ಕೇಂದ್ರ ಮಾಜಿ ಸಚಿವ ಪಿ.ಆರ್.ಕುಮಾರಮಂಗಲಂ ಅವರ ಪತ್ನಿ ಬರ್ಬರ ಕೊಲೆ!

ಕೇಂದ್ರದ ಮಾಜಿ ಸಚಿವ ಪಿ.ಆರ್.ಕುಮಾರಮಂಗಲಂ ಅವರ ಪತ್ನಿ ದೆಹಲಿಯ ಅವರ ಮನೆಯಲ್ಲಿ ಕಳೆದ ರಾತ್ರಿ ಕೊಲೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಿಟ್ಟಿ ಕುಮಾರಮಂಗಲಂ (67) ದಕ್ಷಿಣ ದೆಹಲಿಯ ವಸಂತ್ ವಿಹಾರದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆರಂಭಿಕ ತನಿಖೆಯ ಪ್ರಕಾರ ಅವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ತಿಳಿದು ಬಂದಿದೆ.

ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಕಿಟ್ಟಿ ಎಂ.ಎಸ್.ಕುಮಾರಮಂಗಲಂ ಅವರು ಮನೆಯ ಕೆಲಸದವನೊಂದಿಗೆ ತಮ್ಮ ಮನೆಯಲ್ಲಿ ಒಬ್ಬಂಟಿಯಾಗಿ ಇದ್ದರು. ಈ ವೇಳೆ ಮನೆಗೆ ಆಗಮಿಸಿದ ಇಬ್ಬರು ಮನೆ ಕೆಲಸದಾತನನ್ನು ಕೂಡಿ ಹಾಕಿದ್ದಾರೆ. ನಂತರ ಕಿಟ್ಟಿ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ 11 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಮುಖ್ಯ ಆರೋಪಿಗಳನ್ನು ಬಂಧಿಸಲಾಗಿದ್ದರೂ, ಅವರಿಗೆ ಸಹಾಯ ಮಾಡಿದ ಇತರ ಇಬ್ಬರು ಇನ್ನೂ ಕಾಣೆಯಾಗಿದ್ದಾರೆ.

ಕಿಟ್ಟಿ ಕುಮಾರಮಂಗಲಂ ಅವರು ಸುಪ್ರೀಂ ಕೋರ್ಟ್ ವಕೀಲರಾಗಿ ಸೇವೆ ಸಲ್ಲಿಸಿದ್ದರು. ಅವರ ಪತಿ 1984 ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು ಮತ್ತು 1991 ಮತ್ತು 92 ರ ನಡುವೆ ಕೇಂದ್ರ ರಾಜ್ಯ, ಸಂಸದೀಯ ವ್ಯವಹಾರ ಮತ್ತು ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರಗಳ ಸಚಿವರಾಗಿ, 1992 ಮತ್ತು 93 ರ ನಡುವೆ ಸಂಸದೀಯ ವ್ಯವಹಾರಗಳ ಸಚಿವರಾಗಿ ಮತ್ತು 1998 ರಲ್ಲಿ ದೇಶದ ವಿದ್ಯುತ್ ಸಚಿವರಾಗಿ ಸೇವೆ ಸಲ್ಲಿಸಿದ್ದರು.

 

Spread the love

Leave a Reply

Your email address will not be published. Required fields are marked *