ವಾಸನೆ ಮತ್ತು ರುಚಿ ಕಳೆದುಕೊಳ್ಳುವುದು ಕೊರೊನ ಸೋಂಕಿನ ಮೊದಲ ಲಕ್ಷಣಗಳಾಗಿರಬಹದು: ಹೊಸ ಅಧ್ಯಯನ

ಇಡೀ ವಿಶ್ವವೇ ಕೊರೊನ ಬಿಕ್ಕಟ್ಟಿಗೆ ಸಿಕ್ಕಿ ನರಳುತ್ತಿದೆ. ಈ ಬಿಕ್ಕಟ್ಟನ್ನು ಇನ್ನಷ್ಟು ಬಿಗಡಾಯಿಸುತ್ತಿರುವ ಸಂಗತಿ, ಕೊರೊನ ಸೋಂಕು ತಗುಲಿದ ಎಷ್ಟೋ ವ್ಯಕ್ತಿಗಳಿಗೆ ಈ ರೋಗದ ಲಕ್ಷಣಗಳನ್ನು ಪತ್ತೆಹಚ್ಚಲು ಸಾಧ್ಯ ಆಗದೆ ಇರುವುದು. ಅಲ್ಲದೆ ಈ ವೈರಾಣು ಇದ್ದರೂ ಎಷ್ಟೋ ಜನರಿಗೆ ಜ್ವರ ಕೆಮ್ಮಿನ ಲಕ್ಷಣಗಳೂ ಕಾಣುತ್ತಿಲ್ಲ ಆದರೂ ಅವರು ರೋಗಾಣುಗಳನ್ನು ಹರಡಲು ಸಶಕ್ತರಾಗಿರುವುದು. ಸಾಮಾನ್ಯ ಜ್ವರ, ಕೆಮ್ಮು ನೆಗಡಿ ಲಕ್ಷಣಗಳಂತೆಯೇ ಈ ಕೊರೊನ ವೈರಸ್ಸಿನ ರೋಗ ಲಕ್ಷಣಗಳು ಇರುವುದು ತಲೆನೋವಾಗಿ ಪರಿಣಮಿಸಿದೆ.

ಬಹುತೇಕ ಹೆಚ್ಚು ವಯಸ್ಸಿನವರನ್ನು ಮತ್ತು ಪೂರ್ವ ಖಾಯಿಲೆಗಳನ್ನು ಹೊಂದಿರುವವರಿಗೆ ಬಹಳ ಭೀಕರವಾಗಿ ತಟ್ಟುವ ಈ ರೋಗವನ್ನು ಮೊದಲ ದಿನಗಳಲ್ಲೇ ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿದೆ. ಈಗ ಹೊಸ ಅಧ್ಯಯನಗಳ ಪ್ರಕಾರ ಶ್ವಾಸಕೋಶ ಸಂಬಂಧಿ ತೊಂದರೆಗಳಾದ ಕೆಮ್ಮು, ಉಸಿರಾಟದ ತೊಂದರೆ ಮತ್ತು ಜ್ವರದ ಜೊತೆಗೆ ರುಚಿ ಮತ್ತು ವಾಸನೆಯ ಶಕ್ತಿ ಕಳೆದುಕೊಳ್ಳುವುದು ಈ ಖಾಯಿಲೆಯ ಮೊದಲ ಲಕ್ಷಣಗಳಾಗಿರಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ.

ವಿವಿಧ ದೇಶದ ತಜ್ಞರು ಹೇಳುವಂತೆ ಈ ಲಕ್ಷಣಗಳನ್ನು ರೋಗ ಪತ್ತೆ ಹಚ್ಚುವುದಕ್ಕೆ ಬಳಸಬಹುದು ಎಂದು ಕೂಡ ತಿಳಿಸಿರುವುದಾಗಿ ದ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಲಕ್ಷಣ, ಗುಣಮುಖರಾದ ಮೇಲೂ ಸ್ವಲ್ಪ ದಿನ ಉಳಿಯಬಹುದು ಮತ್ತು ಕೆಲವು ವಿರಳ ಪ್ರಕರಣಗಳಲ್ಲಿ ಇದು ಖಾಯಂ ಆಗಿ ಉಳಿಯುವ ಸಾಧ್ಯತೆ ಇದೆ ಎಂದು ಕೆಲವು ವೈದ್ಯಕೀಯ ಸಂಶೋಧಕರು ಹೇಳಿದ್ದಾರೆ.

ದಕ್ಷಿಣ ಕೊರಿಯಾದಲ್ಲಿ ಈ ಸೋಂಕಿಗೆ ಗುರಿಯಾದ ಸುಮಾರು 30% ರೋಗಿಗಳು, ವಾಸನೆ ಪತ್ತೆ ಹಚ್ಚುವ ಶಕ್ತಿಯನ್ನು ಕಳೆದುಕೊಂಡಿರುವುದಾಗಿ ದೂರಿದ್ದಾರೆ. ಇದರ ಬಗ್ಗೆ ಹೆಚ್ಚಿನ ಪರೀಕ್ಷೆಯಾಗಬೇಕಿದೆ ಎಂಬುದು ಕೂಡ ಹಲವು ತಜ್ಞರ ಅಭಿಪ್ರಾಯ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights