ಒಲಿಂಪಿಕ್ಸ್‌ ಹಾಕಿ: ಸೆಮಿಫೈನಲ್‌ಗೆ 41 ವರ್ಷಗಳ ನಂತರ ಭಾರತ ಪುರುಷರು; ಮೊದಲ ಬಾರಿಗೆ ಮಹಿಳೆಯರು!

ಟೋಕಿಯೋ ಒಲಂಪಿಕ್ಸ್‌ನ ಹಾಕಿ ಪಂದ್ಯಾವಳಿಯಲ್ಲಿ ಪುರುಷರ ತಂಡ ಮತ್ತು ಮಹಿಳೆಯರ ತಂಡಗಳು ಕ್ವಾಟರ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, ಎರಡೂ ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ.

ಭಾರತದ ಪುರುಷರ ತಂಡವು ಗ್ರೇಟ್ ಬ್ರಿಟನ್‌ ಎದುರು ಭರ್ಜರಿ (3-1) ಗೆಲುವು ಸಾಧಿಸಿದ್ದು, 41 ವರ್ಷಗಳ ನಂತರ ಸೆಮಿಫೈನಲ್‌ ತಲುಪಿದೆ.

ಭಾರತದ ದಿಲ್‌ಪ್ರೀತ್‌ ಸಿಂಗ್, ಗುರ್ಜಂತ್ ಸಿಂಗ್ ಮತ್ತು ಹಾರ್ದಿಕ್ ಸಿಂಗ್‌ ತಲಾ ಒಂದೊಂದು ಗೋಲು ಗಳಿಸಿ ಭಾರತದ ಗೆಲುವಿಗೆ ಕಾಣಿಕೆ ನೀಡಿದರು. ಗ್ರೇಟ್ ಬ್ರಿಟನ್ ಪರವಾಗಿ ಸ್ವಾಮ್ಯುಯಲ್ ಲಾನ್ ವಾರ್ಡ್ ಒಂದು ಗೋಲು ಮಾತ್ರ ಗಳಿಸಿದರು.

ಇದೇ ವೇಳೆ, ಭಾರತೀಯ ಮಹಿಳಾ ಹಾಕಿ ತಂಡವು ವಿಶ್ವದ ಎರಡನೆ ಶೇಯಾಂಕದಲ್ಲಿರುವ ಆಸ್ಟ್ರೇಲಿಯಾವನ್ನು 1-0 ಅಂತರದಲ್ಲಿ ಸೋಲಿಸಿ ಸೆಮಿಫೈನಲ್‌ ತಲುಪಿದೆ. ಈ ಮೂಲಕ ಒಲಿಂಪಿಕ್‌ ಇತಿಹಾಸದಲ್ಲೇ ಭಾರತೀಯ ಮಹಿಳಾ ತಂಡ ಮೊದಲ ಬಾರಿಗೆ ಸಮಿಫೈನಲ್ ತಲುಪಿದೆ. ಸೆಮಿಫೈನಲ್‌ ಆಗಸ್ಟ್‌ 4 ರ ಬುಧವಾರ ನಡೆಲಿದೆ.

ಭಾರತೀಯ ಮಹಿಳಾ ಹಾಕಿ ತಂಡ ಪದಕ್ಕೆ ಮುತ್ತಿಡಲು ಇನ್ನು ಒಂದು ಪಂದ್ಯಗಳು ಬಾಕಿಯಿದ್ದು, ಒಂದು ಪಂದ್ಯ ಗೆದ್ದರೆ ಚಿನ್ನಕ್ಕಾಗಿ ಸೆಣಸಲಿದೆ.

ಇನ್ನೊಂದೆಡೆ ಸೆಮಿಫೈನಲ್‌ನಲ್ಲಿ ಸೋಲುಂಡಿದ್ದ ಭಾರತದ ನೆಚ್ಚಿನ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಇಂದು ನಡೆದ ಕಂಚಿನ ಪದಕಕ್ಕಾಗಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡಿದ್ದಾರೆ. ಅಲ್ಲಿಗೆ ಎರಡು ಪದಕಗಳಿಗೆ ಭಾರತ ಭಾಜನವಾಗಿದೆ.

ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ 7 ಪದಕ ಗೆದ್ದ ಈಜುಗಾರ್ತಿ; ವಿಶ್ವ ದಾಖಲೆ ನಿರ್ಮಿಸಿದ ಎಮ್ಮಾ ಮೆಕಿಯನ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights