ಜನಜಾಗೃತಿಗಾಗಿ ಸತತ 24 ಗಂಟೆಗಳ ಕಾಲ ಸುಮಾರು 550 ಕಿ. ಮೀ. ಸೈಕಲ್ ತುಳಿದರು..!

ಇವರೆಲ್ಲ ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಿದವರು. ಆದರೆ, ಜನರಲ್ಲಿ ಹೆಚ್ಚುತ್ತಿರುವ ಆ ಒಂದು ಕಾಯಿಲೆಗೋಸ್ಕರ ಸತತ 24 ಗಂಟೆಗಳ ಕಾಲ ಸೈಕಲ್ ತುಳಿದಿದ್ದಾರೆ. ಇವರು ಸೈಕಲ್ ಮೂಲಕವೇ ಕೇವಲ 24 ಗಂಟೆಗಳಲ್ಲಿ ಕ್ರಮಿಸಿದ ದೂರ ಸುಮಾರು 550 ಕಿ. ಮೀ. ಇವರ ಈ ವಿನೂಥನ ಸಾಧನೆ ಮತ್ತು ಜಾಗೃತಿ ಕಾರ್ಯಕ್ರಮ ಎಲ್ಲರ ಹುಬ್ಬೆರಿವಂತೆ ಮಾಡಿದೆ.

ಮೂರು ಜನ ಸೈಕ್ಲಿಷ್ಷ್‌ಗಳು ಸತತ 24 ಗಂಟೆಗಳ ಕಾಲ ಸತತ ಸೈಕಲ್ ತುಳಿದು ವಿನೂತನ ಜಾಗೃತಿಗೆ ಮುಂದಾಗಿದ್ದಾರೆ. ಸೈಕಲ್ ಮೇಲೆಯೇ ರಾಜ್ಯ, ದೇಶ, ವಿಶ್ವ ಸುತ್ತಿದ ಉದಾಹರಣೆಗಳು ಸಾಕಷ್ಟಿವೆ. ಆದರೆ, ಸತತ 24 ಗಂಟೆಗಳ ಕಾಲ ಹಗಲು ಮತ್ತು ರಾತ್ರಿ ಅದೂ ಕೂಡ ಮೈ ಕೊರೆಯುವ ಚಳಿಯಲ್ಲಿ ಈ ಮೂರು ಜನ ಸೈಕಲ್ ತುಳಿಯುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ.

ಮಧುಮೇಹಕ್ಕೆ ಸೈಕ್ಲಿಂಗ್ ಮದ್ದು ಎಂಬ ಸಂದೇಶದೊಂದಿಗೆ ಬೆಂಗಳೂರಿನ ವೆಂಕಟೇಶ ಶಿವರಾಂ, ಮಂಜುನಾಥ ನಾಗರಾಜ ಮತ್ತು ವಿಜಯಪುರದ ಶ್ರೀಧರ ಸವಣೂರ ಈ ವಿಶೇಷ ಸಾಧನೆ ಮಾಡಿದವರು. ನಿನ್ನೆ ಬೆಂಗಳೂರಿನಲ್ಲಿ ಪೊಲೀಸ್ ಆಯುಕ್ತ ಭಾಸ್ಕರರಾವ್ ಇವರನ್ನು ಬೆಳಿಗ್ಗೆ 6 ಗಂಟೆಗೆ ಶುಭ ಕೋರಿ ಬೀಳ್ಕೊಟ್ಟಿದ್ದರು. ಈ ಮೂರು ಜನ ಬೆಂಗಳೂರಿನಿಂದ ಹಕಲು ರಾತ್ರಿ ಸಂಚರಿಸಿ ಸುಮಾರು 550 ಕಿ. ಮೀ. ಸೈಕಲ್ ತುಳಿದು ಬೆಳಿಗಗ್ೆ ವಿಜಯಪುರಕ್ಕೆ ಬಂದಿದ್ದಾರೆ. ಇವರಲ್ಲಿ ವೆಂಕಟೇಶ ಶಿವರಾಮ ಭಾರತೀಯ ಸಂಕ್ಲಿಂಗ್ ಸಂಘದ ಮಾಜಿ ಮ್ಯಾನೇಜರ್ ಆಗಿದ್ದರೆ, ಮಂಜುನಾಥ ಸಾಫ್ಟವೇರ್ ಎಂಜಿನಿಯರ್. ಇನ್ನು ಶ್ರೀಧರ ಸವಣೂರು ಅಂತಾರಾಷ್ಟ್ರೀಯ ಸೈಕ್ಲಿಂಗ್ ಪಟು. ಇವರೆಲ್ಲ ಉತ್ತಮ ಸ್ಥಿತಿಯಲ್ಲಿ ಇದ್ದವರೆ. ಆದರೆ, ಸಮಾಜದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಕಾಯಿಲೆಯೊಂದರ ಕುರಿತು ಜಾಗೃತಿಗಾಗಿ ಇಷ್ಟೋಂದುದೂರ ಕ್ರಮಿಸುವ ಮೂಲಕ ಗಮನ ಸೆಳೆದಿದ್ದಾರೆ.

ಹೀಗೆ ರಾಜಧಾನಿ ಬೆಂಗಳೂರಿನಿಂದ ಬಸವನಾಡು ವಿಜಯಪುರಕ್ಕೆ ಆಗಮಿಸಿದ ಈ ಸೈಕ್ಲಿಷ್ಟ್‌ಗಳನ್ನು ವಿಜಯಪುರ ನಗರದ ಹೊರ ವಲಯದಲ್ಲಿರುವ ಹಿಟ್ನಳ್ಳಿ ಟೋಲ್ ನಾಕಾದ ಬಳಿ ವಿಜಯಪುರದ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು, ಆಸ್ಪತ್ರೆ ವತಿಯಿಂದ ಬಿ. ಎಲ್. ಡಿ. ಇ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಉಪ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಅಭಿಯಾನ ಉಸ್ತುವಾರಿ ಡಾ. ವಿಕಾಸ ದೇಸಾಯಿ, ವಿಜಯಪುರ ಸೈಕ್ಲಿಂಗ್ ಗ್ರೂಪ್ನ ಡಾ. ಮಹಾಂತೇಶ ಬಿರಾದಾರ, ಹಾಗೂ ಬಿದನೂರ ಪೆಟ್ರೋಲ್ ಬಂಕ್ ಬಳಿ ಉದ್ಯಮಿ ಮತ್ತು ವಿಜಯಪುರದ ಪ್ರತಿಷ್ಠಿತ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ರಮೇಶ ಬಿದನೂರ ಹಾಗೂ ಸ್ನೇಹಿತರು ಸ್ವಾಗತಿಸಿ ಸನ್ಮಾನಿಸಿ ಗೌರವಿಸಿದರು. ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚಿನ ದೂರ ಕ್ರಮಿಸಿರುವದು ದಾಖಲೆಯಾಗಿದೆ ಎಂದು ಪ್ರಶಂಸಿದರು.

ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಧುಮೇಹ ಕಾಯಿಲೆಗೆ ತಮ್ಮ ಮೆಚ್ಚಿನ ಹವ್ಯಾಸವಾದ ಸೈಕ್ಲಿಂಗ್ ಮೂಲಕವೇ ಅರಿವು ಮೂಡಿಸಲು ಮುಂದಾದ ಈ ಮೂರು ಜನರು ಹಗಲು ಮತ್ತು ರಾತ್ರಿ ಸೈಕ್ಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ, ಮಧುಮೇಹಕ್ಕೆ ಸೈಕ್ಲಿಂಗ್ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂಬುದರ ಕುರಿತೂ ಸೈಕ್ಲಿಂಗ್ ಮೂಲಕವೇ ಜನಜಾಗೃತಿಗೆ ಮುಂದಾಗಿರುವ ಇವರ ಈ ಉದ್ಧೇಶ ಈಡೇರಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights