ಸಾರಿಗೆ ಸಮರ : ಮುಷ್ಕರ ನಿರತ ನೌಕರರಿಗೆ ವೇತನ ತಡೆಗೆ ಸರ್ಕಾರ ಸೂಚನೆ…!
ಹಲವು ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯದಲ್ಲಿಂದು ಮುಷ್ಕರ ನಡೆಸುತ್ತಿರುವ ಸಾರಿಗೆ ಸಿಬ್ಬಂದಿಗಳ ವೇತನ ತಡೆಗೆ ಸರ್ಕಾರ ಸೂಚನೆ ನೀಡಿದೆ.
ಹೌದು… ಮುಷ್ಕರ ನಿರತ ಸಾರಿಗೆ ನೌಕರರಿಗೆ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಸರ್ಕಾರ ಮನವಿ ಮಾಡಿದರೂ ನೌಕರರು ಡೋಂಡ್ ಕೇರ್ ಎಂದು ಮುಷ್ಕರ ಪ್ರಾರಂಭಿಸಿದ ನೌಕರರ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಡೈರೆಕ್ಟ್ ಆಗಿ ನಿಮಗೆ ಸಂಬಳ ಸಿಗಲ್ಲ ಎಂದು ಹೇಳಿದೆ.
ಸಾರಿಗೆ ನೌಕರಿಗೆ ಪ್ರತಿ ತಿಂಗಳು 10 ನೇ ತಾರೀಕು ಸಂಬಳ ನೀಡಲಾಗುತ್ತಿತ್ತು. ಆದರೆ ಮುಷ್ಕರ ಪ್ರಾರಂಭಿಸಿದ 1 ಲಕ್ಷದ 30 ಸಾವಿರ ಜನ ನೌಕರರಿಗೆ ವೇತನ ತಡೆಗೆ ಸರ್ಕಾರ ಸೂಚನೆ ನೀಡಿದೆ.
ಮುಷ್ಕರ ಕೈಬಿಡುವಂತೆ ಸರ್ಕಾರ ನಿನ್ನೆಯಿಂದಲೂ ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದರೂ ನೌಕರರು ಮಾತ್ರ ಯಾವುದಕ್ಕೂ ಜಗ್ಗುತ್ತಿಲ್ಲ. ಇಂದಿನ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗೀ ಬಸ್ ಗಳಿಗೆ ಸರ್ಕಾರ ಅವಕಾಶ ನೀಡಿತ್ತು. ಜೊತೆಗೆ ಮುಷ್ಕರಕ್ಕೆಂದು ಬೀದಿಗಿಳಿದರೆ ಕಾನೂನು ಕ್ರಮಕ್ಕೆ ಸರ್ಕಾರ ಸೂಚಿಸಿತ್ತು. ಜೊತೆಗೆ ಮುಷ್ಕರ ಸಂದರ್ಭದಲ್ಲಿ ಸಂಬಳ ಕೂಡ ಕಟ್ ಮಾಡುತ್ತೇವೆ ಎಂದಿತ್ತು. ಇದೆಲ್ಲವನ್ನು ಕಡೆಗಣಿಸಿ ನೌಕರರು ಇಂದು ಮುಷ್ಕರಕ್ಕೆ ಮುಂದಾಗುತ್ತಿದ್ದಂತೆ ಮಾರ್ಚ್ ತಿಂಗಳ ವೇತನ ತಡೆಗೆ ಸರ್ಕಾರ ಆದೇಶಿಸಿದೆ. ಈ ಮೂಲಕ ಸರ್ಕಾರದ ಸೂಚನೆಗೆ ಡೋಂಡ್ ಕೇರ್ ಎಂದ ನೌಕರರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಡೈರೆಕ್ಟ್ ಆಗಿ ನಿಮಗೆ ಸಂಬಳ ಸಿಗಲ್ಲ ಎಂದು ಹೇಳಿದೆ.
ಡೋಂಡ್ ಕೇರ್ ಎಂದು ನೌಕರರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಡೈರೆಕ್ಟ್ ಆಗಿ ನಿಮಗೆ ಸಂಬಳ ಸಿಗಲ್ಲ ಎಂದು ಹೇಳಿದೆ. ಪರಿಸ್ಥಿತಿ ಅರ್ಥ ಮಾಡಿಕೊಂಡು ಮುಷ್ಕರ ಅರ್ಥ ಮಾಡಿಕೊಂಡು ಮುಷ್ಕರ ಹಿಂಪಡೆಯಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ “ ಸರ್ಕಾರದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಮುಷ್ಕರ ಹಿಂಪಡೆಯಿರಿ” ಎಂದು ಮನವಿ ಮಾಡಿಕೊಂಡಿದ್ದಾರೆ.

