ಕರ್ನಾಟಕದಲ್ಲಿ 10,000 ಶಾಲೆಗಳು ಮುಚ್ಚವ ಸಾಧ್ಯತೆ; ಶಿಕ್ಷಣ ಸಂಸ್ಥೆಗಳಲ್ಲಿ ಆತಂಕ!

ಸರಿಯಾದ ಮಾರ್ಗಸೂಚಿಗಳ ಕೊರತೆಯಿಂದಾಗಿ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲು ಅಸಮರ್ಥತವಾದ ರಾಜ್ಯದ ಸುಮಾರು 10,000 ಖಾಸಗಿ ಶಾಲೆಗಳು ಮುಚ್ಚುವ ಹಂತದಲ್ಲಿದ್ದು, ಅವುಗಳ ಸಮಸ್ಯೆಗಳನ್ನು ಬಗೆಹರಿಸಲು ಖಾಸಗಿ ಶಾಲಾ ಸಂಘ ಸರ್ಕಾರಕ್ಕೆ ಮನವಿ ಮಾಡುತ್ತಿದೆ.

ಈ ಶಾಲೆಗಳು ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುತ್ತಿವೆ. ಹೀಗಾಗಿ, ಈ ಶಾಲೆಗಳನ್ನು ಮುಚ್ಚದಂತೆ ಮತ್ತು ಸಮಸ್ಯೆಯನ್ನು ಬಗೆಯರಿಸುವಂತೆ ಸೋಮವಾರದಿಂದ ಆರಂಭವಾಗುವ ಅಧಿವೇಶನಲ್ಲಿ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಖಾಸಗಿ ಶಾಲಾ ಸಂಘವು ವಿರೋಧ ಪಕ್ಷದ ನಾಯಕರಿಗೆ ಅವರಿಗೆ ಮನವಿ ಮಾಡಿದೆ.

10-ದಿನಗಳ ಗಡುವಿನೊಳಗೆ ಅಗ್ನಿಶಾಮಕ ಮತ್ತು ಸುರಕ್ಷತಾ ಪ್ರಮಾಣಪತ್ರಗಳನ್ನು ಪಡೆಯುವಂತೆ ಲೋಕೋಪಯೋಗಿ ಇಲಾಖೆಯ ಮಾರ್ಗಸೂಚಿ ಸೂಚಿಸಿದೆ. ಆದರೆ, “ಇಂದಿಗೂ ಇಲಾಖೆಯಿಂದ ಸರಿಯಾದ ಮಾರ್ಗಸೂಚಿ ಇಲ್ಲದ ಕಾರಣದಿಂದಾಗಿ, ಭ್ರಷ್ಟ ಅಧಿಕಾರಿಗಳು ಹಣ ಸಂಪಾದಿಸಲು ಮತ್ತು ಪ್ರಮಾಣಪತ್ರಗಳನ್ನು ನೀಡಲು ದಾರಿ ಮಾಡಿಕೊಡುತ್ತದೆ. ಇಲಾಖೆ ಪ್ರಮಾಣ ಪತ್ರ ನೀಡುವ ಮಾರುಕಟ್ಟೆಯಾಗಿ ಮಾರ್ಪಟ್ಟಿದೆ” ಎಂದು ಸಂಘವು ಆರೋಪಿಸಿದೆ.

ಇಲಾಖೆಯ ಕಿರುಕುಳ ಸಹಿಸಲಾಗದೆ ಗ್ರಾಮೀಣ ಭಾಗದ ಕೆಲವು ಶಾಲೆಗಳು ಸೇರಿದಂತೆ ಮಠಾಧೀಶರು ನಡೆಸುತ್ತಿರುವ ಸುಮಾರು 10 ಸಾವಿರ ಸಣ್ಣ ಮತ್ತು ಮಧ್ಯಮ ಶಾಲೆಗಳು ಮುಚ್ಚುವ ಹಂತದಲ್ಲಿವೆ ಎಂದು ಮಾನ್ಯತೆ ಪಡೆದ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.

ಇದನ್ನೂ ಓದಿ: ನಾವೇನು ತಿನ್ನಬೇಕು ಎಂದು ನೀವೇಕೆ ನಿರ್ಧರಿಸುತ್ತೀರಿ?: ಮಾಂಸಾಹಾರ ಮಾರಾಟ ನಿಷೇಧಿಸಿದ್ದ ಪಾಲಿಕೆಗೆ ಗುಜರಾತ್ ಹೈಕೋರ್ಟ್‌ ಚಾಟಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights