ಸೆಂಚುರಿ ಫಾರ್ ಪೆಟ್ರೋಲ್: ಬೆಲೆ ಏರಿಕೆ ವಿರುದ್ಧ ಬ್ಯಾಟ್, ಹೆಲ್ಮೆಟ್‌ನೊಂದಿಗೆ ಶತಕ ಪ್ರದರ್ಶಿಸಿ ಅಪಹಾಸ್ಯ!
ಭೋಪಾಲ್‌ನಲ್ಲಿ ಶನಿವಾರ ಮೊದಲ ಬಾರಿಗೆ ಪ್ರೀಮಿಯಂ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ.ಗಳನ್ನು ದಾಟಿದ್ದು, ಇದು ಸಾಂಕ್ರಾಮಿಕ ಪೀಡಿತ ಸಾಮಾನ್ಯ ಜನರಿಗೆ ಸಂಕಷ್ಟಗಳನ್ನು ಹೆಚ್ಚಿಸಿದೆ.
ಹೌದು.. ಮಧ್ಯಪ್ರದೇಶದ ಹಲವಾರು ಇತರ ನಗರಗಳಲ್ಲಿ, ಇಂಧನ ಬೆಲೆ ಪ್ರತಿ ಲೀಟರ್‌ಗೆ 100 ರೂ.ಗಳನ್ನು ದಾಟಿದೆ. ಇದು ಸಾರ್ವಜನಿಕರಿಗೆ ಆರ್ಥಿಕ ಹೊರೆಯನ್ನುಂಟು ಮಾಡಿದೆ. ಇದರ ಬೆನ್ನಲ್ಲೆ ಭೋಪಾಲ್‌ನ ವ್ಯಕ್ತಿಯೊಬ್ಬರು ಪೆಟ್ರೋಲ್ ಪಂಪ್‌ನಲ್ಲಿ ಕ್ರಿಕೆಟ್ ಬ್ಯಾಟ್ ಮತ್ತು ಹೆಲ್ಮೆಟ್‌ನೊಂದಿಗೆ ಶತಕ ಪ್ರದರ್ಶನ ಮಾಡಿದ್ದಾರೆ. ಇದು ಇಂಧನ ಬೆಲೆ ಒಂದು ಶತಕವನ್ನು ಮುಟ್ಟಿದೆ ಎಂದು ಸೂಚಿಸುತ್ತದೆ. ಬೆಲೆ ಏರಿಕೆಯ ವಿರುದ್ಧ ಯುವ ಕಾಂಗ್ರೆಸ್ ಪದಾಧಿಕಾರಿ ವಿಶಿಷ್ಟವಾದ ಪ್ರತಿಭಟನೆ ಮಾಡಿದ್ದಾರೆ.
After lot of hardwork and struggle finally !!
Century for Petrol !#PetrolPrice pic.twitter.com/acBD5Dxriq— Anmol Sharma (@sharrma_anmol) February 14, 2021
ಹೆಚ್ಚಿನ ಬೆಲೆಗಳನ್ನು ಅಪಹಾಸ್ಯ ಮಾಡುತ್ತಾ, ಟ್ವಿಟ್ಟರ್ ಬಳಕೆದಾರರು ಚಿತ್ರವನ್ನು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: ”ಸಾಕಷ್ಟು ಶ್ರಮ ಮತ್ತು ಹೋರಾಟದ ನಂತರ ಅಂತಿಮವಾಗಿ !! ಪೆಟ್ರೋಲ್‌ಗೆ ಶತಕ!” ಎಂದು ಅಪಹಾಸ್ಯ ಮಾಡಿದ್ದಾರೆ.
https://twitter.com/glenfdsouza/status/1360655884054052866?ref_src=twsrc%5Etfw%7Ctwcamp%5Etweetembed%7Ctwterm%5E1360655884054052866%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fcentury-for-petrol-mp-man-poses-with-a-bat-helmet-as-fuel-prices-hits-century-mark-in-bhopal-4425682%2F
https://twitter.com/branmccla/status/1360996974695124996?ref_src=twsrc%5Etfw%7Ctwcamp%5Etweetembed%7Ctwterm%5E1360996974695124996%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fcentury-for-petrol-mp-man-poses-with-a-bat-helmet-as-fuel-prices-hits-century-mark-in-bhopal-4425682%2F
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 2021 ರಲ್ಲಿ 19 ಪಟ್ಟು ಹೆಚ್ಚಾಗಿದೆ. ಈ ಚಿತ್ರ ವೈರಲ್ ಆಗಿ ಪೆಟ್ರೋಲ್ ಬೆಲೆಯಲ್ಲಿ ಅಭೂತಪೂರ್ವ ಏರಿಕೆಯ ಬಗ್ಗೆ ನೆಟಿಜನ್‌ಗಳು ಸರ್ಕಾರದ ಗರಂ ಆಗಿದ್ದಾರೆ. ಆದರೂ ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ತೈಲ ಕಂಪನಿಗಳ ಅಧಿಕಾರಿಗಳು ತಿಳಿಸಿದ್ದಾರೆ.