ಫ್ಯಾಕ್ಟ್‌ಚೆಕ್ : ಸಚಿನ್ ಕಾಲಿಗೆ ನಮಸ್ಕರಿಸಿದರೆ ಧೋನಿ

ಈಗ ಎಲ್ಲೆಲ್ಲೂ IPL ಚುಟುಕು ಕ್ರಿಕೆಟ್‌ನದ್ದೇ ಸದ್ದು, ನೀವು  ಟೀ ಕುಡಿಯಲು ಕ್ಯಾಂಟಿನ್ ಹತ್ತಿರ ಹೋದರು ಐಪಿಎಲ್‌ನದ್ದೇ ಮಾತುಕತೆ. ಅಷ್ಟು ಕ್ರೇಜ್‌ಅನ್ನು ಈ ಚುಟುಕು ಕ್ರಿಕೆಟ್ ಸೃಷ್ಟಿಸಿದೆ. ಕಳೆದ ಏಪ್ರಿಲ್ ನಲ್ಲಿ ಮುಂಬೈ ಇಂಡಿಯನ್ಸ್ (MI) ಮತ್ತು ಚೆನ್ನೈ ಸೂಪ್ ಕಿಂಗ್ಸ್‌ (CSK) ಪಂದ್ಯದ ವೇಳೆ ನಡೆದ ದೃಶ್ಯಾವಳಿಗಳು ಎಂದು ಪ್ರತಿಪಾದಿಸಿ ಧೋನಿ ಮತ್ತು ಸಚಿನ್  ಫೋಟೊವನ್ನು ಹಂಚಿಕೊಳ್ಳಲಾಗುತ್ತಿದೆ.

https://twitter.com/guptaravinder71/status/1656205513108127745?s=46&t=kIszbQH_arRSG8kPbuGeZw

ಮಹೇಂದ್ರ ಸಿಂಗ್ ಧೋನಿ ಭಾರತದ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ಕಾಲಿಗೆ ನಮಸ್ಕರಿಸುತ್ತಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ  ಹಂಚಿಕೊಳ್ಳಲಾಗುತ್ತಿದೆ. ಇದು ಭಾರತದ ಸಂಸ್ಕೃತಿ ಎಂದು ಉಲ್ಲೇಖಿಸಿ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಇದೇ ಚಿತ್ರದೊಂದಿಗೆ ಕೆಲವು ಪೋಸ್ಟ್‌ಗಳನ್ನು ಇಲ್ಲಿ  ಮತ್ತು ಇಲ್ಲಿ ನೋಡಬಹುದು. “ಇದು ಭಾರತದ ಸಂಸ್ಕೃತಿ , ಜೈ ಹಿಂದ್ ಜಯ ಭಾರತ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಏಪ್ರಿಲ್ 8, 2023 ರಂದು ನ್ಯೂಸ್ 18 ಪ್ರಕಟಿಸಿದ ಲೇಖನವೊಂದು ಲಭ್ಯವಾಗಿದೆ. ಮೂಲ ಚಿತ್ರದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಎಂ.ಎಸ್. ಧೋನಿ ಪಿಚ್ ಕುರಿತು ಚರ್ಚಿಸುತ್ತಿದ್ದಾರೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.

https://twitter.com/IPL/status/1644698129969868800?ref_src=twsrc%5Etfw%7Ctwcamp%5Etweetembed%7Ctwterm%5E1644698129969868800%7Ctwgr%5E38403b91f9c2efdd80e2bfe56db2935d14c303d7%7Ctwcon%5Es1_&ref_url=https%3A%2F%2Fwww.indiatoday.in%2Ffact-check%2Fstory%2Fms-dhoni-photoshopped-image-ms-dhoni-sachin-tendulkar-feet-2377496-2023-05-10

“ಐಪಿಎಲ್ 2023: ಎಂಎಸ್ ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಹ್ಯಾವ್ ಎ ಚಾಟ್ ಆಫ್ ಎಹೆಡ್ ಆಫ್ ಎಂಐ ವರ್ಸಸ್ ಸಿಎಸ್‌ಕೆ ಟಾಸ್”. ದಂತಕಥೆಗಳು ಪಿಚ್ ಅನ್ನು ನೋಡುತ್ತಾ ನಗುತ್ತಿದ್ದ ಕ್ಷಣವನ್ನು ಹಂಚಿಕೊಂಡಾಗ ಸಚಿನ್ ತೆಂಡೂಲ್ಕರ್ ಎಂಎಸ್ ಧೋನಿ ಬಳಿಗೆ ಹೋದರು ಎಂದು ಉಲ್ಲೇಖಿಸಲಾಗಿದೆ. ಲೇಖನದಲ್ಲಿ ಧೋನಿ ಸಚಿನ್ ಪಾದ ಮುಟ್ಟಿದ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಮೂಲ ಚಿತ್ರದಲ್ಲಿ ಸಚಿನ್ ಮತ್ತು ಧೋನಿ ಇಬ್ಬರೂ ನೆಲದ ಮೇಲೆ ನಿಂತಿರುವುದನ್ನು ಕಾಣಬಹುದು. ಈ ಫೋಟೋದಲ್ಲಿರುವ ಧೋನಿ ಚಿತ್ರವನ್ನು ಫೋಟೋಶಾಪ್ ಮಾಡಲಾಗಿದ್ದು, ಧೋನಿ ಭಾರತದ ಸಂಸ್ಕೃತಿಯನ್ನು ಬಿಂಬಿಸಲು ಸಚಿನ್ ಅವರ ಪಾದಗಳನ್ನು ಮುಟ್ಟುತ್ತಾರೆ ಎಂದು ಪ್ರತಿಪಾದಿಸಲು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

 

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಸಚಿನ್ ಮತ್ತು ಧೋನಿ ಫೋಟೊವನ್ನು ಎಡಿಟ್ ಮಾಡುವ ಮೂಲಕ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಯೂಟರ್ನ್

 ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮುಸ್ಲಿಮರು RSS ಕಾರ್ಯಕರ್ತನ ಹತ್ಯೆ ಮಾಡುತ್ತಿರುವ ದೃಶ್ಯ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್ : ಸಚಿನ್ ಕಾಲಿಗೆ ನಮಸ್ಕರಿಸಿದರೆ ಧೋನಿ

  • May 12, 2023 at 6:03 pm
    Permalink

    Sachin is biggest name in the cricket and someone including Dhoni give respect to such a legend there is no wrong. But in India touching feet giving respect to elderly people. It’s a Hindu tradition where as Muslims and Christians won’t follow such tradition.

    Reply

Leave a Reply

Your email address will not be published.

Verified by MonsterInsights