ರಾಜ್ಯ ರಾಜಧಾನಿಯಲ್ಲಿ ಮತ್ತೆ ಕೊರೊನಾ : ಎಸ್ಎನ್ಎನ್ ರಾಜ್ಲೇಕ್ ಅಪಾರ್ಟ್ಮೆಂಟ್ನಲ್ಲಿ 103 ಕೇಸ್!

ರಾಜ್ಯ ರಾಜಧಾನಿಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ನಿಟ್ಟುಸಿರು ಬಿಡುತ್ತಿದ್ದ ಜನ ಮತ್ತೆ ನಿದ್ದೆಯಿಂದ ಬಡಿದೆಬಿಸಿದಂತೆ ಎದ್ದು ಕುಳಿತಿದ್ದಾರೆ. ಯಾಕಂದ್ರೆ ಎಸ್ಎನ್ಎನ್ ರಾಜ್ಲೇಕ್ ಅಪಾರ್ಟ್ಮೆಂಟ್ನಲ್ಲಿ ಬರೋಬ್ಬರಿ ಒಂದಲ್ಲಾ ಎರಡಲ್ಲಾ 103 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಹೌದು… ಬೆಂಗಳೂರಿನ ಬೊಮ್ಮನಳ್ಳಿಯಲ್ಲಿರುವ ಎಸ್ಎನ್ಎನ್ ರಾಜ್ ಲೇಕ್ ಅಪಾರ್ಟ್ ಮೆಂಟ್ ನಲ್ಲಿ 103 ಜನರಿಗೆ ಕೊರೊನಾ ಸೋಂಕು ಹರಡಿದೆ. ನಿನ್ನೆ 35 ಜನರಿಗೆ ಇದ್ದ ಕೊರೊನಾ ಸೋಂಕಿತರ ಸಂಖ್ಯೆ ಇಂದು 103 ಜನರಲ್ಲಿ ಕಾಣಿಸಿಕೊಂಡಿದೆ.

ಈವರೆಗೆ 500 ಜನರ ಪರೀಕ್ಷೆ ನಡೆಸಲಾಗಿದ್ದು. ಇವರ ರಿಪೋರ್ಟ್ ಗಾಗಿ ಬಿಬಿಎಂಪಿ ಕಾಯುತ್ತಿದೆ. 50 ವರ್ಷ ಮೇಲ್ಪಟ್ಟವರಿಗೆ ಸೋಂಕು ಹೆಚ್ಚಾಗಿದೆ. ಇನ್ನು ಕೆಲವರ ರಿಪೋರ್ಟ್ ಇಂದು ಬರಬೇಕಿದೆ. ಅದು ಬಂದ ನಂತರ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಹೀಗಾಗಿ ಟೆಸ್ಟಿಂಗ್ ವ್ಯವಸ್ಥೆ ಇನ್ನೂ ಹೆಚ್ಚಾಗುತ್ತಿದೆ. ಇದೇ ತಿಂಗಳು ಎಸ್ಎನ್ಎನ್ ರಾಜ್ ಲೇಕ್ ಅಪಾರ್ಟ್ ಮೆಂಟ್ ನಲ್ಲಿ ಕಾರ್ಯಕ್ರಮವೊಂದು ನಡೆದಿತ್ತು. ಆ ಕಾರ್ಯಕ್ರಮದಲ್ಲಿ ಅಪಾರ್ಟ್ಮೆಂಟ್ ನಲ್ಲಿವವರೆಲ್ಲಾ ಭಾಗಿಯಾದ್ದರು. ಆದರೆ ಕೊರೊನಾ ನಿಯಮಗಳನ್ನು ಇಲ್ಲಿ ಪಾಲಿಸಲಾಗಿರಲಿಲ್ಲ ಎಂದು ಆರೋಪಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights