ಮೋದಿ ಮಹತ್ವದ ಭಾಷಣ : ಆರೋಗ್ಯ ಸೇತು ಆಪ್ ಡೌನ್ಲೋಡ್ ಗೆ ಸೂಚನೆ

ದೇಶವನ್ನುದ್ದೇಶಿಸಿ ಲಾಕ್ ಡೌನ್ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಮೇ 3 ನೇ ತಾರೀಖುವರೆಗೂ  ಲಾಕ್ ಡೌನ್ ಮುಂದುವರಿಸುವುದಾಗಿ ಹೇಳಿದ್ದಾರೆ. ಮುಂದಿನ ಒಂದು ವಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಕೊರೊನಾ ಸೋಂಕಿತರಿಗೆ 15-16ಸಾವಿರ ಬೆಡ್ ಗಳು ಬೇಕು. ಕೊರೊನಾ ಆಸ್ಪತ್ರೆಗಳ ನಿರ್ಮಾಣ ಕಾರ್ಯ ಆಗಿದೆ. ಕೊರೊನಾ ತಡೆಗೆ ಆರೋಗ್ಯ ಸೇತು ಮೊಬೈಲ್ ಆಪ್ ಇದೆ. ಇದನ್ನು ಡೌನ್ ಲೋಡ್ ಮಾಡಿ. ಬಳಕೆ ಮಾಡಿ. ಇದರಲ್ಲಿ ಎಲ್ಲಾ ರೀತಿಯ ಮಾಹಿತಿ ಲಾಕ್ ಡೌನ್ ಬಗ್ಗೆ ಸಿಗುತ್ತದೆ ಎಂದು ಸೂಚಿಸಿದ್ದಾರೆ.

ವ್ಯವಸಾಯದಲ್ಲಿ ತಮ್ಮೊಂದಿಗೆ ಕೆಲಸ ಮಾಡುವವರ ಬಗ್ಗೆ ಕಾಳಜಿ ವಹಿಸಿ. ಕೆಲಸದಿಂದ ಯಾರನ್ನೂ ತೆಗೆದು ಹಾಕಬೇಡಿ. ವೈದ್ಯರನ್ನು, ಪೌರ ಕಾರ್ಮಿಕರನ್ನು, ಪೊಲೀಸರನ್ನು, ಮಾದ್ಯಮದವರನ್ನು, ವಾರೆಂಟೆಯರ್ಸ್ ನ್ನು ಗೌರವಿಸಿ. ಸಾಧ್ಯವಾದಷ್ಟು ಬಡವರಿಗೆ ಸಹಾಯ ಮಾಡಿ ಎಂದು ಮೋದಿ ಮನವಿ ಮಾಡಿಕೊಂಡರು.

ಹೊಸ ಹಾಟ್ ಸ್ಪಾಟ್ ಗಳನ್ನು  ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೇರೆ ಹಾಟ್ ಸ್ಪಾಟ್ ಗಳನ್ನು ಹುಟ್ಟಿಕೊಳ್ಳದಂತೆ ಸಹಕರಿಸಿ. 21 ದಿನಗಳ ಲಾಕ್ ಡೌನ್ ಇಂದಿಗೆ ಅಂತ್ಯವಾದ ಹಿನ್ನೆಲೆಯಲ್ಲಿ ಮುಂದಿನ 18 ದಿನ ಲಾಕ್ ಡೌನ್ ಅಂದರೆ ಮೇ 3 ರವರೆಗೆ ದೇಶದ್ಯಾಂತ ಲಾಕ್ ಡೌನ್ ಮುಂದುವರೆಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ನಾವು ಈ ಹಿಂದೆ ಹೇಗೆ ಪಾಲಿಸಿಕೊಂಡು ಬರುತ್ತಿದ್ದೇವೋ ಹಾಗೇ ಪಾಲಿಸಬೇಕಾಗಿದೆ. ಕೊರೊನಾ ತಡೆಗೆ ನಾವು ಲಾಕ್ ಡೌನ್ ಮುಂದುವರೆಸಬೇಕಾಗಿದೆ. ಇದಕ್ಕೆ ಎಲ್ಲರೂ ಮನೆಯಲ್ಲಿದ್ದು ಸಹಕರಿಸಬೇಕು ಎಂದು ಕರೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಹೀಗಾಗಿ ಲಾಕ್ ಡೌನ್ ನಿಯಮವನ್ನು ಪಾಲಿಸಿ. ಎಲ್ಲಿದ್ದೀರಾ ಅಲ್ಲೇ ಇರಿ ಕೊರೊನಾ ತಡೆಗೆ ಕೈ ಜೋಡಿಸಿ ಎಂದಿದ್ದಾರೆ. ವಿಜಯ ಸಾಧಿಸಲು ಇದು ನಾವು ಮಾಡಬೇಕಾದ ಮಹತ್ವದ ಕಾರ್ಯವಾಗಿದೆ.

ಏ.20ರ ತನಕ ಷರತ್ತು ಬದ್ಧ ಸಡಿಲಿಕೆ ಮಾಡಲಾಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ ಮಾಡಲಾಗುವುದು ಎಂದು ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights