ಡೈರಿ ವ್ಯವಹಾರಕ್ಕಾಗಿ 30 ಕೋಟಿ ರೂ.ಗಳ ಹೆಲಿಕಾಪ್ಟರ್ ಖರೀದಿಸಿದ ‘ಮಹಾ’ ರೈತ..!
ಮಹಾರಾಷ್ಟ್ರದ ಭಿವಾಂಡಿಯ ರೈತ ಮತ್ತು ಉದ್ಯಮಿ ಜನಾರ್ಧನ್ ಭೋಯಿರ್ ಅವರು ತಮ್ಮ ಡೈರಿ ವ್ಯವಹಾರಕ್ಕಾಗಿ ದೇಶಾದ್ಯಂತ ಪ್ರಯಾಣಿಸಲು 30 ಕೋಟಿ ರೂ.ಗಳ ಹೆಲಿಕಾಪ್ಟರ್ ಖರೀದಿಸಿದ್ದಾರೆ. ಇತ್ತೀಚೆಗೆ ಡೈರಿ ವ್ಯವಹಾರದಲ್ಲಿ ತೊಡಗಿರುವ ಭೋಯಿರ್ ಅವರು ದೇಶದ ವಿವಿಧ ನಗರಗಳಿಗೆ ಪ್ರಯಾಣಿಸುವ ಅವಶ್ಯಕತೆಯಿತ್ತು. ಆದ್ದರಿಂದ ಹೆಲಿಕಾಪ್ಟರ್ ಖರೀದಿಸುವುದರಿಂದ ಅವರ ಪ್ರವಾಸಗಳು ಹೆಚ್ಚು ಅನುಕೂಲಕರವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ತನ್ನ ಡೈರಿ ವ್ಯವಹಾರದಿಂದಾಗಿ ತಾನು ಆಗಾಗ್ಗೆ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್‌ಗೆ ಪ್ರಯಾಣಿಸಬೇಕಾಗುತ್ತದೆ” ಎಂದು ಜನಾರ್ಧನ್ ಹೇಳುತ್ತಾರೆ. ಆದಾಗ್ಯೂ, ಎಲ್ಲಾ ನಗರಗಳಲ್ಲಿ ವಿಮಾನ ನಿಲ್ದಾಣಗಳಿಲ್ಲ. ಆದ್ದರಿಂದ ತಾವು ವೇಗವಾಗಿ ತಲುಪಲು ಹೆಚ್ಚು ಗಂಟೆಗಳ ಕಾಲ ಪ್ರಯಾಣಿಸಬೇಕಾಗಿತ್ತು. ಸ್ನೇಹಿತರ ಸಲಹೆಯ ಮೇರೆಗೆ ಹೆಲಿಕಾಪ್ಟರ್ ಖರೀದಿಸಲು ಅವನು ನಿರ್ಧರಿಸಿದರು.
ಸ್ಥಳೀಯ ವರದಿಗಾರರೊಂದಿಗೆ ಮಾತನಾಡುತ್ತಾ ಜನಾರ್ಧನ್, “ನಾನು ಆಗಾಗ್ಗೆ ನನ್ನ ವ್ಯವಹಾರಕ್ಕಾಗಿ ಪ್ರಯಾಣಿಸಬೇಕಾಗಿದೆ, ಅದಕ್ಕಾಗಿಯೇ ನಾನು ಹೆಲಿಕಾಪ್ಟರ್ ಖರೀದಿಸಿದೆ. ನನ್ನ ಡೈರಿ ಬ್ಯುಸಿನೆಸ್ ಮತ್ತು ಕೃಷಿಯನ್ನು ನೋಡಿಕೊಳ್ಳುವುದಕ್ಕೆ ನನಗೆ ಸಮಯ ಬೇಕಾಗುತ್ತದೆ ” ಎಂದಿದ್ದಾರೆ.
ಭೋಯಿರ್ ಅವರು 2.5 ಎಕರೆ ಭೂಮಿಯಲ್ಲಿ, ಹೆಲಿಪ್ಯಾಪ್ಟರ್‌ಗೆ ಗ್ಯಾರೇಜ್, ಪೈಲಟ್ ರೂಮ್ ಮತ್ತು ತಂತ್ರಜ್ಞರ ಕೋಣೆಯೊಂದಿಗೆ ರಕ್ಷಣಾತ್ಮಕ ಗೋಡೆಯೊಂದಿಗೆ ಹೆಲಿಪ್ಯಾಡ್ ನಿರ್ಮಿಸಲು ವ್ಯವಸ್ಥೆ ಮಾಡಿದ್ದಾರೆ.
ಮಾರ್ಚ್ 15 ರಂದು ಹೆಲಿಕಾಪ್ಟರ್ ಅನ್ನು ಅವರಿಗೆ ತಲುಪಿಸಲಾಗಿದೆ. 100 ಕೋಟಿ ರೂ. ಆಸ್ತಿಯನ್ನು ಹೊಂದಿರುವ ಶ್ರೀಮಂತ ರೈತನಿಗೆ ರಿಯಲ್ ಎಸ್ಟೇಟ್ ವ್ಯವಹಾರವೂ ಇದೆ.