ಸೇನಾ ಹೆಲಿಕಾಪ್ಟರ್‌ ಪತನ: ವಿವಾದಾತ್ಮಕ ಟ್ವೀಟ್‌ ಮಾಡಿದ್ದ ಯೂಟ್ಯೂಬರ್‌ ಬಂಧನ!

ತಮಿಳುನಾಡಿ ಕೂನೂರ್‌ನಲ್ಲಿ ಸೇನಾ ಹೆಲಿಕಾಪ್ಟರ್‌ ಬುಧವಾರ ಪತನಗೊಂಡು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರದ ವಿರುದ್ದ ವಿವಾದಾತ್ಮಕ ಟ್ವೀಟ್‌ ಮಾಡಿದ್ದ ಯೂಟ್ಯೂಬರ್ ಮರಿದಾಸ್ ಎಂಬುವವರನ್ನು ಸೈಬರ್ ಕ್ರೈಂ ಪೊಲೀಸರು ತಮಿಳುನಾಡಿನ ಮಧುರೈನಲ್ಲಿ ಗುರುವಾರ ಬಂಧಿಸಿದ್ದಾರೆ.

ಡಿಎಂಕೆ ಆಡಳಿತದಲ್ಲಿ ತಮಿಳುನಾಡು ಕಾಶ್ಮೀರವಾಗಿ ಬದಲಾಗುತ್ತಿದೆಯೇ. ಸೇನಾ ಹೆಲಿಕಾಪ್ಟರ್ ದುರಂತದ ಹಿಂದೆ ಕಾಣದ ಕೈಗಳಿವೆ ಎಂದು ತೋರುತ್ತಿದೆ. ದೇಶಕ್ಕೆ ನಿಷ್ಠೆ ಇಲ್ಲದ ಜನರು ಒಗ್ಗೂಡಿದಾಗ ಸಂಚು ರೂಪಿಸುವ ಸಾಧ್ಯತೆಗಳಿವೆ ಮತ್ತು ಪ್ರತ್ಯೇಕತಾವಾದಿ ಶಕ್ತಿಗಳನ್ನು ತಡೆಯಬೇಕು ಎಂದು ಮರಿದಾಸ್‌ ವಿವಾದ ಸೃಷ್ಟಿಸುವ ಟ್ವೀಟ್ ಮಾಡಿದ್ದರು. ನಂತರ, ಆ ಟ್ವೀಟ್‌ ಅನ್ನು ಡಿಲೀಟ್‌ ಮಾಡಿದ್ದರು.

ಟ್ವೀಟ್‌ನ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ, ಮದುರೈ ಪೊಲೀಸರು ಕೆ ಪುದೂರಿನ ಸೂರ್ಯ ನಗರದಲ್ಲಿರುವ ಮರಿದಾಸ್ ಅವರ ಮನೆಗೆ ತೆರಳಿ ಅವರನ್ನು ಬಂಧಿಸಿದ್ದಾರೆ.

ಈ ವೇಳೆಗೆ ಅವರ ಮನೆಯ ಬಳಿ ಬಿಜೆಪಿ ಸದಸ್ಯರು ಮರಿದಾಸ್‌ ಅವರನ್ನು ಬಂಧಿಸದಂತೆ ಒತ್ತಾಯಿಸಿದ್ದಾರೆ. ಆದರೂ, ಬಗ್ಗದ ಪೊಲೀಸರು ಮರಿದಾಸ್‌ರನ್ನು ಬಂಧಿಸಿದ್ದಾರೆ. ಪೊಲೀಸರ ವಿರುದ್ದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಮರಿದಾಸ್ ವಿರುದ್ಧ ಸೈಬರ್ ಕ್ರೈಂ ಪೊಲೀಸರು ಐಪಿಸಿ ಸೆಕ್ಷನ್ 153 (ಎ), 504, 505 (ii), 505 (i) (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಬಾಬರಿ ಮಸೀದಿ ತೀರ್ಪು ನೀಡಿದ ದಿನ ಇತರ ನ್ಯಾಯಾಧೀಶರನ್ನು ಡಿನ್ನರ್‌ಗೆ ಕರೆದೊಯ್ದು, ವೈನ್ ಕುಡಿಸಿದ್ದೆ: ಮಾಜಿ CJI ಗೊಗೊಯ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights