ಬಾಲಿವುಡ್ ನ ಪ್ರಸಿದ್ಧ ನಟ ದಿಲೀಪ್ ಕುಮಾರ್ ನಿಧನ..!

ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ನ ಪ್ರಸಿದ್ಧ ನಟ ದಿಲೀಪ್ ಕುಮಾರ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಮಂಗಳವಾರದಿಂದ ಹಿಂದೂಜಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ಸೇರಿಸಲಾಗಿತ್ತು. “ಅವರು ಬೆಳಿಗ್ಗೆ 7.30 ಕ್ಕೆ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾದರು” ಎಂದು ದಿಲೀಪ್ ಕುಮಾರ್ ಅವರಿಗೆ (98 )ಚಿಕಿತ್ಸೆ ನೀಡುತ್ತಿದ್ದ ಡಾ. ಜಲೀಲ್ ಪಾರ್ಕರ್ ತಿಳಿಸಿದ್ದಾರೆ.

“ಕೆಲವು ನಿಮಿಷಗಳ ಹಿಂದೆ ನಮ್ಮ ಪ್ರೀತಿಯ ದಿಲೀಪ್ ಸಾಬ್ ಅವರು ನಿಧನರಾದರು ಎಂದು ನಾನು ಘೋಷಿಸುತ್ತೇನೆ. ನಾವು ದೇವರಿಂದ ಬಂದಿದ್ದೇವೆ ಮತ್ತು ಅವನ ಬಳಿಗೆ ನಾವು ಹಿಂತಿರುಗುತ್ತೇವೆ”ಎಂದು ದುಖ:ದಿಂದ ಕುಟುಂಬ ಸ್ನೇಹಿತ ಫೈಸಲ್ ಫಾರೂಕಿ ನಟನ ಟ್ವಿಟ್ಟರ್ ಹ್ಯಾಂಡಲ್‌ನಿಂದ ಪೋಸ್ಟ್ ಮಾಡಿದ್ದಾರೆ.

ಐದು ದಶಕಗಳಲ್ಲಿ ಸುಮಾರು 60 ಸಿನಿಮಾಗಳಲ್ಲಿ ನಟಿಸಿದ ದಿಲೀಪ್ ಕುಮಾರ್ ಅಗಲಿಕೆಗೆ ಇಡಿ ಬಾಲಿವುಡ್ ಕಂಬನಿ ಮಿಡಿದಿದೆ. ಹಲವಾರು ಚಿತ್ರಗಳನ್ನು ಮಾಡುವುದು ಮೂಖ್ಯ ಅಲ್ಲ ಕಥೆ ಚೆನ್ನಾಗಿರಬೇಕು ಎಂದು ಹಲವಾರು ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights