ಕರ್ನಾಟಕ ರಾಜ್ಯೋತ್ಸವವನ್ನು ‘ಕಪ್ಪು ದಿನ’ವಾಗಿ ಆಚರಿಸಲು ಮಹಾರಾಷ್ಟ್ರ ಸಚಿವರುಗಳ ನಿರ್ಧಾರ!

ಪ್ರತಿ ಕನ್ನಡಿಗನ ಕರುನಾಡಿದ ಹೆಮ್ಮೆಯ ದಿನ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಕೆಲ ಗಂಟೆಗಳು ಮಾತ್ರ ಬಾಕಿ ಇದೆ. ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ 100 ಜನಕ್ಕಿಂತ ಹೆಚ್ಚು ಸೇರುವಂತಿಲ್ಲ ಹಾಗೂ ಯಾವುದೇ ಮೆರವಣಿಗೆ ನಡೆಸುವಂತಿ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರ ಮಧ್ಯೆ ಮಹಾರಾಷ್ಟ್ರ ಸರ್ಕಾರ ಕರ್ನಾಟ ವಿರೋಧಿ ಧೋರಣೆ ತಳೆದಿದೆ.

ಮಹಾರಾಷ್ಟ್ರ ಸರ್ಕಾರ ತನ್ನ ಎಲ್ಲಾ ಸಚಿವರಿಗೂ ನವೆಂಬರ್ 1 ರಂದು ತಮ್ಮ ಕೈಗಳಿಗೆ ಕಪ್ಪು ಬಟ್ಟೆ ಕಟ್ಟಿ ಕಪ್ಪು ದಿನವಾಗಿ ಆಚರಿಸುವಂತೆ ಕರೆ ಕೊಟ್ಟಿದೆ. ಇದಕ್ಕೆ ಬೆಳಗಾವಿಯಲ್ಲಿರುವ ಮಹಾರಾಷ್ಟ್ರ ಪರ ಗುಂಪುಗಳು ಬೆಂಬಲ ಸೂಚಿಸಿವೆ.

ಮಹಾರಾಷ್ಟ್ರದ ಲೋಕೋಪಯೋಗಿ ಸಚಿವ ಹಾಗೂ ಗಡಿ ವಿವಾದಗಳ ಸಚಿವ ೇಕನಾಥ್ ಶಿಂಧೆ, ಸಚಿವ ಸಂಪುಉಟ ಸಭೆಯಲ್ಲಿ ಮಾತನಾಡಿ, ನಾಳೆ ಎಲ್ಲಾ ಸಚಿವರು ತಮ್ಮ ಕೈಗೆ ಕಪ್ಪುಬ್ಯಾಂಡ್ ನ್ನು ಕಟ್ಟಿ ಬೆಳಗಾವಿಯಲ್ಲಿ ಮರಾಠಿಗರ ಹೋರಾಟವನ್ನು ಬೆಂಬಲಿಸಬೇಕೆಂದು ಕರೆ ನೀಡಿದ್ದಾರೆ, ಕರ್ನಾಟಕ-ಮಹಾರಾಷ್ಟ್ರ ವಿವಾದದ ಮತ್ತೊಬ್ಬ ಸಚಿವ ಚುಗನ್ ಬುಜ್ ಬಲ್, ಶಿಂಧೆಯವರ ಪ್ರಸ್ತಾಪಕ್ಕೆ ಮಹಾರಾಷ್ಟ್ರ ಸರ್ಕಾರದ ಎಲ್ಲಾ ಸಚಿವರು ನಾಳೆ ಕಪ್ಪು ಪಟ್ಟಿ ಧರಿಸಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights