ಜಾತಿ ಗಣತಿ ಸಮರ್ಥಸಿ, ಕೇಂದ್ರ ಸರ್ಕಾರ ವಿರುದ್ಧ ಸಿಡಿದ ಜಯಮೃತ್ಯುಂಜಯ ಸ್ವಾಮೀಜಿ..!

ಸರ್ಕಾರ ಜಾತಿ ಗಣತಿಯನ್ನು ತಿರಸ್ಕರಿಸುವ ವಿಚಾರದ ಬಗ್ಗೆ ಬಾಗಲಕೋಟೆಯಲ್ಲಿ ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ವಿರೋಧಿಸಿದ್ದಾರೆ.

ಜಾತಿ ಗಣತಿ ಅನ್ನೋದಕ್ಕಿಂತ ಅದು ಸಾಮಾಜಿಕ, ಆರ್ಥಿಕ, ಸಮೀಕ್ಷೆ. ಬ್ರಿಟಿಷರ ಅವಧಿ ನಂತ್ರ ರಾಜ್ಯ ಸರ್ಕಾರ ಇದನ್ನು ಈಗ ಮಾಡಿದೆ. ಅದನ್ನು ಪರಿಶೀಲಿಸೋಣ,ಸಾಧ್ಯವಾದ್ರೆ ಇನ್ನಷ್ಟು ಸಾಮಾಜಿಕ ಆರ್ಥಿಕ, ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಿ. ಆದ್ರೆ ಸಾಮಾಜಿಕ ಆರ್ಥಿಕ ಗಣತಿಯನ್ನು ನಿರ್ಲಕ್ಷ್ಯಸೋದು ಸರಿಯಲ್ಲ. ಕಾಣದ ಶಕ್ತಿಗಳು ಬಿಎಸ್ವೈ ಕೈ ಕಟ್ಟಿ ಹಾಕ್ತಿದ್ದಾರೆ. ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಕೇಂದ್ರದಲ್ಲಿ ಆಡಳಿತ ಪಕ್ಷ ಬೇರೆಯಾಗಿತ್ತು. ಅಂತಹ ಸಂದರ್ಭದಲ್ಲಿ ಬಿಎಸ್ವೈ ಉತ್ತರ ಕರ್ನಾಟಕದ ನೆರೆಗೆ ಸ್ಪಂದಿಸಿದ್ರು.

ಅವ್ರ ಕಾರ್ಯ ನೋಡಿ ಬೇರೆ ರಾಜ್ಯದ ಸಿಎಂಗಳು ಬೆಂಬಲಿಸಿದ್ರು. ಬಿಎಸ್ವೈಯಲ್ಲಿ ಅಂತಹ ಶಕ್ತಿ, ಧೈರ್ಯ ಈಗಲೂ ಇದೆ.‌ ಬಿಎಸ್ವೈ ಗೆ ಉತ್ತರ ಕರ್ನಾಟಕದ ಜನ್ರ ಬೆಂಬಲವೇ ಬಹಳವಿದೆ. ಈ ಭಾಗದ ಜನ್ರು ಬಿಎಸ್ವೈ ಮೇಲೆ ಅಸಮಾಧಾನಗೊಳ್ಳಲಿ ಎಂದು ಪರಿಹಾರ ಕಾರ್ಯಕ್ಕೆ ಪ್ರೋತ್ಸಾಹ ಕೊಡ್ತಿಲ್ಲ. ಈ ಬಗ್ಗೆ ಬಿಎಸ್ವೈ ಪುತ್ರ ವಿಜಯೇಂದ್ರ ಬಹಳ ನೊಂದು ಮಾತನಾಡಿದ್ದಾರೆ. ಸಿಎಂಗೆ ಸಹಕಾರ ಕೊಡ್ರಿ.

ನಿಮ್ಮ ವ್ಯಕ್ತಿಗತ ಭಿನ್ನಾಭಿಪ್ರಾಯವನ್ನ ಕೊಟ್ಟು ಇಂತಹ ನೆರೆ ಸಂತ್ರಸ್ತರ ಜೀವದ ಜೊತೆ ಚೆಲ್ಲಾಡವಾಡಬೇಡಿ. ಕೇಂದ್ರ ಸರ್ಕಾರ ಎಚ್ಚೆತ್ತು ಬಿಹಾರ, ಮಹಾರಾಷ್ಟ್ರಕ್ಕಿಂತಲೂ ಹೆಚ್ಚು ಕರ್ನಾಟಕಕ್ಕೆ ಪರಿಹಾರ ಕೊಡಿ ಎಂದು ಕೇಂದ್ರ ಸರ್ಕಾರ ವಿರುದ್ಧ ಸ್ವಾಮೀಜಿ ಸಿಡಿದಿದ್ದಾರೆ.ರಾಜ್ಯದಿಂದ ಕೇಂದ್ರಕ್ಕೆ ನಾವೂ ತೆರಿಗೆ ಕಟ್ಟಿತ್ತೀವಿ. ದೇಶ ಉಳಿಯಬೇಕು, ಅಭಿವೃದ್ಧಿಯಾಗಲಿ ಎಂದು ತೆರಿಗೆ ಕಟ್ಟಿತ್ತೀವಿ. ಯಾವದೇ ರಾಜ್ಯದಲ್ಲಿ ಪ್ರಕೃತಿ ವಿಕೋಪವಾದ್ರೆ ಮಾನವೀಯತೆ ದೃಷ್ಟಿಯಿಂದ ಕೇಂದ್ರ ಸ್ಪಂದಿಸಬೇಕು.

ಬಿಹಾರ,ಉತ್ತರ ಪ್ರದೇಶದಲ್ಲಿಯಾದ್ರೆ ಕೇಂದ್ರ ಸ್ಪಂದಿಸುತ್ತೆ. ಕರ್ನಾಟಕದ ಬಗ್ಗೆ ಯಾಕೆ ನಿಮಗೆ ನಿರ್ಲಕ್ಷ್ಯ!? ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ಯಾಕೆ. ೨೦೦೯ರಲ್ಲಿ ಪ್ರವಾಹ ಬಂದಾಗ ಸಿಎಂ ಬಿಎಸ್ವೈ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಿದ್ರು. ಆಗ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಟ್ಟಿದ್ರು. ಈಗ ಬಿಎಸ್ವೈ ಮೇಲೆ ಉತ್ತರ ಕರ್ನಾಟಕದ ಜನ್ರು ಅಸಮಾಧಾನಗೊಳ್ಳಲಿ ಎಂದು ಕೇಂದ್ರ ಸರ್ಕಾರ ಪಿತೂರಿ ಮಾಡಿದೆ. ಇದಕ್ಕಾಗಿಯೇ ಬಸವರಾಜ ಯತ್ನಾಳ ಉತ್ತರಕರ್ನಾಟಕ ಸಂತ್ರಸ್ತರ ಬಗ್ಗೆ ಧ್ವನಿಯೆತ್ತಿ ದ್ದಾರೆ. ಶಾಸಕ ಬಸವರಾಜ ಯತ್ನಾಳ ಮಾತಿಗೆ ಬೆಂಬಲವಿದೆ ಎಂದಿದ್ದಾರೆ ಸ್ವಾಮೀಜಿ.

ನರೇಂದ್ರ ಮೋದಿ ವಿಶ್ವ ಗುರು ಭಾರತ ಮಾಡಲು ಹೊರಟಿದ್ದೀರಿ. ಕೇವಲ ಉತ್ತರ ಭಾರತ ವಿಶ್ವ ಗುರು ಮಾಡಿದ್ರೆ ಸಾಲದು. ಕರ್ನಾಟಕದಲ್ಲಿನ ಜನ್ರ ಸಮಸ್ಯೆ ಬಗಹರಿಸಿದಾಗ ಮಾತ್ರ ವಿಶ್ವ ಗುರು ಆಗಲು ಸಾಧ್ಯ. ಪ್ರಧಾನಿ ಕರ್ನಾಟಕ ರಾಜ್ಯ ಕಡೆಗಣಿಸಿದ್ದಾರೆ. ೨೫ ಜನ ಸಂಸದರು ದನಿಯೆತ್ತದಿರೋದು ವಿಷಾದನೀಯ.ಕರ್ನಾಟಕ ರಾಜ್ಯದ ಜನ ಅಭಿವೃದ್ಧಿ ಮಾಡಲಿ ಎಂದು ನಿಮಗೆ ವೋಟ್ ಕೊಟ್ಟಿದ್ದಾರೆ. ಯಾಕೆ ಇಲ್ಲಿನ ಜನ್ರ ಬಗ್ಗೆ ಮಾತನಾಡುತ್ತಿಲ್ಲ. ೨೫ ಬಿಜೆಪಿ ಸಂಸದರು ನರೇಂದ್ರ ಮೋದಿ ಬಳಿ ಹೋಗಿ ಪರಿಹಾರಕ್ಕೆ ಆಗ್ರಹಿಸಿ. ಸಾಧ್ಯವಾದ್ರೆ ಕೇಂದ್ರದಿಂದ ಪರಿಹಾರ ತನ್ನಿ. ಇಲ್ಲವಾದ್ರೆ ರಾಜಿನಾಮೆ ಕೊಟ್ಟು ಸಂತ್ರಸ್ತರ ಹೋರಾಟಕ್ಕೆ ಬನ್ನಿ ಎಂದಿದ್ದಾರೆ.

ತೇಜಸ್ವಿ ಸೂರ್ಯ ಈಗ ಬೆಳೆಯುವ ರಾಜಕಾರಣಿ. ಉತ್ತರ ಕರ್ನಾಟಕದ ಜನ್ರ ಕಷ್ಟ ಅವ್ರಿಗೆ ಗೊತ್ತಿಲ್ಲ. ಬೇಜವಾಬ್ದಾರಿ ಹೇಳಿಕೆ ನೀಡಿರೋ ಸಂ‌ಸದ ಸೂರ್ಯ ಈ ಭಾಗದ ಜನ್ರ ಕ್ಷಮೆ ಕೇಳಲಿ. ಅಪ್ರಬುದ್ಧ ಮಾತುಗಳನ್ನಾಡುವದು ಬಿಟ್ರೆ ತೇಜಸ್ವಿ ಸೂರ್ಯ ಗೆ ಇನ್ನು ಭವಿಷ್ಯವಿದೆ. ಕೇವಲ ಜೈಕಾರ ಹಾಕಿದ್ರೆ ದೇಶ ಭಕ್ತರು ಆಗಲು ಸಾಧ್ಯವಿಲ್ಲ.

ಕಟೀಲ್ ಎತ್ತಿ ಕಟ್ಟಿ ಬಿಎಸ್ವೈ ಮೂಲೆಗುಂಪು ಮಾಡ್ತಿರುವ ವಿಚಾರ ಮಾತನಾಡಿದ ಅವರು, ಬೆಂಗಳೂರು ಮಹಾನಗರ ಮೇಯರ್ ಕನ್ನಡಿಗರನ್ನು ಮಾಡುವ ವಿಚಾರವಾಗಿ ಬಿಎಸ್ವೈ ಮಾತಿಗೆ ಮನ್ನಣೆ ಸಿಕ್ಕಿಲ್ಲ. ಬಿಎಸ್ವೈ ಮಾತಿಗೆ ಮನ್ನಣೆ ಸಿಗದಕ್ಕೆ ಕನ್ನಡಿಗರು ಬಹಳ ಬೇಸರಗೊಂಡಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಬಿಎಸ್ವೈ ಗಟ್ಟಿ ತೀರ್ಮಾನ ತೆಗೆದುಕೊಳ್ಳಲು ಆಗ್ತಿಲ್ಲ. ಹಾಗಾಗಿ ನೊಂದುಕೊಂಡು ತಂತಿ ಮೇಲೆ ನಡೀತಿದ್ದೇನೆ ಅಂತ ಹೇಳಿರಬೇಕು ಎಂದು ಹರಿಹಾಯ್ದಿದ್ದಾರೆ ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights