವೇನು?

ಮದುವೆ ಸಮಾರಂಭವೊಂದರಲ್ಲಿ ಮದುವಿನ ತಂದೆ ವರನಿಗೆ ಚಪ್ಪಲಿಯಿಂದ ಹೊಡೆಯುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ವೈರಲ್ ವಿಡಿಯೋದಲ್ಲಿ ವರ ವರದಕ್ಷಿಣೆಯಾಗಿ ಬೈಕ್​ ಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಇದರಿಂದ ಕುಪಿತನಾದ ವರದ ಮಾವ ವರನಿಗೆ ಮದುವೆಗೆ ಬಂದಿದ್ದ ಸಂಬಂಧಿಕರ ಮುಂದೆಯೇ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಹೊಡೆಯುತ್ತಿರುವ ದೃಶ್ಯ ಪ್ರಸಾರವಾಗುತ್ತಿದೆ.

” ಅಳಿಯನೊಬ್ಬ ವರದಕ್ಷಿಣೆಯಾಗಿ ಬೈಕ್ ಕೇಳಿದ್ದಾನೆ. ಈ ವೇಳೆ ಆತನ ಮಾವ ಎಲ್ಲರೆದುರು ಚಪ್ಪಲಿಯಲ್ಲಿ ಥಳಿಸಿದ್ದಾರೆ. ವರದಕ್ಷಿಣೆಯನ್ನು ಪಿಡುಗನ್ನು ತೊಲಗಿಸಲು ಇದು ಒಳ್ಳೆಯ ಮಾರ್ಗ ” ಎಂವ ಒಕ್ಕಣೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಘಟನೆ ಎಲ್ಲಿ ನಡೆದಿದೆ? ಘಟನೆಯ ವಾಸ್ತವವೇನು ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಅಳಿಯನಿಗೆ ಮಾವ ಚಪ್ಪಲಿಂದ ಹೊಡೆದಿದ್ದಾನೆ ಎನ್ನಲಾದ ವಿಡಿಯೋವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮೂಲ ವಿಡಿಯೋ ಲಭ್ಯವಾಗಿದ್ದು ‘ಮೈಥಿಲಿ ಬಜಾರ್’  ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ 08 ಮೇ 2021 ರಂದು ಅಪ್‌ಲೋಡ್ ಮಾಡಲಾಗಿದೆ.

‘ಮೈಥಿಲಿ ಬಜಾರ್’ ಎಂಬ ಯೂಟ್ಯೂಬ್ ಚಾನೆಲ್‌ನ ಹಾಸ್ಯ, ಮನರಂಜನೆ ಮತ್ತು ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದ್ದು, ಹಲವು ಸ್ಕ್ರಿಪ್ಟೆಡ್ ಮಾಡಿದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಭಾರತದ ಅನೇಕ ಭಾಗಗಳಲ್ಲಿ ಇನ್ನೂ ಪ್ರಚಲಿತದಲ್ಲಿರುವ ಈ ಅನಿಷ್ಟ ಪದ್ದತಿಯ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿಯ ನಾಟಕದ ವೀಡಿಯೊ ಮಾಡಲಾಗಿದೆ ಎಂದು ಟ್ವಿಟರ್​ ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ. ಅದರಲ್ಲಿ ಅಭಿನಯಿಸುವವರೆಲ್ಲರೂ ಕಲಾವಿದರು ಎಂದು ಕೊನೆಯ ಡಿಸ್‌ಕ್ಲೈಮ್‌ನಲ್ಲಿ ವಿವರಣೆ ನೀಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಜಾಗೃತಿ ಉದ್ದೇಶದಿಂದ ಸಾಮಾಜಿಕ ಪಿಡಿಗುಗಳನ್ನು ಹೋಗಲಾಡಿಸಲು ಪ್ರಸಾರ ಮಾಡಿದ ಸ್ಕ್ರಿಪ್ಟೆಡ್‌ ವಿಡಿಯೋಗಳನ್ನು ನೈಜ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

 ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಮುಸ್ಲಿಮರು RSS ಕಾರ್ಯಕರ್ತನ ಹತ್ಯೆ ಮಾಡುತ್ತಿರುವ ದೃಶ್ಯ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights