ಚುನಾವಣೆಗಳ ಫಲಿತಾಂಶಗಳು ಕಾಂಗ್ರೆಸ್‌ ತಳಮಟ್ಟದಲ್ಲಿ ದುರ್ಬಲವಾಗಿದೆ ಎಂಬುದನ್ನು ತೋರಿಸಿವೆ: ಪಿ.ಚಿದಂಬರಂ

ಬಿಹಾರ ಚುನಾವಣೆ ಮತ್ತು ಉಪಚುನಾವಣೆಗಳ ಫಲಿತಾಂಶಗಳು ಕಾಂಗ್ರೆಸ್‌ ತಳಮಟ್ಟದಲ್ಲಿ ಸಂಘಟನೆಯನ್ನು ಹೊಂದಿಲ್ಲ ಮತ್ತು ಪಕ್ಷದ ಸಂಘಟನೆ ದುರ್ಬಲವಾಗಿದೆ ಎಂಬುದನ್ನು ತೋರಿಸಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

“ಗುಜರಾತ್‌, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ನಡೆದ ಉಪಚುನಾವಣೆಗಳು ನಮ್ಮನ್ನು ಹೆಚ್ಚು ಚಿಂತೆ ದೂಡಿವೆ. ಈ ರಾಜ್ಯಗಳ ಉಪಚುನಾವಣಾ ಫಲಿತಾಂಶಗಳು ಕಾಂಗ್ರೆಸ್‌ ಪಕ್ಷವು ತಳಮಟ್ಟದಲ್ಲಿ ಕುಸಿದಿದೆ ಎಂದು ತೋರಿಸುತ್ತಿವೆ. ಕೊರೊನಾ ಸೋಂಕಿನ ಬಿಕ್ಕಟ್ಟ ಮತ್ತು ಆರ್ಥಿಕ ಕುಸಿತದ ನಡುವೆಯೂ ಕಾಂಗ್ರೆಸ್‌ ಹಿನ್ನೆಡೆಯನ್ನು ಅನುಭವಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪ್ರಾದೇಶಿಕ ಪಕ್ಷಗಳನ್ನು ಬೆಳಸಿದಷ್ಟೂ ಕಾಂಗ್ರೆಸ್‌ ಭವಿಷ್ಯ ಮಂಕಾಗುತ್ತದೆ: ಆತಂಕದಲ್ಲಿ ಮಹಾರಾಷ್ಟ್ರ ಕಾಂಗ್ರೆಸ್‌

“ಬಿಹಾರದಲ್ಲಿ ಆರ್‌ಜೆಡಿ-ಕಾಂಗ್ರೆಸ್‌ ನೇತೃತ್ವದ ಮಹಾಘಟಬಂಧನ್‌ ಗೆಲ್ಲುವ ಅವಕಾಶವಿತ್ತು. ಗೆಲುವನ್ನು ಸಮೀಸಿದರೂ ಯಾಕೆ ಸೋತಿದ್ದೇವೆ ಎಂದು ಸಮಗ್ರವಾಗಿ ವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ. ಕಾಂಗ್ರೆಸ್‌ ಬಿಹಾರದಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಇದು ಸರಿಯಲ್ಲ ಎನ್ನಿಸುತ್ತವೆ” ಎಂದು ಚಿದಂಬರಂ ಹೇಳಿದ್ದಾರೆ.

“ಬಹಳ ಹಿಂದೆಯೇ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಘಡ ಮತ್ತು ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ ಗೆದ್ದಿದೆ. ಈಗ ಪಕ್ಷದ ತಳಮಟ್ಟದ ಸಂಘಟನೆ ಕುಸಿದಿದೆ. ಅದನ್ನು ಭದ್ರಪಡಿಸಬೇಕು” ಎಂದು ಅವರು ತಿಳಿಸಿದ್ದಾರೆ.

“ತಳಮಟ್ಟದಲ್ಲಿ ಪಕ್ಷವು ಸಾಂಸ್ಥಿಕವಾಗಿ ಪ್ರಬಲವಾಗಿದ್ದರೆ ಸಣ್ಣ ಪಕ್ಷಗಳೂ ಉತ್ತಮ ಪ್ರದರ್ಶನ ನೀಡಬಹುದು ಎಂಬುದನ್ನು ಬಿಹಾರ ಫಲಿತಾಂಶ ಸಾಬೀತು ಪಡಿಸಿವೆ. CPI-ML ಮತ್ತು AIMIMನಂತಹ ಸಣ್ಣ ಪಕ್ಷಗಳು ನಿರೀಕ್ಷೆಗೂ ಮೀರಿದ ಗೆಲವು ಸಾಧಿಸಿವೆ. ಮಹಾಘಟಬಂಧನ್‌ ಮೈತ್ರಿಯು ಬಿಜೆಪಿ ನೇತೃತ್ವದ ಒಕ್ಕೂಟದಷ್ಟೇ ಮತಗಳನ್ನು ಪಡೆಯಬಹುದು. ಆದರೆ, ಅವರನ್ನು ಸೋಲಿಸಲು ನಾವು ತಳಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸಬೇಕು” ಎಂದು ಚಿದಂಬರಂ ಹೇಳಿದ್ದಾರೆ.

ತೇಜಶ್ವಿ ಯಾದವ್ ನೇತೃತ್ವದ ಪ್ರತಿಪಕ್ಷಗಳ ಮಹಾಘಟಬಂಧನ್‌ ಕಾಂಗ್ರೆಸ್ ಅನ್ನು ದುರ್ಬಲ ಕೊಂಡಿಯಾಗಿ ನಿರ್ಣಯಿಸಿವೆ. ಅದು ಸರಿಯಾಗಿದೆ. ಕಾಂಗ್ರೆಸ್ ತನ್ನ ಸಂಘಟನಾ ಸಾಂಸ್ಥಿಕ ಶಕ್ತಿಗಿಂತ ಹೆಚ್ಚಿನ ಸ್ಥಾನಗಳನ್ನು ಸ್ಪರ್ಧಿಸಿದೆ ಎಂದು ನಾನು ಭಾವಿಸುತ್ತೇನೆ. 20 ವರ್ಷಗಳಿಂದ ಬಿಜೆಪಿ ಅಥವಾ ಅದರ ಮಿತ್ರಪಕ್ಷಗಳು ಗೆದ್ದಿದ್ದ 25 ಸ್ಥಾನಗಳನ್ನು ಕಾಂಗ್ರೆಸ್‌ಗೆ ನೀಡಲಾಗಿತ್ತು. ಈ ಸ್ಥಾನಗಳಿಂದ ಸ್ಪರ್ಧಿಸಲು ಕಾಂಗ್ರೆಸ್ ನಿರಾಕರಿಸಬೇಕಿತ್ತು. ಪಕ್ಷವು ಕೇವಲ 45 ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಬೇಕಿತ್ತು ಎಂದು ಅವರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕೇರಳ, ತಮಿಳುನಾಡು, ಪುದುಚೇರಿ, ಬಂಗಾಳ ಮತ್ತು ಅಸ್ಸಾಂನಲ್ಲಿ ಚುನಾವಣೆಗಳು ನಡೆಯಲಿವೆ. ಈ ರಾಜ್ಯಗಳಲ್ಲಿ ಪಕ್ಷವನ್ನು ಗಟ್ಟಿಗೊಳಿಸಬೇಕು. ಈ ರಾಜ್ಯಗಳಲ್ಲಿ ಫಲಿತಾಂಶ ಏನಾಗಿದೆ ನೋಡೋಣ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಯುವತಿಯನ್ನು ಜೀವಂತ ಸುಟ್ಟ ದುಷ್ಕರ್ಮಿಗಳು: ಸಂತ್ರಸ್ತೆಯೇ ಹೆಸರು ಹೇಳಿದರೂ ಆರೋಪಿಗಳನ್ನು ಬಂಧಿಸದ ಪೊಲೀಸರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights