ಕಲಬುರಗಿ ಜಾತ್ರೆಯಲ್ಲಿ ಜನವೋ ಜನ! ದೇವರ ಹೆಸರಿನಲ್ಲಿ ನಿಯಮ ಉಲ್ಲಂಘನೆ!

ರೆಡ್ ಅಲರ್ಟ್ ಘೋಷಣೆ ಮಾಡಲಾದ ಗುಲ್ಬರ್ಗ ಜಿಲ್ಲೆಯ ಕಲಬುರಗಿಯಲ್ಲಿ ಸಾಮಾಜಿಕ ಅಂತರ ಮರೆತು ನಿನ್ನೆ ಅದ್ದೂರಿ ಜಾತ್ರೆ ಮಾಡಿದ ಘಟನೆ ನಡೆದಿದೆ.

ಹೌದು… ಕಲಬುರಗಿಯ ರಾವುರ್ ಗ್ರಾಮದಲ್ಲಿ ನಿನ್ನೆ ಅದ್ಧೂರಿ ಜಾತ್ರೆ ಮಾಡಲಾಗಿದೆ. ಈ ಜಾತ್ರೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಜನ ಭಾಗವಹಿಸಿದ್ದಾರೆ. ಜೊತೆಗೆ  ಸಾಮಾಜಿಕ ಅಂತರವಾಗಲಿ ಮಾಸ್ಕ್ ಆಗಲಿ ಜನ ಬಳಕೆ ಮಾಡದಾ ಹಿನ್ನೆಲೆಯಲ್ಲಿ ಜಾತ್ರೆಗೆ ನಡೆಸಲು ಅನುಮತಿ ನೀಡಿದವರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ,  “ರಾವುರ್ ನಲ್ಲಿ ಜಾತ್ರೆ ನಡೆದ ಹಿನ್ನೆಲೆಯಲ್ಲಿ ಪಿಎಸ್ ಐ ಸಸ್ಪಂಡ್ ಮಾಡಲಾಗಿದೆ. ದೇವಸ್ಥಾನದ ಕಮಿಟಿ ಮೆಂಬರ್ಸ್ ಮೇಲೆ ಎಫ್ ಐ ಆರ್ ಮಾಡಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಜೊತೆ ಈ ಹಿಂದೆ ಜಾತ್ರೆ ನಡೆಸಬಾರದೆಂದು ಸಭೆ ಮಾಡಲಾಗಿತ್ತು. ಆದರೆ ಸಭೆ ವೇಳೆ ಜಾತ್ರೆ ನಡೆಸುವುದಿಲ್ಲ ಎಂದಿದ್ದ ಮಂಡಳಿ ಏಕಾಏಕಿ ಜಾತ್ರೆ ಮಾಡಿದ್ದಾರೆ. ಇದರ ವಿರುದ್ಧ ಕ್ರಮ ಜಾರಿಗೊಳಿಸಿದ್ದೇವೆ” ಎಂದಿದ್ದಾರೆ.

ಬೇಲೂರು, ಮೇಲುಕೋಟೆ, ಮೈಸೂರಿನಲ್ಲಿ ಯುಗಾದಿ ಸಂದರ್ಭದಲ್ಲಿ ಅತೀ ದೊಡ್ಡ ಜಾತ್ರೆಗಳು ನಡೆಯುತ್ತವೆ. ಆದರೂ ಸಣ್ಣ ಪ್ರಮಾಣದ ಪೂಜೆ ಮಾಡಿ ಸುಮ್ಮನಾಗಲಾಗಿದೆ. ಆದರೆ ಕಲಬುರಗಿಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದರೂ ನೂರಾರು ಜನ ಸೇರಿ ಜಾತ್ರೆ ಮಾಡಿದ್ದಾರೆ ಎಂದರೆ ಇದಕ್ಕೆ ಉನ್ನತ ಮಟ್ಟದ ಅಧಿಕಾರಿಗಳ ಸಹಾಯ ಇದೆ ಎನ್ನಲಾಗುತ್ತಿದೆ. ಸಭೆಯಲ್ಲಿ ಜಾತ್ರೆ ಸಡೆಸೋದಿಲ್ಲ ಎದ್ದಿದ್ದ ದೇವಸ್ಥಾನದ ಆಡಳಿತ ಮಂಡಳಿ ಜಾತ್ರೆಗೆ ಅವಕಾಶ ಮಾಡಿಕೊಟ್ಟಿದ್ದರ ಯಾವ ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವುದನ್ನ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights