ಪವನ್ ಒಡೆಯರ್ ರೇಮೊಗೆ ಸಿಕ್ಕರು ಹ್ಯಾಡ್ಸಂ ಅಪ್ಪ : ಮೆಗಾ ಹಿಟ್ಸ್ ಸ್ಮಾರ್ಟ್ ತಂದೆ ಈಗ ರೇಮೊ ಫಾದರ್
ಹೀರೋ ಯಾರೇ ಇರಲಿ… ಡೈರೆಕ್ಟರ್ ಯಾರೇ ಇರಲಿ… ಇವ್ರು ಆ ಸಿನಿಮಾದಲ್ಲಿ ಹೀರೋಗೆ ಅಪ್ಪನಾಗಿ ನಟಿಸ್ತಿದ್ದಾರೆ ಅಂದ್ರೆ, ಅಲ್ಲೊಂದು ಪಾಸಿಟೀವ್ ಎನರ್ಜಿ ಕ್ರಿಯೇಟ್ ಆಗುತ್ತೆ. ಸಿನಿಮಾಗೆ ಗೊತ್ತಿಲ್ಲದೇನೆ ಪ್ಲಸ್ ಆಗುತ್ತೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರ ಸಾರಥಿ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವ್ರ ರಾಜಕುಮಾರ, ನಿಖಿಲ್ ಕುಮಾರ್ ಅವ್ರ ಸೀತಾರಾಮ ಕಲ್ಯಾಣ. ಹೌದು ಆ ಚಾರ್ಮಿಂಗ್, ಯಂಗ್ ಲುಕ್ಕಿಂಗ್, ಸ್ಟೈಲಿಶ್ ಹ್ಯಾಡ್ಸಂ ಡ್ಯಾಡಿ ಶರತ್ ಕುಮಾರ್ ಈಸ್ ಬ್ಯಾಕ್. ಪವನ್ ಒಡೆಯರ್ ನಿರ್ದೇಶನದ ಸ್ಯಾಂಡಲ್ವುಡ್ ಅಂಗಳದ ಬಹು ನಿರೀಕ್ಷಿತ ರೇಮೋ ಚಿತ್ರದಲ್ಲಿ ನಾಯಕ ಇಶಾನ್ ಗೆ ಅಪ್ಪ ಶ್ರೀ ದೇಶಪಾಂಡೆ ಪಾತ್ರವನ್ನ ನಿರ್ವಹಿಸ್ತಿದ್ದಾರೆ.
ಈಗಾಗ್ಲೇ ಶೂಟಿಂಗ್ ಸೆಟ್ಗೆ ಬಂದಿರೋ ಶರತ್ ಕುಮಾರ್, ಸಾಲ್ಟ್ ಅಂಡ್ ಪೆಪ್ಪರ್ ಲುಕ್ ನಲ್ಲಿ ಶ್ರೀಮಂತ ಬ್ಯುಸಿನೆಸ್ ಮ್ಯಾನ್ ಲುಕ್ ನಲ್ಲಿ ಮಿಂಚಿದ್ದಾರೆ. ಶರತ್ ಕುಮಾರ್ ಇಶಾನ್ ಅಪ್ಪ ಮಗ ಕಾಂಬಿನೇಶನ್ ನ ಒಂದಷ್ಟು ದೃಶ್ಯಗಳನ್ನ ನಿರ್ದೇಶಕ ಪವನ್ ಒಡೆಯರ್ ಸಖತ್ ಕಲರ್ ಫುಲ್ಲಾಗಿ ಚಿತ್ರಿಸಿದ್ದಾರೆ. ಅದ್ರ ಎಕ್ಸ್ ಕ್ಲ್ಯೂಸೀವ್ ಮೇಕಿಂಗ್ ಸ್ಟಿಲ್ಸ್ ಮತ್ತು ಅವ್ರ ಫೋಸ್ಟರ್ ನ ರಿಲೀಸ್ ಮಾಡೋ ಮೂಲಕ ಚಿತ್ರತಂಡ ಶರತ್ ಕುಮಾರ್ ಅವ್ರಿಗೆ ಆತ್ಮೀಯವಾಗಿ ಸ್ವಾಗತಿಸಿದೆ.
ಪವನ್ ಒಡೆಯರ್ ನಿರ್ದೇಶನದ ಈ ಚಿತ್ರವನ್ನಜೈಯಾದಿತ್ಯ ಫಿಲಂಸ್ ಬ್ಯಾನರ್ ನಲ್ಲಿ ಅದ್ಧೂರಿ ಚಿತ್ರಗಳ ಸರದಾರ ಸಿ.ಆರ್ ಮನೋಹರ್ ಮತ್ತು ಸಿ.ಆರ್ ಗೋಪಿ ದುಬಾರಿ ನಿರ್ಮಾಣದಲ್ಲಿ ತಯಾರಾಗ್ತಿದೆ. ರೋಗ್ ಖ್ಯಾತಿಯ ಇಶಾನ್ ಗೆ ಅಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ, ವೈದಿ ಛಾಯಾಗ್ರಹಣ ಚಿತ್ರಕ್ಕಿದೆ.
ಲವ್ ಸಿನಿಮಾಗಳನ್ನ ಪ್ರಸೆಂಟ್ ಮಾಡೋದ್ರಲ್ಲಿ ನಿಪುಣರೆನ್ನಿಸಿಕೊಂಡಿರೋ ಪವನ್ ಒಡೆಯರ್ ರೇಮೊ ಚಿತ್ರವನ್ನ ಟ್ರೆಂಡಿಯಾಗಿ ಪ್ರಸೆಂಟ್ ಮಾಡಲು ಹೊರಟಿದ್ದು, ಸಿನಿಮಾವನ್ನ ಎಲ್ಲಾ ಆಂಗಲ್ನಿಂದ್ಲೂ ರಿಚ್ ಆಗಿ ಕಟ್ಟಿಕೊಡೋ ಪ್ರಯತ್ನ ಮಾಡ್ತಿದ್ದಾರೆ. ಸದ್ಯ ಶರತ್ ಕುಮಾರ್ ಅವ್ರು ಟೀಮ್ಗೆ ಸೇರಿಕೊಂಡಿದ್ದರ ಖುಷಿಯನ್ನ ಹಂಚಿಕೊಂಡಿರೋ ಚಿತ್ರತಂಡ ಇಷ್ಟರಲ್ಲೇ ಚಿತ್ರದ ಮತ್ತೊಂದು ವಿಶೇಷ ವಿಚಾರವನ್ನ ಹಂಚಿಕೊಳ್ಳಲು ತಯಾರಿ ನಡೆಸಿದೆ.