ಲಾಕ್‌ಡೌನ್‌ ಇದ್ದರೂ ಬೆಂಗಳೂರಿನಲ್ಲಿ ತಪ್ಪದ ಕೊರೊನಾ ಸಂಕಟ; ರಾಜ್ಯದಲ್ಲಿ 4,537 ಹೊಸ ಪ್ರಕರಣಗಳು

ವಾರಾಂತ್ಯ ಶನಿವಾರ ಕೂಡಾ ರಾಜ್ಯದಲ್ಲಿ ಕೊರೋನಾ  ಬಾಧಿತರ ಪ್ರಮಾಣದಲ್ಲಿ ಬಾರಿ ಏರಿಕೆ ಕಂಡಿದೆ..  ಒಂದೇ ದಿನದಲ್ಲಿ ನಾಲ್ಕು ಸಾವಿರದ ಗಡಿ ದಾಟಿದೆ. ರಾಜ್ಯದ ಏಳು ಜಿಲ್ಲೆಗಳಲ್ಲಿ ಲಾಕ್‌ಡೌನ್ ಇದ್ದರೂ ಸೋಂಕಿತರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದ್ದು ಶನಿವಾರ 4537 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇದೇ ವೇಳೆ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಅಂಕೆ ಮೀರಿದ್ದು ಶನಿವಾರ 2,344 ಮಂದಿಯಲ್ಲಿ ಸೋಂಕು ಕಾಣಿಸಿದೆ.ಈ ಮಧ್ಯೆ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಆಗುತ್ತಿರುವವರ ಸಂಖ್ಯೆಯೂ ಹೆಚ್ಚಿದ್ದು ಶನಿವಾರ 1018 ಮಂದಿ ಬಿಡುಗಡೆಯಾಗಿದ್ದಾರೆ. 93 ಸೋಂಕಿತರು ಸಾವನಪ್ಪಿದ್ದಾರೆ.. ಸಾವಿನ ಸರಾಸರಿ 2.08% , ಚೇತರಿಕೆ ಪ್ರಮಾಣ  36,5% … ಇಂದು 34,819 ಜನರಿಗೆ ಪರೀಕ್ಷೆ ನಡೆಸಲಾಗಿದೆ, ರಾಜ್ಯದಲ್ಲಿ ಒಟ್ಟು 9,84,996 ಪರೀಕ್ಷೆ ನಡೆಸಲಾಗಿದೆ..

ಈ ಮಧ್ಯೆ ಲಘು ಕೋವಿಡರಿಗೆ ಆಸ್ಪತ್ರೆ ಸೇವೆ ಸಲ್ಲದು ಎಂದು ರಾಜ್ಯ ಸರಕಾರ ಫಮಾರ್ಣನು ಹೊರಡಿಸಿದೆ. ತೀವ್ರ ಮತ್ತು ಮಧ್ಯಮ ಪೀಡಿತರಿಗೆ ಮಾತ್ರ ಚಿಕಿತ್ಸೆ ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆಸ್ಪತ್ರೆಗಳಿಗೆ ಆದೇಶಿಸಿದೆ.

ಸೋಂಕಿನ ಲಕ್ಷಣವಿಲ್ಲದವರು ಮತ್ತು ಲಘು ಸೋಂಕು ಉಳ್ಳವರಿಗೆ ಕೋವಿಡ್‌ ಕೇರ್‌ ಕೇಂದ್ರಗಳಿಗೆ ದಾಖಲಾಗುವಂತೆ ಇಲ್ಲವೇ ಮನೆಯಲ್ಲಿಯೇ ಪ್ರತ್ಯೇಕವಾಗಿರುವಂತೆ ಸಲಹೆ ನೀಡಲಾಗಿದೆ. ಬಿಬಿಎಂಪಿಗೆ ಮಂಜುನಾಥ್ ಪ್ರಸಾದ್ ಹೊಸ ಆಯುಕ್ತ. ಅನಿಲ್ ಕುಮಾರಗೆ ಗೇಟ್‌ಪಾಸ್

ಈ ಎಲ್ಲದರ ನಡುವೆ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಅಟ್ಟಹಾಸಕ್ಕೆ ಬಿಇಎಂಪಿ ಆಯುಕ್ತರ ತಲೆದಂಡವಾಗಿದೆ.ಕೊರೋನಾ ವಿರುದ್ಧದ ಹೋರಾಟದಲ್ಲಿ ಬೆಂಗಳುರನ್ನು ಸೂಕ್ತವಾಗಿ ಅಣಿಗೊಳಸಿದ ಕಾರಣ ಬಿಬಿರೆಂಪಿ ಆಯುಕ್ತ ಅನಿಲ್ ಕುಮಾರ್‍ ಅವರನ್ನು ಎತ್ತಂಗಡಿ ಮಾಡಲಾಗಿದೆ.ಈ ಕುರಿತು ಗುಸುಗುಸು ಇತ್ತಾದರೂ ಈವರಗೆ ಅಧಿಕೃತವಾಗಿರಲಿಲ್ಲ. ಆದರೆ ಸರಕಾರ ಶನಿವಾರ ಈ ಕುರಿತು ಆದೇಶ ಹೊರಡಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights