‘ನನಗೆ ನಗ್ನವಾಗಿ ಆಡಿಷನ್ ಕೊಡಲು ಒತ್ತಾಯಿಸಿದ್ದರು’ ಕುಂದ್ರಾ ವಿರುದ್ಧ ನಟಿ ಸಾಗರಿಕಾ ಗಂಭೀರ ಆರೋಪ!

‘ನನಗೆ ನಗ್ನವಾಗಿ ಆಡಿಷನ್ ಕೊಡಲು ಒತ್ತಾಯಿಸಿದ್ದರು’ ಎಂದು ನಟಿ ಸಾಗರಿಕಾ ಶೋನಾ ಸುಮನ್ ಅವರು ರಾಜ್ ಕುಂದ್ರಾ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಅಶ್ಲೀಲ ಚಿತ್ರಗಳನ್ನು ರಚಿಸಿ ಪ್ರಕಟಿಸಿದ್ದಕ್ಕಾಗಿ ಮುಂಬೈ ಪೊಲೀಸರು ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅವರ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಬಂಧಿಸಿದ್ದಾರೆ. ಫೆಬ್ರವರಿ 4, 2021 ರಂದು ಮಾಲ್ವಾನಿ ಪೊಲೀಸ್ ಠಾಣೆಯಲ್ಲಿ ನಡೆದ ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಲಾಗಿದೆ. ಇದೇ ಸಮಯದಲ್ಲಿ, ನಟಿ ಸಾಗರಿಕಾ ಶೋನಾ ಸುಮನ್ ಅವರಿಗೆ ರಾಜ್ ಕುಂದ್ರಾ ನಗ್ನ ಆಡಿಷನ್ ಕೊಡುವಂತೆ ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

ಉದ್ಯಮಿ ರಾಜ್ ಕುಂದ್ರಾ ಅವರನ್ನು ಜುಲೈ 19 ಸೋಮವಾರ ಬಂಧಿಸಲಾಯಿತು. ಏಕೆಂದರೆ ಅವರು ಅಶ್ಲೀಲ ಚಿತ್ರಗಳ ರಚನೆ ಮತ್ತು ಅವುಗಳನ್ನು ಕೆಲವು ಆ್ಯಪ್‌ಗಳ ಮೂಲಕ ಪ್ರಕಟಿಸುವಲ್ಲಿ ಪ್ರಮುಖ ಸಂಚುಕೋರರಾಗಿದ್ದಾರೆ.

ಫೆಬ್ರವರಿಯಲ್ಲಿ ಮಾಡೆಲ್ ಮತ್ತು ನಟಿ ಸಾಗರಿಕಾ ಶೋನಾ ಸುಮನ್ ಅವರು ಅಶ್ಲೀಲ ವಿಡಿಯೋ ದಂಧೆಯಲ್ಲಿ ಪಾತ್ರವಹಿಸುವಂತೆ ಕುಂದ್ರಾ ಅವರಿಂದ ಒತ್ತಾಯ ಕೇಳಿ ಬಂದಿತ್ತು ಎಂದು ಆರೋಪಿಸಿದ್ದರು. ಈ ಕಾರಣಕ್ಕೆ ಉಮೇಶ್​ ಕಾಮತ್​ ಅವರನ್ನು ಫೆ. 9ರಂದು ಬಂಧಿಸಲಾಗಿತ್ತು. ರಾಜ್ ಕುಂದ್ರಾ ಅವರ ಬಂಧನಕ್ಕೂ ಒತ್ತಾಯಗಳು ಕೇಳಿ ಬಂದಿದ್ದವು.

ರಾಜ್ ಕುಂದ್ರಾ ಅವರಿಂದ ನಗ್ನ ಆಡಿಷನ್ ಕೇಳಲಾಗಿತ್ತು ಎನ್ನುವ ವೀಡಿಯೋ ಬಗ್ಗೆ ವಿವರಿಸಿದ ಸಾಗರಿಕಾ ಅವರು, “ವೀಡಿಯೊ ಕರೆಯಲ್ಲಿ ನಗ್ನ ಆಡಿಷನ್ ನೀಡಲು ನನ್ನನ್ನು ಕೇಳಿದಾಗ ನನಗೆ ಕೆಟ್ಟ ಅನುಭವವಾಗಿದೆ. ನಾನು ಆಡಿಷನ್ ನೀಡಲು ನಿರಾಕರಿಸಿದೆ. ಈ ವೇಳೆ ರಾಜ್ ಕುಂದ್ರಾ ಅವರ ಸಹಾಯಕರಾಗಿರುವ ಉಮೇಶ್ ಕಾಮತ್ ಅವರಂತಹ ಅನೇಕ ಜನರು ವೀಡಿಯೊ ಕರೆಯಲ್ಲಿದ್ದರು. ವೀಡಿಯೋದಲ್ಲಿ ಒಬ್ಬ ವ್ಯಕ್ತಿಯ ಮುಖ ಗೋಚರಿಸಲಿಲ್ಲ ಆದರೆ ಅವನು ರಾಜ್ ಕುಂದ್ರಾ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಈ ಅಶ್ಲೀಲ ಚಿತ್ರಗಳ ಎಲ್ಲಾ ತಾಣಗಳನ್ನು ರಾಜ್ ಕುಂದ್ರಾ ನಡೆಸುತ್ತಿದ್ದಾನೆ ಎಂದು ನಿರಂತರವಾಗಿ ವೀಡಿಯೊ ಕರೆಯಲ್ಲಿ ಉಮೇಶ್ ಕಾಮತ್ ನನಗೆ ಹೇಳುತ್ತಿದ್ದನು” ಎಂದಿದ್ದಾರೆ.

ಮುಂಬೈನಲ್ಲಿ ಅಶ್ಲೀಲ ವಿಡಿಯೋ ತಯಾರಿಕೆಗಾಗಿ ಕುಂದ್ರಾ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಅವರನ್ನು ಇಂದು (ಜುಲೈ 20) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಶ್ಲೀಲ ವಿಡಿಯೋ ದಂಧೆ ಪ್ರಕರಣದಲ್ಲಿ ರಾಜ್ ಕುಂದ್ರಾ ಅವರನ್ನು ಜುಲೈ 23 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

Spread the love

Leave a Reply

Your email address will not be published. Required fields are marked *