FACT CHECK | ತುಮಕೂರಿನ ಶಿರಾದಲ್ಲಿ ಮನೆ ಕಟ್ಟಲು ಬುನಾದಿ ತೆಗೆಯುವಾಗ ಎಣ್ಣೆ ನಿಕ್ಷೇಪ ಪತ್ತೆಯಾಗಿದೆ ಎಂಬುದು ಸುಳ್ಳು

ತುಮಕೂರು ಜಿಲ್ಲೆಯ ಶಿರಾದಲ್ಲಿ ಮನೆ ಕಟ್ಟಲು ಭೂಮಿ ಪೂಜೆ ನಡೆಸಿದಾಗ ಭೂಮಿಯಲ್ಲಿ ಎಣ್ಣೆ ಸಿಕ್ಕಿದೆ ಎಂಬಂತೆ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂಗಳಲ್ಲಿ ಇದೇ ಹೇಳಿಕೆಗಳೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಇವುಗಳನ್ನು ಇಲ್ಲಿ ಇಲ್ಲಿ ನೋಡಬಹುದು.

ಶಿರಾದಲ್ಲಿ ಮನೆಕಟ್ಟುವ ವೇಳೆ ಎಣ್ಣೆ ಸಿಕ್ಕಿದೆಯೇ?

ಇದೇ ರೀತಿಯ ಹೇಳಿಕೆಗಳೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದ್ದು, ಈ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವೀಡಿಯೋದಲ್ಲಿ ಜನರು ಎಣ್ಣೆ ತುಂಬುತ್ತಿರುವ ಆಯಿಲ್ ಡಬ್ಬದಲ್ಲಿ ಗುಜರಾತಿ ಭಾಷೆಯಲ್ಲಿ ಬರೆದಿರುವುದು ಕಂಡುಬಂದಿದೆ.

ಶಿರಾದಲ್ಲಿ ಮನೆಕಟ್ಟುವ ವೇಳೆ ಎಣ್ಣೆ ಸಿಕ್ಕಿದೆಯೇ?

ಗುಜರಾತಿ ಭಾಷೆಯಲ್ಲಿ ಬರೆದ ಎಣ್ಣೆಯ ಡಬ್ಬ

ಇದರೊಂದಿಗೆ ಎಣ್ಣೆ ತುಂಬಿದ ವಸ್ತುಗಳನ್ನು ಗುಜರಾತಿ ನೋಂದಣಿ ಹೊಂದಿದ ಗೂಡ್ಸ್ ರಿಕ್ಷಾಕ್ಕೆ ಲೋಡ್‌ ಮಾಡುತ್ತಿರುವುದನ್ನು ಗಮನಿಸಿದ್ದೇವೆ.

ಶಿರಾದಲ್ಲಿ ಮನೆಕಟ್ಟುವ ವೇಳೆ ಎಣ್ಣೆ ಸಿಕ್ಕಿದೆಯೇ?

ಗುಜರಾತ್ ನೋಂದಣಿ ಸಂಖ್ಯೆ

ಈ ಗೂಡ್ಸ್ ರಿಕ್ಷಾದ ನೋಂದಣಿಯನ್ನು ನ್ಯೂಸ್‌ ಚೆಕರ್ ಪರಿಶೀಲಿಸಿದ್ದು, ಇದು ಗುಜರಾತ್ ನಲ್ಲೇ ಓಡಾಡುವ ರಿಕ್ಷಾ ಎಂಬುದು ಕಂಡುಬಂದಿದೆ.

ಶಿರಾದಲ್ಲಿ ಮನೆಕಟ್ಟುವ ವೇಳೆ ಎಣ್ಣೆ ಸಿಕ್ಕಿದೆಯೇ?

ಗೂಡ್ಸ್ ರಿಕ್ಷಾದ ನೋಂದಣಿ ವಿವರ

ಇದರಿಂದ ತಿಳಿಯುವುದೇನೆಂದರೆ ವೈರಲ್ ವಿಡಿಯೋ ಗುಜರಾತ್‌ಗೆ ಸಂಬಂಧಿಸಿದ್ದಾಗಿದೆ ಎಂದು ನ್ಯೂಸ್‌ ಚೆಕ್ಕರ್ ತಿಳಿಸಿದೆ.

ಮತ್ತಷ್ಟು ಮಾಹಿತಿಗಾಗಿ ವಿಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ವೈರಲ್ ವೀಡಿಯೋ ಹೋಲುವ ವೀಡಿಯೋವನ್ನು ಹಂಚಿಕೊಂಡಿರುವುದನ್ನು ಕಂಡುಬಂದಿದೆ. ಈ ವೀಡಿಯೋಗಳನ್ನು ಇಲ್ಲಿ ಇಲ್ಲಿ ನೋಡಬಹುದು.

ಶಿರಾದಲ್ಲಿ ಮನೆಕಟ್ಟುವ ವೇಳೆ ಎಣ್ಣೆ ಸಿಕ್ಕಿದೆಯೇ?

ಈ ಪೋಸ್ಟ್ ಗೆ ನೀಡಲಾದ ವಿವರಣೆಯಲ್ಲಿ “ರಾಧಾನ್ಪುರದಲ್ಲಿ ಎಣ್ಣೆಯ ಮಳೆ” (ಗುಜರಾತಿಯಿಂದ ಅನುವಾದಿಸಲಾಗಿದೆ) ಎಂದು ಬರೆಯಲಾಗಿದೆ. ಈ ದೃಶ್ಯದಲ್ಲಿ ಗುಜರಾತಿನ ರಾಧಾನ್ಪುರದಲ್ಲಿ ಎಣ್ಣೆಯನ್ನು ಪಾತ್ರೆಗಳಲ್ಲಿ ತುಂಬಿ ಜನರು ತೆಗೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು.

ಆಗಸ್ಟ್ 1, 2023ರಂದು ದಿವ್ಯಾ ಭಾಸ್ಕರ್ ಪ್ರಕಟಿಸಿದ ವರದಿಯ ಪ್ರಕಾರ “ವಾರಾಹಿ-ರಾಧನ್‌ಪುರ ರಸ್ತೆಯಲ್ಲಿ ತೈಲ ಟ್ಯಾಂಕರ್ ಪಲ್ಟಿಯಾಗಿ, ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು, ಸುತ್ತಮುತ್ತಲಿನ ಜನರು ರಿಕ್ಷಾ ಒಂದಕ್ಕೆ ಎಣ್ಣೆಯನ್ನು ತುಂಬಲು  ಪಾತ್ರೆಗಳೊಂದಿಗೆ ಅಲ್ಲಿಗೆ ತಲುಪಿದರು.” ಎಂದಿದೆ.

ಶಿರಾದಲ್ಲಿ ಮನೆಕಟ್ಟುವ ವೇಳೆ ಎಣ್ಣೆ ಸಿಕ್ಕಿದೆಯೇ?

ದಿವ್ಯಾ ಭಾಸ್ಕರ್ ವರದಿ

ವೈರಲ್ ವಿಡಿಯೋದ ತನಿಖೆ ವೇಳೆ ಪತ್ರಿಕಾ ವರದಿಯು 2023ರಲ್ಲಿ ಲಾರಿ ಅಪಘಾತವಾದ ಬಗ್ಗೆ ವರದಿಯನ್ನು ಪ್ರಕಟಿಸಿರುವುದು ಕಂಡುಬಂದಿದೆ. ಇದೇ ವೇಳೆ ವಿವಿಧ ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋವನ್ನು ಇತ್ತೀಚೆಗೆ ಪೋಸ್ಟ್ ಮಾಡಿರುವುದು ಲಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಘಟನೆ ನಿರ್ದಿಷ್ಟವಾಗಿ ಯಾವಾಗ ನಡೆದಿದೆ ಮತ್ತು ಎಲ್ಲಿ ನಡೆದಿದೆ ಎಂಬುದರ ಬಗ್ಗೆ ನಮಗೆ ಕಂಡುಹಿಡಿಯಲು ಸಾಧ್ಯವಾಗಿಲ್ಲ.

ಒಟ್ಟಾಯಾಗಿ ಹೇಳುವುದಾದರೆ, ಗುಜರಾತ್‌ನಲ್ಲಿ ತೈಲ ಟ್ಯಾಂಕರ್‌ ಅಪಘಾತಗೊಂಡು ಎಣ್ಣೆಯನ್ನು ಸಾರ್ವಜನಿಕರು ಡಬ್ಬಕ್ಕೆ ತುಂಬಿಕೊಂಡು ಹೋಗುವ ಘಟನೆಯನ್ನು,ತುಮಕೂರು ಜಿಲ್ಲೆಯ ಶಿರಾ ಭಾಗದಲ್ಲಿ ಮನೆ ಕಟ್ಟಲು ಭೂಮಿ ಪೂಜೆ ನಡೆಸಿದಾಗ ಭೂಮಿಯಲ್ಲಿ ತೈಲ ನಿಕ್ಷೇಪ ಸಿಕ್ಕಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ನ್ಯೂಸ್‌ ಚೆಕ್ಕರ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮುಸ್ಲಿಂ ವಿದ್ಯಾರ್ಥಿನಿಯರು ಫೇಲ್ ಆಗಿದ್ದಕ್ಕೆ ಶಿಕ್ಷಕರ ಮೇಲೆ ಪೋಷಕರು ಹಲ್ಲೆ ನಡೆಸಿದ್ದಾರೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights