ಸರ್ಕಾರ-ರೈತರ ನಡುವೆ 9ನೇ ಸುತ್ತಿನ ಸಭೆ: ರೈತರಿಗಿಲ್ಲ ಯಾವುದೇ ನಿರೀಕ್ಷೆ!

ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟ 52ನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನಗಳಲ್ಲಿ ಸರ್ಕಾರ ಮತ್ತು ರೈತರ ನಡುವೆ 8 ಸುತ್ತಿನ ಮಾತುಕತೆಗಳು ನಡೆದಿದ್ದು ಇಂದು (ಜ. 15) 9ನೇ ಸುತ್ತಿನ ಮಾತುಕತೆ ನಿಗದಿಯಾಗಿದೆ.

ಆದರೆ ರೈತ ಹೋರಾಟ ಪ್ರಶ್ನಿಸಿ ಎರಡು ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಮ್‌ ಕೋರ್ಟ್‌ ಮಂಗಳವಾರ ರೈತರ ಬೇಡಿಕೆ ಆಲಿಸಿ, ಕಾಯ್ದೆಗಳ ಅನುಷ್ಠಾನ ಕುರಿತು ಸ್ಪಷ್ಟತೆ ಪಡೆಯಲು ಸಮಿತಿ ರಚಿಸಿ ಆದೇಶ ಹೊರಡಿಸಿತ್ತು.

ಈ ಹಿನ್ನೆಲೆಯಲ್ಲಿ ಸಮಾನಾಂತರವಾಗಿ ಸರ್ಕಾರದೊಂದಿಗೆ ಮಾತುಕತೆ ನಡೆಸುವುದು ವ್ಯರ್ಥ ಎಂಬ ನಿಲುವಿದ್ದರೂ ಇಂದು ಸಭೆ ನಡೆಯುತ್ತಿದೆ. ಕೇಂದ್ರ ಸರ್ಕಾರ ರೈತರ ಮನವೊಲಿಸುವ ನಿಟ್ಟಿನಲ್ಲಿ ಮಾತುಕತೆಗೆ ಸಿದ್ಧವಾಗಿದ್ದು, ದರ್ಶನ್‌ಪಾಲ್‌ ಹಾಗೂ ಹಿರಿಯ ರೈತ ಮುಖಂಡರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು, ಕನಿಷ್ಠ ಬೆಂಬಲ ಬೆಲೆ ಕುರಿತು ತಮ್ಮ ಬೇಡಿಕೆಯ ವಿಷಯದಲ್ಲಿ ಪಟ್ಟು ಹಿಡಿದಿರುವ ರೈತರು ಕಳೆದ 8 ಸುತ್ತಿನ ಮಾತುಕತೆಗಳಲ್ಲಿ ಕೇಂದ್ರ ಸರ್ಕಾರದ ಯಾವುದೇ ಸಲಹೆಗಳಿಗೆ ಒಪ್ಪಿಲ್ಲ.

ಈಗ ಸುಪ್ರೀಮ್‌ಕೋರ್ಟ್‌ ಸಮಿತಿ ರಚಿಸಿದ್ದು, ರೈತರೊಂದಿಗೆ ಸಮಾಲೋಚಿಸುವುದಕ್ಕೆ ಜ. 19ರಂದು ಸಭೆ ನಿಗದಿಯಾಗಿದೆ. ಅಂದರೆ ಇಂದಿನ 9ನೇ ಸುತ್ತಿನ ಮಾತುಕತೆ ಸರ್ಕಾರ ಮತ್ತು ರೈತರ ನಡುವಿನ ನಡೆಯುವ ಕಡೆಯ ಮಾತುಕತೆಯಾಗಲಿದೆ.

ಈ ಸಭೆಯ ಬಗ್ಗೆ ಹೋರಾಟ ನಿರತ ರೈತರು, ರೈತ ನಾಯಕರು ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲವಾದರೂ, ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.


ಇದನ್ನೂ ಓದಿ: ರೈತ ಹೋರಾಟವನ್ನು ಖಾಲಿಸ್ತಾನಿ ತಂತ್ರವೆಂದ ಝೀ ನ್ಯೂಸ್‌: ಮಾಧ್ಯಮಕ್ಕೆ ತಿರುಗೇಟು ಕೊಟ್ಟ ರೈತರು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights