ಜೋ ಬೈಡನ್‌ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ವಿವೇಕ್ ಮೂರ್ತಿ ಮತ್ತು ಅರುಣ್‌ ಮಜುಂದಾರ್‌ಗೆ ಸ್ಥಾನ

ಅಮೆರಿಕದ ನೂತನ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಅವರ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಅಮೆರಿಕನ್ನರಾದ ವೈದ್ಯ ಡಾ.ವಿವೇಕ್ ಮೂರ್ತಿ ಮತ್ತು ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರುಣ್‌ ಮಜುಂದಾರ್‌ ಅವರಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ.

ವಿವೇಕ್‌ ಮೂರ್ತಿ ಅವರನ್ನು ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಹುದ್ದೆಗೆ ಮತ್ತು ಅರುಣ್‌ ಮಜುಂದಾರ್‌ ಅವರನ್ನು ಇಂಧನ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡುವ ಸಾಧ್ಯತೆ ಇದೆ ಎಂದು ಅಮೆರಿಕಾದ ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.

ಕೊರೊನಾ ನಿಂಯತ್ರಣಕ್ಕೆ ಸಂಬಂಧಿಸಿದಂತೆ ವಿವೇಕ್‌ ಮೂರ್ತಿ ಅವರು ಜೋ ಬೈಡನ್‌ ಅವರಿಗೆ ಸಲಹೆ ನೀಡುತ್ತಿದ್ಧಾರೆ. ಇದಕ್ಕಾಗಿ ರಚಿಸಲಾಗಿರುವ ರಚಿಸಲಾಗಿರುವ ಸಲಹಾಪಡೆಯ ಮೂರು ಸಹ ಅಧ್ಯಕ್ಷ ಹುದ್ದೆಗಳ ಪೈಕಿ ಒಂದು ಸ್ಥಾನಕ್ಕೆ ವಿವೇಕ್‌ ಮೂರ್ತಿ ಅವರನ್ನು ಜೋ ಬೈಡನ್‌ ನೇಮಿಸಿದ್ದರು.

ಒಬಾಮ ಅವಧಿಯಲ್ಲಿ 2014-17ರವರೆಗೆ ಅಮೆರಿಕದ 19ನೇ ಸರ್ಜನ್ ಜನರಲ್ ಆಗಿ ಮಂಡ್ಯ ಮೂಲದ ವಿವೇಕ್‌ ಮೂರ್ತಿ ಕಾರ್ಯನಿರ್ವಹಿಸಿದ್ದರು.

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪ್ರಾಧ್ಯಾಪಕರಾಗಿರುವ ಅರುಣ್‌ ಅವರು ಇಂಧನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಬೈಡನ್‌ ಅವರಿಗೆ ಹಿರಿಯ ಸಲಹೆಗಾರರಾಗಿದ್ದಾರೆ. ಸ್ಟ್ಯಾನ್‌ಫೋರ್ಡ್‌ನಲ್ಲಿನ ‘ಅಡ್ವಾನ್ಸ್ಡ್‌ ರಿಸರ್ಚ್‌ ಪ್ರಾಜೆಕ್ಟ್‌ ಏಜನ್ಸಿ’ ಮೊದಲ ನಿರ್ದೇಶಕರಾಗಿಯೂ ಅರುಣ್‌ ಕಾರ್ಯನಿರ್ವಹಿಸಿದ್ದಾರೆ.


ಇದನ್ನೂ ಓದಿ: ಅಮೆರಿಕಾ ಕ್ರಾಂತಿಗೂ ಸ್ಪೂರ್ತಿಯಾಗಿದ್ದ ಹೈದರ್ ಮತ್ತು ಟಿಪ್ಪು ಸುಲ್ತಾನ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights