Fact check : ಝೀ ನ್ಯೂಸ್ 2015 ರ ಕಥೆಗೆ ಸುಳ್ಳು ಕೋಮು ಬಣ್ಣ ಬಡಿದು ಪ್ರಕಟ…

ಝೀ ನ್ಯೂಸ್ 2015 ರ ಕಥೆಯನ್ನು ಸುಳ್ಳು ಕೋಮು ಕೋನದಿಂದ ‘ಮುಸ್ಲಿಮೇತರರಿಗೆ ಮಾನವ ಮಲ ಬಡಿಸಿದ್ದಾರೆಂದು’ ಪ್ರಕಟಿಸಲಾಗಿದೆ.

ಏಪ್ರಿಲ್ 24ರಂದು ಝೀ ನ್ಯೂಸ್‍ ಒಂದು ವರದಿಯನ್ನು ಪ್ರಕಟಿಸಿತು “ಕಬಾಬ್‍ಗೆ ದೇಹದ ತ್ಯಾಜ್ಯವನ್ನು ಸೇರಿಸಿ ನೀಡಲಾಗಿದೆ” ಈ ವರದಿಯನ್ನು ಈಗ ನವೀಕರಿಸಲಾಗಿದೆ.

ಬ್ರಿಟನ್ನಿನ ಇಬ್ಬರು ಯುವಕರಾದ ಮೊಹಮ್ಮದ್‍ ಅಬ್ದುಲ್ ಬಾಸಿತ್ ಮತ್ತು ಅಮ್ಜದ್ ಭಟ್ಟಿ ಮುಸ್ಲಿಮೇತರ ಗ್ರಾಹಕರಿಗೆ ಮಾನವ ದೈಹಿಕ ತ್ಯಾಜ್ಯವನ್ನು ಬಡಿಸುತ್ತಾರೆ.”ಎಂದಿತ್ತು. ಈ ಲೇಖನವು ಫೇಸ್‍ಬುಕ್‍ನಲ್ಲಿ 12,000 ಶೇರುಗಳನ್ನು ಮತ್ತು 14,000 ಲೈಕ್‍ಗಳನ್ನು ಸ್ವೀಕರಿಸಿದೆ. ಶೇರ್ ಮಾಡುವಾಗ, ಅದರ ಅಡಿ ಬರಹದಲ್ಲಿ “ಅವರು ಮುಸ್ಲಿಮೇತರ ಜನರೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದರು” ಎಂದು ಬರೆದುಕೊಳ್ಳಲಾಗಿತ್ತು. ಈಗ ಸತ್ಯ ಹೊರಬಂದಿದೆ.

ಲೇಖನದಲ್ಲಿ ಮತ್ತಷ್ಟು ಹೀಗಿದೆ, “ಇಲ್ಲಿ [ಬ್ರಿಟನ್‍ನಲ್ಲಿ] ಇಬ್ಬರು ರೆಸ್ಟೋರೆಂಟ್ ಮಾಲೀಕರು ಇದ್ದರು – ಮೊಹಮ್ಮದ್‍ಅಬ್ದುಲ್ ಬಸಿತ್ ಮತ್ತು ಅಮ್ಜದ್ ಭಟ್ಟಿ. ವರದಿಗಳ ಪ್ರಕಾರ, ಅವರು ಆಹಾರದಲ್ಲಿ ಮಾನವ ಮಲವನ್ನು ಬೆರೆಸಿ ಮುಸ್ಲಿಮೇತರ ಗ್ರಾಹಕರಿಗೆ ನೀಡುತ್ತಿದ್ದರು. ನಾಟಿಂಗ್ಹಾಮ್‍ನಲ್ಲಿ ಇವರಿಬ್ಬರು ತಮ್ಮ ರೆಸ್ಟೋರೆಂಟ್‍ನ್ನು ಬಹಳ ಸಮಯದಿಂದ ನಡೆಸುತ್ತಿದ್ದರು. ಘಟನೆ ನಡೆದಿದ್ದು ಯಾವಾಗ ಎಂದು ಕಥೆಯಲ್ಲಿ ವಿವರವಿಲ್ಲ.

ಮೂಲ ಝೀ ನ್ಯೂಸ್ ಲೇಖನ ಇನ್ನೂ “msn.com” ನಲ್ಲಿ ಲಭ್ಯವಿದೆ. ಅದರ ಆರ್ಕೈವ್ ಲಿಂಕ್‍ನ್ನುಇಲ್ಲಿ ವೀಕ್ಷಿಸಬಹುದು. ಲೇಖನದ ಆಯ್ದ ಭಾಗದ ಸ್ಕ್ರೀನ್‍ ಶಾಟ್ (ಕೆಳಗೆ ಪೋಸ್ಟ್ ಮಾಡಲಾಗಿದೆ) ಝೀ ನ್ಯೂಸ್‍ ನಲ್ಲಿ ರೆಸ್ಟೋರೆಂಟ್‍ ಎರಡು ರೀತಿಯ ತಿನಿಸುಗಳನ್ನು ತಯಾರಿಸಿ, ಮುಸ್ಲಿಮೇತರ ಧರ್ಮದ ಜನರಿಗೆ ಮಾನವ ಮಲ ಬೆರೆಸಿದ ಆಹಾರವನ್ನು ನೀಡಲಾಗುತ್ತಿತ್ತು ಎಂದು ಹೇಳುತ್ತದೆ.

Zee Hindustan Peddles 2015 News As Recent, Adds False Communal Angle

ಝೀ ನ್ಯೂಸ್ ಈಗ ತನ್ನ ವರದಿಯನ್ನು ನವೀಕರಿಸಿದ್ದು, ಇಂತಹ ಆಹಾರ ಮಾಲಿನ್ಯದ ಪ್ರಕರಣಗಳು ಭಾರತದಲ್ಲಿ ಮಾತ್ರವಲ್ಲದೆ ಇಂಗ್ಲೆಂಡ್ನಲ್ಲೂ ವರದಿಯಾಗಿದೆ ಎಂದು ಹೇಳಿದೆ. ಲೇಖನದ ಇನ್ನೂ “ತಬ್ಲೀಘಿ ಜಮಾತ್ ಮನಸ್ಥಿತಿ” ಎಂದು ಹೇಳಲಾಗುತ್ತಿದೆ.

ಝೀ ನ್ಯೂಸ್‍ ಕಥೆಯ ಮೂಲ – ವೈರಲ್ ಸಂದೇಶ

ಝೀ ನ್ಯೂಸ್‍ನ ಕಥೆ ಏಪ್ರಿಲ್ 21ರಿಂದ ವೈರಲ್‍ ಆಗಿರುವ ಸಂದೇಶವನ್ನು ಆಧರಿಸಿದೆ. ಈ ಸಂದೇಶವು ಯುಕೆ ಮೂಲ ದಡೈಲಿ ಮೇಲ್‍ನ ಲಿಂಕ್‍ನ್ನು ಹೊಂದಿದೆ, ಆದರೆ ಅದು ಝೀ ನ್ಯೂಸ್‍ ಕಥೆಯ ಭಾಗವಲ್ಲ. ಕಥೆಯು ಒಂದು ಮೂಲವನ್ನು ಅಥವಾ ಘಟನೆ ಸಂಭವಿಸಿದ ದಿನಾಂಕವನ್ನುಇದರಲ್ಲಿ ಹೇಳಿಲ್ಲ. ಡೈಲಿ ಮೇಲ್ ವರದಿ ಸೆಪ್ಟೆಂಬರ್ 2015ರದು.

ಫ್ಯಾಕ್ಟ್-ಚೆಕ್
ಈ ವರದಿಯಲ್ಲಿ, ನಾವು ಎರಡು ಹೇಳಿಕೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸುತ್ತೇವೆ –
1. ವ್ಯಕ್ತಿಯ ಧರ್ಮದ ಆಧಾರದ ಮೇಲೆ ಆಹಾರವನ್ನು ಕಲುಷಿತಗೊಳಿಸಲಾಗಿದೆಯೇ?
2. ಮಾನವ ಮಲವನ್ನು ಉದ್ದೇಶ ಪೂರ್ವಕವಾಗಿ ಆಹಾರಕ್ಕೆ ಸೇರಿಸಲಾಗಿದೆಯೇ?

ರೆಸ್ಟೋರೆಂಟ್ ಮಾಲೀಕರು ಮುಸ್ಲಿಮೇತರ ಗ್ರಾಹಕರಿಗೆ ಆರೋಗ್ಯಕರವಲ್ಲದ ಆಹಾರವನ್ನು ನೀಡುತ್ತಿದ್ದರು ಎಂದು ಡೈಲಿ ಮೇಲ್ ವರದಿಯಲ್ಲಿ ಹೇಳಿಲ್ಲ. ಬಿಬಿಸಿ ಮತ್ತು ದಿ ಗಾರ್ಡಿಯನ್ ಸಹ 2015ರಲ್ಲಿ ಈ ಘಟನೆಯನ್ನು ವರದಿ ಮಾಡಿವೆ ಎಂದು ನಾವು ಕಂಡುಕೊಂಡಿದ್ದೇವೆ. ಈ ವರದಿಗಳು ಧರ್ಮದಕೋನವನ್ನು ಸಹ ಹೊಂದಿಲ್ಲ. ಆದ್ದರಿಂದ, ಮೊದಲ ಹೇಳಿಕೆ ಸುಳ್ಳು.

ಈಗ ಎರಡನೇ ಹೇಳಿಕೆಯ ಬಗ್ಗೆ ಮಾತನಾಡೋಣ. ಡೈಲಿ ಮೇಲ್‍ನಲ್ಲಿನ ವರದಿಯ ಪ್ರಕಾರ, ಆಹಾರವು ನಿಜವಾಗಿಯೂ ಮಾನವ ಮಲದಿಂದ ಕಲುಷಿತಗೊಂಡಿದೆ, ಆದರೆ ಇದು ಉದ್ದೇಶಪೂರ್ವಕವಾಗಿರಲಿಲ್ಲ. ಇದಕ್ಕೆ “ಸಿಬ್ಬಂದಿ ಕೈ ತೊಳೆಯುವ ಅಸಮರ್ಪಕ ತಂತ್ರಗಳೇ” ಕಾರಣ. “ನಾಟಿಂಗ್ಹಾಮ್‍ನಲ್ಲಿ ಖೈಬರ್ ಪಾಸ್‍ಟೇಕ್‍  ಮೊಹಮ್ಮದ್‍ಅಬ್ದುಲ್ ಬಾಸಿತ್ ಮತ್ತು ಅಮ್ಜದ್  ಭಟ್ಟಿ ಇವರು ಇ.ಕೋಲಿಯ ಸೋಂಕಿಗೆ ಕಾರಣವಾಗಿದ್ದು, ಇಚರಿಂದ 142 ಗ್ರಾಹಕರು ತೀವ್ರ  ಅನಾರೋಗ್ಯಕ್ಕೆ ಒಳಗಾಗಿದ್ದಾರೆ” ಎಂದು ವರದಿ ಹೇಳುತ್ತದೆ. ಇವರಿಬ್ಬರಿಗೆ ನ್ಯಾಯಮೂರ್ತಿ ಜೆರೆಮಿ ಲೀ, ನಾಲ್ಕು ತಿಂಗಳ ಜೈಲು ಶಿಕ್ಷೆ ಮತ್ತು25 ಸಾವಿರ ದಂಡ ಹಾಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ. “ಹೊಲಸು ಹರಡದಂತೆ ಅಪಾಯವನ್ನು ಕಡಿಮೆ ಮಾಡಲು ಸರಿಯಾಗಿ ಸೋಪ್ ಮತ್ತು ಶುದ್ಧ ನೀರಿನಿಂದ ಸ್ವಚ್ಛವಾಗಿ ಕೈ ತೊಳೆಯದೆ ಇರುವುದು ಇದಕ್ಕೆ ಕಾರಣ ಎಂದು ಹೇಳಲಾಗಿದೆ.”

ದಿ ಗಾರ್ಡಿಯನ್ ಪ್ರಕಟಿಸಿದ ವರದಿಯಲ್ಲಿ, ” ಶೌಚಾಲಯವನ್ನು ಬಳಸಿದ ಸಿಬ್ಬಂದಿ ಕೈ ತೊಳೆಯದ ನಂತರ 100 ಕ್ಕೂ ಹೆಚ್ಚು ಟೇಕ್ ಅವೇ ಗ್ರಾಹಕರು ಎರಡು ತಿಂಗಳವರೆಗೆ ಇ ಕೋಲಿಯ ಅಪರೂಪದ ತಳಿಯಿಂದ ಉಂಟಾಗುವ ತೊಂದರೆಯಿಂದ ಬಳಲುತ್ತಿದ್ದರು.” ಎಂದು ನ್ಯಾಯಾಲಯವು ಹೇಳಿದೆ. ವರದಿಯು ಪ್ರಾಸಿಕ್ಯೂಟರ್ ಹೇಳಿದ್ದನ್ನು ಉಲ್ಲೇಖಿಸಿದೆ – “ಟೇಕ್‍ ಅವೇನಲ್ಲಿ ಆಹಾರವನ್ನು ನಿರ್ವಹಿಸುವ 12 ಸಿಬ್ಬಂದಿಗಳಲ್ಲಿ ಒಂಬತ್ತು ಮಂದಿ ಬ್ಯಾಕ್ಟೀರಿಯಾದ ಕುರುಹುಗಳನ್ನು ಹೊಂದಿದ್ದಾರೆಂದು ಕಂಡುಬಂದಿದೆ ಮತ್ತು ಪ್ರತಿವಾದಿಯ ಮಗಳು ಒಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದರು.”

ನಾಟಿಂಗ್ಹ್ಯಾಮ್ ಸಿಟಿ ಕೌನ್ಸಿನ ಆಹಾರ, ಆರೋಗ್ಯ ಮತ್ತು ಸುರಕ್ಷತಾ ತಂಡದಿಂದ ಪಾಲ್‍ಡೇಲ್ಸ್‍ ಅವರ ಹೇಳಿಕೆಯನ್ನು ಬಿಬಿಸಿಯ ವರದಿ ಹೊಂದಿದೆ – “ಕೆಲವು ಕಾರ್ಮಿಕರ ಕೈ ತೊಳೆಯುವ ಪದ್ಧತಿಗಳು ಸಂಪೂರ್ಣವಾಗಿ ತಪ್ಪಾಗಿದೆ ಮತ್ತು ಇದರಿಂದ ಆಹಾರವು ಕಲುಷಿತಗೊಳ್ಳಲು ಕಾರಣವಾಯಿತು ಎಂಬುದು ಸ್ಪಷ್ಟವಾಗಿದೆ.” ರೆಸ್ಟೋರೆಂಟ್ ಮಾಲೀಕರನ್ನು 12 ತಿಂಗಳು ಅಮಾನತುಗೊಳಿಸಲು ನ್ಯಾಯಾಲಯ ಆದೇಶಿಸಿದೆ. ಆದ್ದರಿಂದ, ಮಾನವ ಮಲವನ್ನು ಉದ್ದೇಶಪೂರ್ವಕವಾಗಿ ಆಹಾರಕ್ಕೆ ಸೇರಿಸಲಾಗಿದೆ ಎಂಬ ಹೇಳಿಕೆಯೂ ಸುಳ್ಳು.

‘ದಿ ಖೈಬರ್ ಪಾಸ್’ ರೆಸ್ಟೋರೆಂಟ್ ಈಗ ಮತ್ತೆಸಕ್ರಿಯವಾಗಿದೆ.ಆದರೂ, ಇದುtripadvisor.comನಲ್ಲಿಉತ್ತಮ ವಿಮರ್ಶೆಗಳನ್ನು ಪಡೆದಿಲ್ಲ್ಲ. ಹಲವಾರುಜನರು ಸ್ವಚ್ಛತೆ ಇಲ್ಲದಿರುವ ಬಗ್ಗೆ ದೂರಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಝೀ ನ್ಯೂಸ್ 2015ರ ನಿಜವಾದ ಘಟನೆಯ ತಮ್ಮದೇ ಒಂದು ತಯಾರಾದ ಆವೃತ್ತಿಯನ್ನು ಪ್ರಕಟಿಸಿತು. ಬ್ರಿಟನ್‍ನ ಇಬ್ಬರು ರೆಸ್ಟೋರೆಂಟ್ ಮಾಲೀಕರು ಮಾನವ ಮಲದಿಂದ ಕಲುಷಿತಗೊಂಡ ಆಹಾರವನ್ನು ಪೂರೈಸುವಲ್ಲಿ ತಪ್ಪಿತಸ್ಥರೆಂದು ಕಂಡುಬಂದರೂ, ಇದು ಧಾರ್ಮಿಕವಾಗಿ ಪ್ರೇರಿತವಾಗಿಲ್ಲ ಅಥವಾ ಹಾಗೆ ಆಗಿದ್ದು ಉದ್ದೇಶ ಪೂರ್ವಕವಾಗಿರಲಿಲ್ಲ. ಮೊದಲೇ ಹೇಳಿದಂತೆ, ಶೌಚಾಲಯವನ್ನು ಬಳಸಿದ ನಂತರ ರೆಸ್ಟೋರೆಂಟ್ ಸಿಬ್ಬಂದಿ ಸರಿಯಾಗಿ ಕೈ ತೊಳೆಯಲಿಲ್ಲ ಎಂದು ನ್ಯಾಯಾಲಯವು ಕಂಡುಹಿಡಿದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights