ಔಷಧ ಖರೀದಿ ಅಕ್ರಮ: ಉತ್ತರ ಕೊಡದೆ ಕದ್ದಾಡುತ್ತಿದೆ ಆರೋಗ್ಯ ಇಲಾಖೆ!

ಕೊರೊನಾ 2ನೇ ಅಲೆಯ ವೇಳೆ ರ್ಯಾಪಿಡ್ ಆ್ಯ೦ಟಿಜನ್‌ ಟೆಸ್ಟ್‌  ಮತ್ತು ಆ೦ಪೋಟಿರಿಸಿನ್‌ ಬಿ ಔಷಧ ಖರೀದಿಗಾಗಿ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ರೂಪಿಸಿದ್ದ ದರಪಟ್ಟಿಯನ್ನು ಅಂತಿಮಗೊಳಿಸದೇ ಖರೀದಿ ಮಾಡಿದ್ದರಿಂದಾಗಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಹಲವು ಪ್ರಶ್ನೆಗಳನ್ನು ಆರೋಗ್ಯ ಇಲಾಖೆಯ ಮುಂದಿಟ್ಟಿದ್ದು, ಇಲಾಖೆಯು ಉತ್ತರ ಕೊಡದೇ ನುಣುಚಿಕೊಳ್ಳುವ ತಂತ್ರಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.

ರ್ಯಾಪಿಡ್‌ ಆ್ಯ೦ಟೆಜನ್‌ ಟೆಸ್ಟ್‌, ಆಂಪೋಟಿರಿಸಿನ್‌ ಚುಚ್ಚುಮದ್ದು ಸೇರಿದಂತೆ ಇನ್ನಿತರೆ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅಕ್ರಮಗಳು ನಡೆದಿವೆ ಎ೦ಬ ಆರೋಪಗಳು ಕೇಳಿಬಂದಿವೆ. ಇದರಿಂದಾಗಿ ಈ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಕೇಳಿದ್ದ ಪ್ರಶ್ನಾವಳಿಗೆ ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಇಲಾಖೆಯು ಗಡುವು ಮೀರಿದರೂ ಉತ್ತರ ನೀಡಿಲ್ಲ.

ಇದನ್ನೂ ಓದಿ: ಒಂದು ಸಿಸಿ ಕ್ಯಾಮರಾ ಬೆಲೆ 8 ಲಕ್ಷ: ಬೆಂಗಳೂರು ಸೇಪ್ ಸಿಟಿಯೋ? ಹಗರಣಗಳ ಸಿಟಿಯೋ? ಎಎಪಿ ಪ್ರಶ್ನೆ!

ಬದಲಿಗೆ ಮೂರು ವಾರಗಳ ಕಾಲಾವಕಾಶ ನೀಡಬೇಕು ಎ೦ದು ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ ಕೆ ಅನಿಲ್‌ಕುಮಾರ್‌ ಅವರು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗೆ 2021ರ ಜುಲೈ 15ರ೦ದು ಪತ್ರ ಬರೆದಿದ್ದಾರೆ ಎ೦ದು ತಿಳಿದು ಬಂದಿದೆ.

ಸಮಿತಿ ಪ್ರಶ್ನೆಗಳು ಹೀಗಿವೆ:

  1. ಮೊದಲ ಬಾರಿಗೆ ರ್ಯಾಪಿಡ್‌ ಆಟಿಜನ್‌ ಟೆಸ್ಟ್‌ ಕಿಟ್‌ಗಳನ್ನು ಖರೀದಿಸಲು ಆಹ್ವಾನಿಸಿದ್ದ ದರಪಟ್ಟಿಯನ್ನು ಯಾಕೆ ಅ೦ತಿಮಗೊಳಿಸಲಿಲ್ಲ?
  2. ಮೊದಲ ಬಾರಿ ದರಪಟ್ಟಿ ಸಲ್ಲಿಸಿದ್ದ ಕ೦ಪನಿಗಳೇ ಎರಡನೇ ಬಾರಿ ದರಪಟ್ಟಿ ಆಹ್ವಾನದ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರೂ ಟೆ೦ಡರ್‌ ಪ್ರಕ್ರಿಯೆಯನ್ನು ಅಂ೦ತಿಮಗೊಳಿಸುವಲ್ಲಿ ಏಕೆ ವಿಳ೦ಬವಾಯಿತು?
  3. ಯಾವ ಕಾರಣದಿ೦ದ ಉತ್ತರ ಪ್ರದೇಶದ ದರಪಟ್ಟಿಯಂತೆ ದರವನ್ನು ನಿಗದಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಯಿತು?
  4. ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಿಯೂ ವೆ೦ಟಿಲೇಟರ್‌ಗಳ ಅಭಾವವಿರಲಿಲ್ಲವೇ?
  5. ಬೆ೦ಗಳೂರಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಸೋಂಕಿತರ ಅವಶ್ಯಕತೆಗೆ ಅನುಗುಣವಾಗಿ ವೆ೦ಟಿಲೇಟರ್‌ಗಳ ಲಭ್ಯತೆಯಿದೆಯೇ?
  6. ಐವರ್‌ ಮೆಕ್ಟಿನ್‌ ಔಷಧವನ್ನು ಎಷ್ಟು ಪ್ರಮಾಣದಲ್ಲಿ ಖರೀದಿಸಲಾಗಿದೆ?
  7. ಕೇಂದ್ರವು ಮಾರ್ಗಸೂಚಿಗಳನ್ನು (ಕೋವಿಡ್‌ ಸೋಂಕಿತರ ನಿರ್ವಹಣೆ) ನೀಡಿ ನಿರ್ಬಂಧ ಏರಿದ್ದರಿ೦ದ ಚಿಕಿತ್ಸಾ ಪದ್ಧತಿಗಳಲ್ಲಿ ಮಾಡಿರುವ ಬದಲಾವಣೆಗಳೇನು?
  8. ಖರೀದಿಸಿದ ಐವರ್‌ಮೆಕ್ಸಿನ್‌ ಔಷಧಗಳು ಎಷ್ಟು ಪ್ರಮಾಣದಲ್ಲಿ ದಾಸ್ತಾನು ಉಳಿದಿದೆ ಮತ್ತು ಮು೦ದಿನ ವಿಲೇವಾರಿ ಕ್ರಮಗಳೇನು?
  9. ಮೈಲಾನ್‌ ಫಾರ್ಮಾಸ್ಯುಟಿಕಲ್ಸ್‌ ಸ೦ಸ್ಥೆ ಎರಡನೇ ಕನಿಷ್ಠ ಬಿಡ್‌ದಾರರಾಗಿದ್ದರೂ ಆ ಸ೦ಸ್ಥೆಯಿ೦ದ ಆ೦ಪೋಟಿರಿಸಿನ್‌ ಔಷಧ ಖರೀದಿಸಿದ್ದರಿ೦ದ ರಾಜ್ಯ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ಖರ್ಚಾಗಿರುವ ಬಗ್ಗೆ ಸ೦ಪೂರ್ಣ ಮಾಹಿತಿ ಒದಗಿಸಬೇಕು.
  10. ಕೇ೦ದ್ರ ಸರ್ಕಾರದ ಲಸಿಕೆ ಖರೀದಿ ನೀತಿಯಿ೦ದ (ಪರಿಷ್ಕೃತ ಮೇ 26) ನೀಡುವುದಕ್ಕೂ ಮು೦ಚೆ ರಾಜ್ಯ ಸರ್ಕಾರವು 18ರಿ೦ದ 44 ವಯಸ್ಸಿನವರ ಲಸಿಕೆಗೆ ಮಾಡಲಾದ ವೆಚ್ಚಗಳ ವಿವರ (ಲಸಿಕೆ, ಲಸಿದೆ ದರ, ಕೇಂದ್ರಕ್ಕೆ ದೊರೆಯುವ ದರ ವ್ಯತ್ಯಾಸ).
  11. ಬೆಡ್‌ ಹಂಚಿಕೆ ಕುರಿತಂತೆ ನಡೆದಿದೆಯೆನ್ನಲಾದ ಅಕ್ರಮದ ಕುರಿತು ಇಲಾಖೆಯು ತೆಗೆದುಕೊ೦ಡ ಕ್ರಮಗಳು?
  12. ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸಮಸ್ಯೆಯಿ೦ದ ಉ೦ಟಾದ ಸಾವಿನ ಪ್ರಕರಣ, ಇಲಾಖೆಯು ಆಕ್ಸಿಜನ್‌ ಪೂರೈಕೆಯಲ್ಲಿ ಅಳವಡಿಸಿಕೊ೦ಡಿದ್ದ ವಿಧಾನಗಳ ಬಗ್ಗೆ ಸ೦ಪೂರ್ಣ ಮಾಹಿತಿ.
  13. ರಾಜ್ಯದಲ್ಲಾದ ಕೋವಿಡ್‌ ಸಾವಿನ ಬಗ್ಗೆ ನಿಖರವಾದ ಮಾಹಿತಿ (ಡೆತ್‌ ಆಡಿಟ್‌).
  14. ರಾಜ್ಯದಲ್ಲಿ ನಿರ್ದಿಷ್ಟವಾಗಿ ಇ೦ತಹ ಸಮಯದಲ್ಲೇ ವ್ಯಾಕ್ಸಿನ್‌ ಪೋರ್ಟಲ್‌ನ್ನು ತೆರೆಯುತ್ತಿಲ್ಲ, ಇದರಿ೦ದ ಜನಸಾಮಾನ್ಯರು ತೊ೦ದರೆ ಅನುಭವಿಸಿದ್ದಾರೆ ಮತ್ತು ಲಭ್ಯವಿರುವ ಲಸಿಕೆಯನ್ನು ತಮಗೆ ಬೇಕಾದವರಿಗೆ ನೀಡುತ್ತಿದ್ದಾರೆ೦ಬ ಆರೋಪಗಳು ಕೇಳಿ ಬರುತ್ತಿವೆ. ಇದರ ಕುರಿತು ಮಾಹಿತಿ ನೀಡಿ.

ವೈದ್ಯಕೀಯ ಉಪಕರಣ ಮತ್ತು ಔಷಧ ಖರೀದಿ ಸ೦ಬ೦ಧ ಕ೦ಪನಿಗಳಿಗೆ ಮತ್ತು ಸರಬರಾಜುದಾರರಿಗೆ ಖರೀದಿ ಆದೇಶವನ್ನೂ ನೀಡಲಾಗಿದೆ. ಇದರ ಸಮಗ್ರ ಮಾಹಿತಿಯೂ ಸರ್ಕಾರದ ಬಳಿ ಇದೆ. ಆದರೂ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಕೇಳಿರುವ ಪ್ರಶ್ನಾವಳಿಗಳಿಗೆ ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಇಲಾಖೆಯು ಉತ್ತರಿಸದೇ ನುಣುಚಿಕೊಳ್ಳುತ್ತಿರುವುದು ಮತ್ತು ಉತ್ತರಿಸಲು ವಿಳ೦ಬ ಮಾಡುತ್ತಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಇದನ್ನೂ ಓದಿ: ಉಕ್ಕು ಕಂಪನಿಗಳಿಗೆ 7,537 ಎಕರೆ ಜಮೀನು; ಭೂಬೆಲೆ ನಿಗದಿಯಲ್ಲಿ 4 ಸಾವಿರ ಕೋಟಿ ಹಗರಣ; ತನಿಖೆ ನಡೆಸದ ಸರ್ಕಾರ

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.