ನೋಟ್ಸ್‌ ನೀಡಲು ಬಂದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ; ಆರೋಪಿ ಬಂಧನ

ಅಪ್ರಾಪ್ತ ಬಾಲಕಿಗೆ ನೀರಿನಲ್ಲಿ ಪ್ರಜ್ಞೆ ತಪ್ಪುವ ಔಷಧ ನೀಡಿ ಅತ್ಯಾಚಾರವೆಸಗಿದ ಆರೋಪದಲ್ಲಿ ಅಸ್ಲಂ ಎಂಬ ಆರೋಪಿಯನ್ನು ತುಮಕೂರು ಜಿಲ್ಲೆಯ ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.

ಕೆಲವು ದಿನಗಳ ಹಿಂದೆ ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳು ನೋಟ್ಸ್ ನೀಡುವುದಕ್ಕಾಗಿ ಗೆಳತಿಯ ಮನಗೆ ಹೋಗಿದ್ದಳು. ಆಗ ಆರೋಪಿಯು ವಿದ್ಯಾರ್ಥಿನಿಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.

ವಿದ್ಯಾರ್ಥಿನಿಯು ಆರೋಗ್ಯ ಸಂಬಂಧಿತಿ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ತೆರಳಿದ್ದಾಗ ಆಕೆ ಗರ್ಭಿಣಿಯಾಗಿರುವುದು ಕಂಡುಬಂದ ನಂತರ ವಿಚಾರಿಸಲಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಯ ವಿರುದ್ಧ ಪೋಕ್ಸೊ ಸೇರಿದಂತೆ ಇತರ ಪ್ರಕರಣಗಳನ್ನು ದಾಖಲಿಸಿರುವ ಕೊರಟಗೆರೆ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಎನ್ನುವುದು ಅತಿ ಕ್ರೂರ ಅಪರಾಧವಾಗಿದೆ. ಅದಕ್ಕೆ ತೀವ್ರತೆರನಾದ ಶಿಕ್ಷೆ ವಿಧಿಸಲಾಗುತ್ತದೆ. 18 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವು ಪೊಕ್ಸೊ ಕಾಯ್ದೆಯಡಿ ಬರಲಿದ್ದು, ಆರೋಪಿಯೇ ತಾನು ತಪ್ಪಿತಸ್ಥನಲ್ಲ ಎಂದು ಸಾಬೀತುಪಡಿಸಬೇಕಾಗುತ್ತದೆ. ಈ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸುವುದರ ಜೊತೆಗೆ ಅತ್ಯಾಚಾರಕ್ಕೆ ತೀವ್ರ ಶಿಕ್ಷೆಯಿದೆಯೆಂದು ಸರ್ಕಾರ ಎಲ್ಲೆಡೆ ಪ್ರಚಾರ ಮಾಡಬೇಕಿದೆ. ಜೊತೆಗೆ ಮಹಿಳಾ ಸಮಾನತೆ, ರಕ್ಷಣೆ ಮತ್ತು ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆ ಮೂಲಕ ಅತ್ಯಾಚಾರಗಳೆಂಬ ಹೀನ ಕೃತ್ಯಗಳನ್ನು ತಡೆಯಲು ಸಾಧ್ಯ.

ಇದನ್ನೂ ಓದಿ: ಬೆಂಗಳೂರು: ಯುವಕನಿಗೆ ಮೂತ್ರ ಕುಡಿಸಿದ ಪೊಲೀಸರು; ಪಿಎಸ್‌ಐ ಅಮಾನತು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights