Fact check : ಪಂಜಾಬ್‍ನ ಹೋಶಿಯಾರ್‍ಪುರ ಸಂತನ ಮೇಲೆ ದಾಳಿ ಕೋಮು ಎಳೆಯೊಂದಿಗೆ ವೈರಲ್!

ಪಂಜಾಬ್‍ನ ಹೋಶಿಯಾರ್ ಪುರ ಸಂತರೊಬ್ಬರ ಮೇಲಿನ ದಾಳಿ ಇತ್ತೀಚಿನ ಪಾಲ್ಘರ್ ಹಲ್ಲೆಯಿಂದ ಪ್ರೇರಿತವಾಗಿದೆ ಎಂದು ಹೇಳುವ ಪೋಸ್ಟ್ ವೊಂದು ವೈರಲ್ ಆಗಿತ್ತು. ಆದರೆ ಹೋಶಿಯಾರ್ಪುರ್ ಪೊಲೀಸರು ಈ ಘಟನೆ ದರೋಡೆ ಪ್ರಕರಣ ಎಂದು ಹೇಳಿ, ಕೋಮು ಕೋನವನ್ನು ನಿರಾಕರಿಸಿದ್ದಾರೆ.

ಹೌದು… ಪಂಜಾಬ್‍ನ ಹೋಶಿಯಾರ್ ಪುರದಲ್ಲಿ ಒಬ್ಬ ಸಂತನ ಮೇಲೆ ನಡೆದ ದಾಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಕೋಮು ಮತ್ತು ರಾಜಕೀಯ ತಿರುವು ನೀಡಲಾಗುತ್ತಿದೆ. ಹೋಶಿಯಾರ್ ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸನ್ಯಾಸಿಯ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಹಿಂದಿ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದ್ದು, ‘ಪಾಲ್ಘರ್ ಶೈಲಿಯ’ ದಾಳಿಗೆ ಮುಸ್ಲಿಮರು ಕಾರಣ ಎಂದು ಹೇಳಲಾಗಿದೆ.

‘ಬೂಮ್’ ಹೋಶಿಯಾರ್ಪುರ್ ಪೊಲೀಸರನ್ನು ಸಂಪರ್ಕಿಸಿದಾಗ ತಿಳಿದಿದ್ದು – ಅವರ ಪ್ರಕಾರ ಇದು  ದರೋಡೆ ಪ್ರಕರಣವಾಗಿದ್ದು, ದಾಳಿಕೋರರನ್ನು ಇನ್ನೂ ಬಂಧಿಸಿಲ್ಲ ಎಂದು ಕೋಮು ಕೋನವನ್ನು ನಿರಾಕರಿಸಿದ್ದಾರೆ.ಇದಲ್ಲದೆ, ಸನ್ಯಾಸಿ, ದಾಖಲಾದ ಸಂದೇಶದಲ್ಲಿ, ದಾಳಿಯಲ್ಲಿ ಯಾವುದೇ ರಾಜಕೀಯ ಕೋನವನ್ನು ನಿರಾಕರಿಸಿದ್ದಾರೆ.

ಇತ್ತೀಚೆಗೆ, ಮಹಾರಾಷ್ಟ್ರದ ಪಾಲ್ಘರ್ನಲ್ಲಿ 70 ವರ್ಷದ ಸನ್ಯಾಸಿ ಸೇರಿದಂತೆ ಮೂವರನ್ನು ಮಕ್ಕಳ ಅಪಹರಣಕಾರರು ಮತ್ತು ಕಳ್ಳರು ಎಂಬ ಅನುಮಾನದ ಮೇಲೆ ಹತ್ಯೆ ಮಾಡಲಾಯಿತು. ಮಕ್ಕಳ ಅಪಹರಣಕಾರರು ಮತ್ತು ಕಳ್ಳರು ಪಾಲ್ಘರ್‍ನ ವಿವಿಧ ಹಳ್ಳಿಗಳಲ್ಲಿ ಓಡಾಡುತ್ತಿದ್ದಾರೆ ಎಂಬ ವಾಟ್ಸಾಪ್ ಸಂದೇಶಗಳು ಈ ಮೂವರನ್ನು ಕೊಲ್ಲುವ ಕೆಲವು ದಿನಗಳ ಮೊದಲು ಸ್ಥಳೀಯ ನಿವಾಸಿಗಳ ನಡುವೆ ಸುತ್ತುತ್ತಿದ್ದವು. ಇದರಿಂದ ಹಿಂದೂ ಸನ್ಯಾಸಿಗಳೂ ಸೇರಿ ಮೂರು ಜನರ ಹತ್ಯೆಆಗಿದೆ. ದಾಳಿಯ ಗೊಂದಲದ ವೀಡಿಯೊಗಳು ಹೊರ ಬಂದ ಕೂಡಲೇ, ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ಭಾಗ ದಾಳಿಗೆ ಕೋಮುವಾದ ತಿರುವು ನೀಡಲು ಪ್ರಯತ್ನಿಸಿತು.

2 ನಿಮಿಷದ ಕ್ಲಿಪ್‍ನಲ್ಲಿ ಕೇಸರಿ ನಿಲುವಂಗಿ ಧರಿಸಿದ ವ್ಯಕ್ತಿ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಅದರ ನಡುವೆ ಅವರು ಆಸ್ಪತ್ರೆಯ ಸಿಬ್ಬಂದಿಗೆ ನಡೆದದ್ದನ್ನು ವಿವರಿಸುತ್ತಾರೆ. ವೀಡಿಯೊ ಜೊತೆಗೆ ಹಿಂದಿ ಶೀರ್ಷಿಕೆಯಲ್ಲಿ ‘ಪಾಲ್ಘನಿರ್ಂದ ಆರಂಭವಾಗಿ, ಈಗ ಪಂಜಾಬ್ ಹೋಶಿಯಾರ್ಪುರದಲ್ಲಿ ಮುಸ್ಲಿಮರಿಂದ ಹಲ್ಲೆಗೊಳಗಾದ ಪುಷ್ಪೇಂದ್ರ ಸ್ವರೂಪ್. ಕಾಂಗ್ರೆಸ್ ಆಳುವ ರಾಜ್ಯಗಳಲ್ಲಿ ಮಾತ್ರ ಸಂತರನ್ನು ಏಕೆ ಕೊಲ್ಲಲಾಗುತ್ತಿದೆ?’ ಎಂದು ಬರೆಯಲಾಗಿದೆ.

ಕೆಳಗಿನ ವೀಡಿಯೊವನ್ನು ನೋಡಿ ಮತ್ತು ಅದರ ಆರ್ಕೈವ್‍ ಆವೃತ್ತಿ ಇಲ್ಲಿದೆ.

https://twitter.com/BhaiyaJiJoshi_/status/1253899939727507456

ಹಲವಾರು ಫೇಸ್ಬುಕ್ ಪ್ರೊಫೈಲ್‍ಗಳಿಂದ ಇದೇ ಸುಳ್ಳು ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ನೋವೆಲ್‍ ಕೊರೊನಾ ವೈರಸ್ ಸೋಂಕಿನ ದಾಳಿಯಲ್ಲಿ ದೇಶ ಹೆಣಗುತ್ತಿರುವಾಗ, ಮುಸ್ಲಿಂ ಸಮುದಾಯವನ್ನು ಗುರಿ ಮಾಡಿ ಸುತ್ತುವರೆದಿರುವ ತಪ್ಪು ಮಾಹಿತಿಗಳಲ್ಲದೆ, ಈ ಹೇಳಿಕೆ ಕೂಡ ಘಟನೆಗೆ ಕೋಮು ಮತ್ತು ರಾಜಕೀಯ ಬಣ್ಣ ಲೇಪಿಸುತ್ತಿದೆ.

ಫ್ಯಾಕ್ಟ್ ಚೆಕ್

‘ಬೂಮ್’ ಈ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಹೋಶಿಯಾರ್ಪುರ್ ಪೊಲೀಸರನ್ನು ಸಂಪರ್ಕಿಸಿದೆ. ಹೋಶಿಯಾರ್‍ಪುರ ನಗರ ಪೊಲೀಸ್‍ ಠಾಣೆಯ ಪೊಲೀಸ್ ಸಿಬ್ಬಂದಿ ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ನಮಗೆ ತಿಳಿಸಿದರು. “ಇಬ್ಬರು ವ್ಯಕ್ತಿಗಳು ವಯಸ್ಸಾದ ಸಂತನನ್ನು ಲೂಟಿ ಮಾಡಿ ತಪ್ಪಿಸಿಕೊಂಡರು. ಅವರು ಆತನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ” ಎಂದು ಪೊಲೀಸ್ ಹೇಳಿದರು. ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ ಎಂದು       ಹೇಳಿದರು. ಘಟನೆಯ ಸುತ್ತಲೂ ಕೋಮು ಕೋನವನ್ನು ನೇಯ್ದ ಬಗ್ಗೆ ಬೂಮ್ ಪೊಲೀಸರನ್ನು ಕೇಳಿದಾಗ, ಅವರು ಅಂತಹ  ಯಾವುದೇ ‘ಹಿಂದೂ-ಮುಸ್ಲಿಂ ಕೋನವನ್ನು’ ನಿರಾಕರಿಸಿದರು.

ಈ ಮಧ್ಯೆ, ಪಂಜಾಬ್ ಪೊಲೀಸರು ಪರಿಶೀಲಿಸಿದ ಟ್ವಿಟರ್‍ಹ್ಯಾಂಡಲ್ ಮತ್ತು ಹೋಶಿಯಾರ್ಪುರ್ ಪೊಲೀಸರ ಟ್ವಿಟರ್ ಹ್ಯಾಂಡಲ್ ದಾಳಿಯ ಬಗ್ಗೆ ಮಾತನಾಡಿದ ವೀಡಿಯೊವನ್ನು ಟ್ವೀಟ್ ಮಾಡಿದೆ. ವಿಡಿಯೋದಲ್ಲಿ ಸನ್ಯಾಸಿ ‘ನಾನು ಸ್ವಾಮಿ ಪುಷ್ಪೇಂದ್ರ ಸ್ವರೂಪ್’ ಎಂದು ಹೇಳುವುದನ್ನು ಕೇಳಬಹುದು. ‘ನಿಮಗೆಲ್ಲರಿಗೂ ತಿಳಿದಂತೆ ಒಂದೆರಡು ದಿನಗಳ ಹಿಂದೆ (ಏಪ್ರಿಲ್ 23) ನನ್ನ ಮೇಲೆ ಹಲ್ಲೆ ನಡೆದಿದೆ. ಈ ದಾಳಿಯನ್ನು ಮಾದಕ ದ್ರವ್ಯ ವ್ಯಸನಿ ಲೂಟಿಕೋರರು ನಡೆಸಿದ್ದಾರೆ. ನಾನು ಅವರ ಜೊತೆಗೆ ಹೊಡೆದಾಡಲು ಪ್ರಯತ್ನಿಸಿ, ಅವರ ಮುಖವಾಡಗಳನ್ನು ತೆಗೆದುಹಾಕಲು ಪ್ರಯತ್ನಿಸಿದ್ದರಿಂದ ನನ್ನ ಮೇಲೆ ಹಲ್ಲೆ ನಡೆಯಿತು. ಅವರು ನನ್ನ ಮೇಲೆ ದಾಳಿ ಮಾಡಿದ್ದು ಸಹಜ. ನಮ್ಮ ನಡುವೆ ಒಂದು ಮುಷ್ಟಿ ಹೋರಾಟ ನಡೆಯಿತು. ಆದರೂ, ಈ ದಾಳಿ ರಾಜಕೀಯಕ್ಕೆ ಸಂಬಂಧಿಸಿಲ್ಲ ಏಕೆಂದರೆ ಇಲ್ಲಿ ರಾಜಕೀಯ ಕೋನ ಒಳಗೊಂಡಿರುವ ಯಾವುದೇ ಸಾಧ್ಯತೆಯಿಲ್ಲ. ಇಬ್ಬರು ಹುಡುಗರು ಇದ್ದರು. ಅವರು ಹಣ ಕೇಳುತ್ತಿದ್ದರು ಮತ್ತು ನನ್ನಿಂದ ಹಣ ಕಸಿದುಕೊಂಡು ತಪ್ಪಿಸಿಕೊಂಡರು. ಪೊಲೀಸರು ನನ್ನೊಂದಿಗೆ ಸಾಕಷ್ಟು ಸಹಕಾರ ನೀಡುತ್ತಿದ್ದಾರೆ. ಅವರು ಪ್ರಕರಣವನ್ನು ಸರಿಯಾಗಿ ತನಿಖೆ ಮಾಡುತ್ತಿದ್ದಾರೆಂದು ನನಗೆ ತೃಪ್ತಿ ಇದೆ. ಶಾಂತಿ ಕಾಪಾಡಲು ಮತ್ತು ಪೊಲೀಸರೊಂದಿಗೆ ಸಹಕರಿಸುವಂತೆ ನಾನು ನಿಮಗೆ ಮನವಿ ಮಾಡುತ್ತೇನೆ. ‘ ತಮ್ಮಟ್ವೀಟ್‍ನಲ್ಲಿ, ಹೋಶಿಯಾರ್‍ಪುರ ಮತ್ತು ಪಂಜಾಬ್ ಪೊಲೀಸ್‍ ಟ್ವಿಟರ್ ಹ್ಯಾಂಡಲ್‍ಗಳು ವದಂತಿಗಳನ್ನು ಹರಡದಂತೆ ಜನರಿಗೆ ಮನವಿ ಮಾಡಿದ್ದಾರೆ.

ಸ್ವಾಮಿ ಪುಷ್ಪೇಂದ್ರ ಸ್ವರೂಪ್‍ ಅವರು ರೆಕಾರ್ಡ್ ಮಾಡಿದ ಸಂದೇಶವನ್ನು ಕೆಳಗೆ ವೀಕ್ಷಿಸಿ.

ಹೋಶಿಯಾರ್ಪುರ್ ಪೊಲೀಸರ ಈ ಟ್ವೀಟ್‍ನ್ನು ಪಂಜಾಬ್ ಪೊಲೀಸರು ಮರು-ಟ್ವೀಟ್ ಮಾಡಿ ಉಲ್ಲೇಖಿಸಿದ್ದಾರೆ.

https://twitter.com/PunjabPoliceInd/status/1253954801005518849

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights