ಇಂಗ್ಲೆಂಡ್ ಪ್ರಧಾನಿಗೆ ತಕ್ಕ ಶಾಸ್ತಿಯಾಗಿದೆ ಎಂದ ಮೇಯರ್ ಪಕ್ಷದಿಂದಲೇ ವಜಾ

ಇಂಗ್ಲೆಂಡ್​ ಪ್ರಧಾನಿ ಬೋರಿಸ್​ ಜಾನ್ಸನ್​ಗೂ ಕೊರೋನಾ ಸೋಂಕು ತಗುಲಿದೆ. ಭಾನುವಾರ ಆಸ್ಪತ್ರೆಗ ದಾಖಲಾಗಿದ್ದ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. ಹಾಗಾಗಿ ಅವರನ್ನು ಐಸಿಯುಗೆ ಶಿಫ್ಟ್‌ ಮಾಡಿ ಟ್ರೀಟ್‌ಮೆಂಟ್‌ ನೀಡಲಾಗುತ್ತಿತ್ತು. ಈಗ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ. ಈ ಮಧ್ಯೆ ಸಾಕಷ್ಟು ಜನರು ಅವರು ಗುಣಮುಖರಾಗಲಿ ಎಂದು ಹರಿಸಿದ್ದರು. ಆದರೆ, ಅಲ್ಲಿನ ಮೇಯರ್​ ಒಬ್ಬರು ಬೋರಿಸ್​ಗೆ ತಕ್ಕ ಶಾಸ್ತಿ ಆಗಿದೆ ಎಂದು ಹೇಳುವ ಮೂಲಕ ಪಕ್ಷದಿಂದಲೇ ವಜಾಗೊಂಡಿದ್ದಾರೆ.

ಕೊರೊನಾ ಸೋಂಕು ಕಾಣಿಸಿದ್ದರಿಂದ ಬೋರಿಸ್​ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಅವರಲ್ಲಿ ಕೊರೋನಾ ವೈರಸ್​ ಇರುವುದು ದೃಢಪಟ್ಟಿತ್ತು. ಕೇವಲ ಒಂದೇ ದಿನದಲ್ಲಿ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಐಸಿಯುಗೆ ಅವರನ್ನು ಶಿಫ್ಟ್​ ಮಾಡಲಾಗಿತ್ತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಸೇರಿ ಸಾಕಷ್ಟು ಜನರು ಬೋರಿಸ್​ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದರು. ಆದರೆ, ಡರ್ಬಿಶೈರ್ ಜಿಲ್ಲೆಯ  ಹೀನರ್ ನಗರದ​ ಮೇಯರ್​ ಶೀಲಾ ಓಕ್ಸ್​ ಬೋರಿಸ್​ಗೆ ಹಿಡಿ ಶಾಪ ಹಾಕಿದ್ದಾರೆ. ‘ನಾವು ನೋಡಿದ ಅತಿ ಕೆಟ್ಟ ಪ್ರಧಾನಿಗಳಲ್ಲಿ ಬೋರಿಸ್​ ಕೂಡ ಒಬ್ಬರು. ಹೀಗಾಗಿ ಅವರಿಗಿದು ಆಗತಕ್ಕಂಥದ್ದೆ’ ಎಂದು ಹೇಳಿದ್ದರು.

ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶೀಲಾ ಬಹಿರಂಗ ಕ್ಷಮೆಯಾಚಿಸಿದ್ದರು. ಆದರೆ, ಲೇಬರ್​ ಪಕ್ಷದ ಮುಖ್ಯಸ್ಥರು ಶೀಲಾ ಅವರನ್ನು ಪಾರ್ಟಿಯಿಂದಲೇ ವಜಾ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights