ಮುಟ್ಟಿನ ಸಂದರ್ಭದಲ್ಲಿ ಕೊರೊನಾ ಕಿಟ್ ಜೊತೆಗೆ ಸ್ಯಾನಿಟರಿ ಪ್ಯಾಡ್ ಮತ್ತು ಡೈಪರ್ ಕೂಡ ಧರಿಸಬೇಕು: ವೈದ್ಯೆಯರ ಸಂಕಷ್ಟ

ಕೊರೊನಾ ಸಾಂಕ್ರಾಮಿಕದ ವಿರುದ್ದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಮಹಿಳಾ ವೈದ್ಯರು ಒಮ್ಮೆ ಪಿಪಿಇ (ವೈಯಕ್ತಿಕ ರಕ್ಷಣಾ ಸಾಧನಗಳು) ಧರಿಸಿದ ನಂತರ ಅದನ್ನು ಎಂಟುಗಂಟೆಗಳ ಕಾಲ ಧರಿಸಿಯೆ ಇರಬೇಕಾಗುತ್ತದೆ. ಅದರ ಜೊತೆಗೆ ಮೂತ್ರ ವಿಸರ್ಜನೆಗೆ ಡೈಪರ್‌ಗಳನ್ನು ಕೂಡಾ ಧರಿಸಬೇಕಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಸಮಸ್ಯೆ ಮುಟ್ಟಿನ ಸಮಯದಲ್ಲಿ ಇನ್ನೂ ಹೆಚ್ಚಾಗುತ್ತದೆ ಎಂದು ಮಹಿಳಾ ವೈದ್ಯರು ಹೇಳುತ್ತಾರೆ ಎಂದು ಮಹಿಳಾ ವೈದ್ಯರ ಸಮಸ್ಯೆಗಳನ್ನು ದಿ ಇಂಡಿಯನ್ ಎಕ್ಸ್‌‌ಪ್ರೆಸ್ ವರದಿ ಮಾಡಿದೆ.

ಆರೋಗ್ಯ ಕೇಂದ್ರದಲ್ಲಿ ಸೋಂಕಿನ ಸಾಮಾನ್ಯ ಅಪಾಯಗಳ ಮಧ್ಯೆ ಕೊರೊನಾ ವಾರ್ಡ್‌ಗಳಲ್ಲಿ ಕೆಲಸ ಮಾಡುವ ಮಹಿಳಾ ವೈದ್ಯರು ಮತ್ತು ದಾದಿಯರಿಗೆ ಕಡ್ಡಾಯವಾಗಿರುವ ಪಿಪಿಇ ಅವರ ಸಮಸ್ಯೆಗಳನ್ನು ಇನ್ನೂ ಹೆಚ್ಚಿಸುತ್ತದೆ.

ಒಮ್ಮ ಪಿಪಿಇ ಕಿಟ್ ಧರಿಸಿದರೆ ಅದನ್ನು ಸಾಮಾನ್ಯವಾಗಿ 8 ಗಂಟೆಗಳ ಕಾಲ ಧರಿಸಿಯೆ ಇರಬೇಕಾಗುತ್ತದೆ. ಈ ಸಮಯದಲ್ಲಿ ವೈದ್ಯರು ಏನನ್ನು ಕುಡಿಯಲೋ ಹಾಗೂ ತಿನ್ನಲು ಸಾಧ್ಯವಿಲ್ಲ. ತಮ್ಮ ಸಮಸ್ಯೆಗಳನ್ನು ಬಿಚ್ಚಿಡುವ ಪಂಚಕುಲ ಪ್ಯಾರಾಸ್ ಆಸ್ಪತ್ರೆಯ ವೈದ್ಯರಾದ ಡಾ. ಜಸ್ಲೋವ್ಲಿನ್ ಕೌರ್‌ “ನಾವು ಸಾಮಾನ್ಯವಾಗಿ ಮೂತ್ರ ವಿಸರ್ಜಿಸಲು ಡಯಾಪರ್ ಧರಿಸುತ್ತೇವೆ” ಎನ್ನುತ್ತಾರೆ.

ಸತತ ಎಂಟು ಗಂಟೆಗಳ ಕಾಲ ಪಿಪಿಇ ಕಿಟ್ ಧರಿಸಬೇಕಾಗಿರುವುದರಿಂದ ಮುಟ್ಟಾದ ದಿನಗಳಲ್ಲಿ ಬಹಳಷ್ಟು ಕಷ್ಟಕರವಾಗುತ್ತದೆ. ಸ್ಯಾನಿಟರಿ ಪ್ಯಾಡ್ ಧರಿಸಿ ನಂತರ ಡಯಾಪರ್ ಧರಿಸಬೇಕಾಗುತ್ತದೆ. ಇಲ್ಲಿಯ ತನಕ ಟ್ಯಾಂಪನ್‍ ಗಳನ್ನು ಬಳಸದ ನಾನು ಈಗ ಅವುಗಳನ್ನು ಧರಿಸಬೇಕಾಗುತ್ತದೆ ಎಂದು ಅವರು ವಿವರಿಸುತ್ತಾರೆ.

ಅಧಿಕ ರಕ್ತಸ್ರಾವವಾಗುವವರು ತಮ್ಮ ಪಿಪಿಇ ಯಲ್ಲಿದ್ದಾಗ ಎರಡು ಅಥವಾ ಹೆಚ್ಚು ಪ್ಯಾಡ್‌ಗಳನ್ನು ಸಹ ಬಳಸುತ್ತಾರೆ ಎಂದು ನೋಯ್ಡಾದ ಮದರ್‌ಹುಡ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ. ಸಂದೀಪ್ ಚಾಧಾ ಹೇಳುತ್ತಾರೆ.

ಧೀರ್ಘ ಕಾಲದವರೆಗೆ ಸ್ಯಾನಿಟರಿ ಪ್ಯಾಡ್ ಧರಿಸುವುದರಿಂದ ಆರೋಗ್ಯದ ಅಪಾಯಗಳು ಕೂಡಾ ಹೆಚ್ಚಿರುತ್ತವೆ ಎನ್ನುವ ಡಾ. ರೀಚಾ ಸರೀನ್, “ಪಿಪಿಇ ಧರಿಸಿದಾಗ ದೇಹವು ತುಂಬಾ ಬಿಸಿ ಮತ್ತು ಆರ್ದ್ರವಾಗಿರುತ್ತದೆ. ಆರರಿಂದ ಎಂಟು ಗಂಟೆಗಳ ಕಾಲ ಪ್ಯಾಡ್ ಬದಲಾಯಿಸದ ಕಾರಣ, ತೇವಾಂಶ ಮತ್ತು ಉಷ್ಣತೆಯು ಜನನಾಂಗದ ಪ್ರದೇಶದಲ್ಲಿ ಸೋಂಕಿಗೆ ಕಾರಣವಾಗಬಹುದು” ಎಂದು ಅವರು ವಿವರಿಸುತ್ತಾರೆ.

COVID-19 personal protective equipment causes serious skin ...

ಒಮ್ಮೆ ಪಿಪಿಇ ಕಳಚಿಟ್ಟರೆ ಅದನ್ನು ಮರುಬಳಕೆ ಮಾಡುವುದಿಲ್ಲ, ಹೊಸದನ್ನು ಧರಿಸಬೇಕಾಗುತ್ತದೆ. ನನ್ನ ಕೆಲವು ಸಹೋದ್ಯೋಗಿಗಳಿಗೆ ಪಿಪಿಇ ಧರಿಸಿರುವಾಗಲೆ ಮುಟ್ಟು ಪ್ರಾರಂಭವಾದ ಉದಾಹರಣೆಗಳಿವೆ. ಈ ಸಮಯದಲ್ಲಿ ಹೊಸದಾದ ಪಿಪಿಇಯನ್ನೆ ಧರಿಸಬೇಕಾಗುತ್ತದೆ ಎಂದು ಅವರು ಸಮಸ್ಯೆಯನ್ನು ಎತ್ತಿತೋರಿಸಿದ್ದಾರೆ.

ರಕ್ತ ಹೋಗುತ್ತಿರುವಾಗ ಮತ್ತು ಮುಟ್ಟಿನ ಸಮಯದ ನೋವನ್ನು ಸಹಿಸಿ ದೈಹಿಕ ಶಕ್ತಿಯನ್ನು ಉಳಿಸಿಕೊಳ್ಳಲು ತಜ್ಞರು ಈ ಅವಧಿಗಳಲ್ಲಿ ಸಾಕಷ್ಟು ಪೋಷಕಾಂಶಗಳು ಮತ್ತು ನೀರು ಸೇವಿಸಲು ಒತ್ತಿಹೇಳುತ್ತಾರೆ. ಆದರೆ ಪ್ರಸ್ತುತ ಕೊರೊನಾ ಬಿಕ್ಕಟ್ಟಿನಲ್ಲಿ ಈ ಆರೋಗ್ಯ ಕಾರ್ಯಕರ್ತರು ಗಂಟೆಗಟ್ಟಲೆ ಆಹಾರ ಮತ್ತು ನೀರಿಲ್ಲದೆ ತಮ್ಮ ಕರ್ತವ್ಯವನ್ನು ನಿರ್ವಹಿಸುವುದು ಅವರ ಕರ್ತವ್ಯ ನಿಷ್ಟೆಗೆ ಹಿಡಿದ ಕೈಗನ್ನಡಿಯಾಗಿದೆ.

ಮುಟ್ಟು, ಶೌಚ ವಿಷಯಗಳನ್ನು ಭಾರತದಲ್ಲಿ ಮಡಿ ಎಂದು ನೋಡಲಾಗುತ್ತದೆ. ಆದರೆ ಅವು ನೈಸರ್ಗಿಕ ಕ್ರಿಯೆಗಳಷ್ಟೆ. ಅವುಗಳನ್ನು ಅರ್ಥ ಮಾಡಿಕೊಂಡಾಗ ಮಾತ್ರ ಮಹಿಳೆಯರನ್ನು ಗೌರವಿಸಲು ಸಾಧ್ಯ. ಈ ಸಾಂಕ್ರಾಮಿಕ ಕಾಲದಲ್ಲಿ ಮಹಿಳಾ ವೈದ್ಯರು, ದಾದಿಯುರು ಅವುಗಳನ್ನೆಲ್ಲ ಮೆಟ್ಟಿ ನಿಂತು ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ.

ಇಂತಹ ವೈದ್ಯರನ್ನು ಸ್ಮರಿಸುವುದು, ಅವರ ಕರ್ತವ್ಯಕ್ಕೆ ಗೌರವ ಸೂಚಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಅದೇ ರೀತಿ ಸರ್ಕಾರಗಳು ಸಹ ಕೇವಲ ಭಾಷಣ ಮಾತ್ರವಲ್ಲದೇ ಈ ಮಹಿಲಾ ವೈದ್ಯರು ಮತ್ತು ದಾದಿಯರಿಗೆ ಸಮರ್ಪಕ ಸಂಬಳ, ಭತ್ಯೆಗಳನ್ನು ನೀಡಬೇಕು. ಅವರಿಗೆ ಅಗತ್ಯವಿರುವ ಪಿಪಿಇ ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಒದಗಿಸಬೇಕು.


ಇದನ್ನೂ ಓದಿ:  ಭೂವಿವಾದ; ನ್ಯಾಯ ಸಿಗದೆ ಮುಖ್ಯಮಂತ್ರಿ ಕಚೇರಿ ಎದುರೆ ಬೆಂಕಿ ಹಚ್ಚಿಕೊಂಡ ಮಹಿಳೆಯರು!


ಇದನ್ನೂ ಓದಿಮಹಿಳೆಯ ಮೇಲಿನ ಅತ್ಯಾಚಾರಕ್ಕೆ ಗಂಡನೇ ಕಾವಲುಗಾರ; ರಾಜಸ್ಥಾನದಲ್ಲೊಂದು ಹೇಯ ಕೃತ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights