BREAKING: ಇನ್ನು ಮುಂದೆ ಕರ್ನಾಟಕ ಹೈಕೋರ್ಟ್‌ ಕಲಾಪ ನೇರಪ್ರಸಾರ!

ರಾಜ್ಯದ ಹೈಕೋರ್ಟ್‌ನಲ್ಲಿ ನಡೆಯಲು ಕಲಾಪಗಳನ್ನು (ಹಿಯರಿಂಗ್ಸ್‌) ಯೂಟ್ಯೂಬ್‌ ಮೂಲಕ ನೇರಪ್ರಸಾರ ಮಾಡಲು ಕರ್ನಾಟಕ ಹೈಕೋರ್ಟ್‌ ನಿರ್ಧರಿಸಿದೆ.  ಹೀಗಾಗಿ ಹೈಕೋರ್ಟ್‌ ಕಲಾಪಗಳನ್ನು ಜನರು ಲೈವ್‌ನಲ್ಲಿ ವೀಕ್ಷಿಸಲು ಅವಕಾಶವಿದೆ ಎಂದು ಹೇಳಿದೆ.

ಕರ್ನಾಟಕ ಹೈಕೋರ್ಟ್‌ನ ಹಾಲ್ ನಂ.1ರಲ್ಲಿ ನಡೆಯುವ ಎಲ್ಲಾ ರೀತಿಯ ಕಲಾಪಗಳು ಯೂಟ್ಯೂಬ್ ಮೂಲಕ ನೇರ ಪ್ರಸಾರವಾಗಲಿವೆ ಎಂದು ರಾಜ್ಯ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಜನಸಾಮಾನ್ಯರಿಗೆ ಹೈಕೋರ್ಟ್ ಕಲಾಪವನ್ನು ನೇರವಾಗಿ ವೀಕ್ಷಿಸಲು ಅನುವು ಮಾಡಿಕೊಡಲಾಗಿದ್ದು, ಇಂದು (ಸೋಮವಾರ) ಹೈಕೋರ್ಟ್ ಹಾಲ್ ನಂ.1ರ ಕಲಾಪವನ್ನು ಪ್ರಯೋಗಿಕವಾಗಿ ನೇರ ಪ್ರಸಾರ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಹೈಕೋರ್ಟ್ ಕಲಾಪದ ನೇರ ಪ್ರಸಾರವನ್ನು ಮಾಡಲಾಗಿದೆ. ಈಗಾಗಲೇ ಮಧ್ಯಪ್ರದೇಶ ಹೈಕೋರ್ಟ್, ಸುಪ್ರೀಂ ಕೋರ್ಟ್ ಕೂಡ ಕಲಾಪದ ನೇರಪ್ರಸಾರದ ಚಿಂತನೆ ನಡೆಸಿದೆ. ಇದರ ಮಧ್ಯೆ ರಾಜ್ಯ ಹೈಕೋರ್ಟ್ ಕಲಾಪವನ್ನು ನೇರ ಪ್ರಸಾರದ ಮೂಲಕ, ಜನಸಾಮಾನ್ಯರೂ ವೀಕ್ಷಿಸುವಂತ ವ್ಯವಸ್ಥೆ ಮಾಡಲಾಗಿದೆ.

ಇಂದಿನಿಂದ ಕರ್ನಾಟಕ ಹೈಕೋರ್ಟ್ ಹಾಲ್ ನಂ.1ರ ಕೋರ್ಟ್ ಕಲಾಪದ ಪ್ರಾಯೋಗಿಕ ನೇರ ಪ್ರಸಾರ ಆರಂಭಗೊಂಡಿದ್ದು, ಜನ ಸಾಮಾನ್ಯರು ಯೂಟ್ಯೂಬ್ ನಲ್ಲಿ ಹೈಕೋರ್ಟ್ ಹಾಲ್ ನಂ.1ರ ಕಲಾಪವನ್ನು ನೇರ ಪ್ರಸಾರದ ಮೂಲಕ ವೀಕ್ಷಿಸಬಹುದು.

ಇದನ್ನೂ ಓದಿ: ನನ್ನನ್ನು ಡೇ ಒನ್‌ ಇಂದಲೂ ಟಾರ್ಗೆಟ್‌ ಮಾಡಲಾಗಿದೆ; ಸಂಸದ ಪ್ರತಾಪ್‌ ಸಿಂಹ ವಿರುದ್ಧ ರೋಹಿಣಿ ಸಿಂಧೂರಿ ಕಿಡಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights