ಸರ್ಕಾರಿ ಬಸ್‌ನಲ್ಲಿ ಜನಿಸಿದ ಇಬ್ಬರು ಹೆಣ್ಣು ಮಕ್ಕಳಿಗೆ ಜೀವನ ಪರ್ಯಂತ ಉಚಿತ ಬಸ್‌ ಪಾಸ್‌!

ಕೆಲವು ತಿಂಗಳುಗಳ ಹಿಂದೆ ತೆಲಂಗಾಣ ಸರ್ಕಾರಿ ಬಸ್‌ನಲ್ಲಿ ಇಬ್ಬರು ಮಹಿಳೆಯರು ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಬಸ್ಸಿನಲ್ಲಿ ಜನಿಸಿದ ಈ ಇಬ್ಬರೂ ಹೆಣ್ಣು ಮಕ್ಕಳಿಗೆ ಅವರ ಜೀವನ ಪರ್ಯಂತ ಉಚಿತ ಬಸ್‌ ಪಾಸ್‌ ನೀಡುವುದಾಗಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಘೋಷಿಸಿದೆ.

ಕೆಲವು ದಿನಗಳ ಹಿಂದೆ ಸರ್ಕಾರಿ ಬಸ್​ನಲ್ಲಿ ತೆರಳುವ ವೇಳೆ ಇಬ್ಬರು ಪ್ರತ್ಯೇಕ ಮಹಿಳೆಯರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಬಸ್​​ನಲ್ಲಿದ್ದ ಸಹಪ್ರಯಾಣಿಕ ಮಹಿಳೆಯರು ನೆರವು ನೀಡಿ, ಅವರಿಗೆ ಹೆರಿಗೆ ಮಾಡಿಸಿ ಆಸ್ಪತ್ರೆಗೆ ದಾಖಲಿಸಿದ್ದರು.

ತೆಲಂಗಾಣದ ನಾಗರಕರ್ನೂಲು ಡೀಪೋಗೆ ಸೇರಿದ ಬಸ್​ವೊಂದರಲ್ಲಿ ನವೆಂಬರ್ 30ರಂದು ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅಲ್ಲದೆ, ಆಸಿಫಾಬಾದ್ ಡಿಪೋಗೆ ಸೇರಿದ ಬಸ್​ನಲ್ಲಿ ಡಿಸೆಂಬರ್​ 7ರಂದು ಸಿದ್ದಿಪೇಟೆ ಬಳಿ ಇನ್ನೋರ್ವ ಮಹಿಳೆ ಬಸ್​ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಇದೀಗ ಆ ಇಬ್ಬರೂ ಹೆಣ್ಣು ಮಕ್ಕಳಿಗೆ ಜನ್ಮದಿನದ ಉಡುಗೊರೆಯಾಗಿ ಸರ್ಕಾರಿ ತೆಲಂಗಾಣ ಸಾರಿಗೆ ಸಂಸ್ಥೆಯು ಜೀವನ ಪರ್ಯಂತ ಉಚಿತ ಪಾಸ್​ ನೀಡುವುದಾಗಿ ಘೋಷಿಸಿದೆ.

ಬ್ಬರೂ ಹೆಣ್ಣು ಮಕ್ಕಳಿಗೆ ಜೀವಮಾನದ ಉಚಿತ ಪಾಸ್​ ನೀಡಲು ಸಂತಸವಾಗುತ್ತಿದೆ ಎಂದು ಟಿಎಸ್​ಆರ್​ಟಿಸಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಸಿ ಸಜ್ಜನರ್ ತಿಳಿಸಿದ್ದಾರೆ.

ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಕೆರೆ ಏರಿಗೆ ಡಿಕ್ಕಿ ಹೊಡೆದ ಶಾಲಾ ಬಸ್; 20 ಮಕ್ಕಳಿಗೆ ಗಾಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights