ಸಕ್ಕರೆನಾಡಲ್ಲಿ ಪೊಲೀಸರ ನಿದ್ದೆಗೆಡಿಸಿದ ಮತ್ತೊಂದು ಹತ್ಯೆ : ರೌಡಿಶೀಟರ್ ಬರ್ಬರ ಕೊಲೆ!
ಮಂಡ್ಯದಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು ಕಳೆದ ವಾರ ರೌಡಿ ಶೀಟರ್ ಹತ್ಯ ಮರೆ ಮಾಚುವ ಹೊತ್ತಿಗೆ ಮತ್ತೊಂದು ಕೊಲೆ ನಡೆದಿದೆ. ನಿನ್ನೆ ಸಂಜೆ ಸಕ್ಕರೆ ನಾಡು ಮಂಡ್ಯದ ಗುತ್ತಲು ಬಡವಾಣೆಯಲ್ಲಿ ರೌಡಿ ಶೀಟರ್ ಕುಳ್ಳಿಯ ಬರ್ಬರ ಹತ್ಯೆಯಾಗಿದೆ.
ಜಿಲ್ಲೆಯಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಜನರ ನೆಮ್ಮದಿ ಮಾತ್ರವಲ್ಲದೇ ಪೊಲೀಸರ ನಿದ್ದೆ ಹಾಳು ಮಾಡಿದೆ.ಕೊಲೆಯಾದ ವ್ಯಕ್ತಿಯನ್ನು ಸುಮಂತ್ ಅಲಿಯಾಸ್ ಕುಳ್ಳಿಯಾಗಿದ್ದು, ಸ್ವರ್ಣಸಂದ್ರ ಬಡಾವಣೆಯ ವಾಸಿಯಾಗಿದ್ದಾನೆ. ಮನೆ ಮನೆಗೆ ಹಾಲು ಹಾಕುವ ಕೆಲಸ ಮಾಡುತ್ತಿದ್ದ ಈತ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದನು. ಸಂಜೆ ಹಾಲು ಹಾಕುವ ನೆಪದಲ್ಲಿ ಬಂದ ಅಪರಿಚಿತ ವ್ಯಕ್ತಿಗಳಿಂದ ಈತನ ಕೊಲೆ ಮಾಡಲಾಗಿದೆ .
ಕೊಲೆಗಾರರು ಪರಾರಿಯಾಗಿದ್ದು ದುಷ್ಕರ್ಮಿಗಳ ತಂಡ ಪತ್ತೆ ಕಾರ್ಯ ನಡೆದಿದೆ. ಕೊಲೆಯಾದ ಸುಮಂತ್ ಹೆದ್ದಾರಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಪುಡಿ ರೌಡಿಗಳನ್ನು ಬೆದರಿಸಿ ಹಣ ವಸೂಲಿ ಮದ್ಯ ಮಸೂಲಿ ಮಾಡ್ತಾಯಿದ್ದ ಈತ ಮದುವೆಯ ಬಳಿಕ ಬೆಂಗಳೂರು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಯೂ ಈತನ ಮೇಲೆ ಯುವತಿ ಅಪಹರಣ ಕೇಸ್ ದಾಖಲಾಗಿತ್ತು. ಬೆಂಗಳೂರು ಬಿಟ್ಟು ಊರು ಸೇರಿದ ಸುಮಂತ್ ಜೀವನೋಪಾಯಕ್ಕೆ ಹಸು ಸಾಕಿಕೊಂಡು ಹಾಲು ಮಾರುತ್ತಾ ಗಲಾಟೆ ಮಾಡಿಕೊಮಡಿದ್ದ ಎನ್ನಲಾಗುತ್ತದೆ. ಧ್ವೇಷದಿಂದಲೇ ಈತನ ಕೊಲೆಯಾಗಿದೆ ಎನ್ನಲಾಗುತ್ತಿದೆ.

