FACT CHECK | ಪಾಕ್ ಮೂಲದ ಕಂಪನಿಯಿಂದ ಕಾಂಗ್ರೆಸ್ ದೇಣಿಗೆ ಪಡೆದಿದೆ ಎಂದು ಸುಳ್ಳು ವರದಿ ಮಾಡಿದ ಟಿವಿ ವಿಕ್ರಮ
ಚುನಾವಣಾ ಆಯೋಗವು ತನ್ನ ವೆಬ್ಸೈಟ್ನಲ್ಲಿ ವಿವರಗಳನ್ನು ಅಪ್ಲೋಡ್ ಮಾಡಿದ ಬೆನ್ನಲ್ಲೆ ಚುನಾವಣಾ ಬಾಂಡ್ ವಿಷಯವು ದೇಶದೆಲ್ಲಡೆ ಜೋರು ಸದ್ದು ಮಾಡುತ್ತಿದೆ. ಪಾಕಿಸ್ತಾನ ಮೂಲದ ‘ಹಬ್ ಪವರ್ ಕಂಪನಿ’ ಪುಲ್ವಾಮ ದಾಳಿಯ ನಂತರ 10 ಕೋಟಿ ಮೊತ್ತದ ಬಾಂಡ್ಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದೆ ಎಂದು ಪ್ರತಿಪಾದಿಸಿ ವಿಕ್ರಮ ಟಿವಿ ವಿಡಿಯೋ ವರದಿಯನ್ನು ಪ್ರಕಟಿಸಿದೆ. ಇನ್ನು ಕೆಲವರು ಬಿಜೆಪಿ ಪಕ್ಷ ಈ ಹಣ ಪಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ನಿಜವೇ ಎಂದು ಪರಿಶೀಲಿಸೋಣ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್- ಛಂಡಿಗಢ ಸಹ ಇದೇ ಆರೋಪವನ್ನು ಬಿಜೆಪಿಯ ಮೇಲೆ ಮಾಡಿದೆ. “ಶಾಕಿಂಗ್. ಪಾಕಿಸ್ತಾನ ಮೂಲದ ಹಬ್ ಪವರ್ ಕಂಪನಿ, ಪುಲ್ವಾಮಾ ದಾಳಿ ನಡೆದ ವಾರಗಳ ನಂತರ ಎಲೆಕ್ಟೋರಲ್ ಬಾಂಡ್ಗಳನ್ನು ಕೊಡುಗೆಯಾಗಿ ನೀಡಿದೆ” ಎಂದು ಆರೋಪಿಸಿದ್ದಾರೆ.
ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೊಣ.
ಏನ್ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others
ಫ್ಯಾಕ್ಟ್ಚೆಕ್ :
ಎಲೆಕ್ಟ್ರೋಲ್ ಬಾಂಡ್ ಕುರಿತಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮೇಲೆ ಮಾಡಲಾಗುತ್ತಿರುವ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಹಬ್ ಪವರ್ ಕಂಪನಿಯು ಜಿಎಸ್ಟಿ ಪೋರ್ಟಲ್ನಲ್ಲಿ ನೋಂದಾಯಿಸಲ್ಪಟ್ಟಿರುವುದು ಕಂಡು ಬಂದಿದೆ. 07BWNPM0985J1ZX ಇದು ಅದರ ಜಿಎಸ್ಟಿ ನಂಬರ್ ಆಗಿದೆ. ಅದರಲ್ಲಿ ಆ ಕಂಪನಿಯ ಮೂಲ ಭಾರತವಾಗಿದ್ದು ಅದರ ಕೇಂದ್ರ ಕಚೇರಿ ದೆಹಲಿಯಲ್ಲಿದೆ ಎಂದು ಉಲ್ಲೇಖಿಸಿದೆ.
ಹಬ್ ಪವರ್ ಕಂಪನಿಯು ರವಿ ಮೆಹ್ರಾ ಎಂಬ ವ್ಯಕ್ತಿಯ ಒಡೆತನದಲ್ಲಿದೆ. ಇದನ್ನು ನವೆಂಬರ್ 12, 2018 ರಂದು ನೋಂದಾಯಿಸಲಾಗಿದೆ. ಇದರ ಪ್ರಮುಖ ವ್ಯಾಪಾರ ಸ್ಥಳವು ನವದೆಹಲಿಯ ಗೀತಾ ಕಾಲೋನಿಯಲ್ಲಿರುವ ವಿಳಾಸವಾಗಿದೆ.
ಇನ್ನು ಪಾಕಿಸ್ತಾನದಲ್ಲಿಯೂ ಸಹ ಇದೇ ಹೆಸರಿನ ಕಂಪನಿಯೊಂದಿದೆ. ಆದರೆ ಭಾರತದಲ್ಲಿ ಈ ವಿವಾದ ಭುಗಿಲೆದ್ದ ನಂತರ ಅದು “ನಾವು ಈ ವಿಷಯದಲ್ಲಿ ಹೆಸರಿಸಲಾದ ಕಂಪನಿ ಅಥವಾ ಭಾರತ ಮೂಲದ ಯಾವುದೇ ಇತರ ಕಂಪನಿಯೊಂದಿಗೆ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಚುನಾವಣಾ ಬಾಂಡ್ ಕುರಿತು HUBCO ನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ” ಎಂದು ಟ್ವೀಟ್ ಮಾಡಿದೆ. ಈ ಎಲ್ಲಾ ಸಾಕ್ಷ್ಯಗಳ ಆಧಾರದಲ್ಲಿ ಹಬ್ ಪವರ್ ಕಂಪನಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಇನ್ನು ಈ ಕಂಪನಿ ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿದೆ ಎಂಬುದನ್ನು ಇನ್ನೂ ಎಸ್ಬಿಐ ಮತ್ತು ಚುನಾವಣಾ ಆಯೋಗ ಸ್ಪಷ್ಟಪಡಿಸಿಲ್ಲ. ನಿಯಮಗಳ ಪ್ರಕಾರ “ಚುನಾವಣಾ ಬಾಂಡ್ಗಳು ಕೇವಲ 15 ದಿನಗಳ ಜೀವಿತಾವಧಿಯನ್ನು ಹೊಂದಿರುತ್ತವೆ, ಈ ಅವಧಿಯಲ್ಲಿ ಅದನ್ನು ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 29A ಅಡಿಯಲ್ಲಿ ನೋಂದಾಯಿಸಲಾದ ರಾಜಕೀಯ ಪಕ್ಷಗಳಿಗೆ ಮಾತ್ರ ದೇಣಿಗೆ ನೀಡಲು ಬಳಸಬಹುದಾಗಿದೆ”. ಹಾಗಾಗಿ ಪಾಕಿಸ್ತಾನದ ಕಂಪನಿಯಿಂದ ಕಾಂಗ್ರೆಸ್ ಅಥವಾ ಬಿಜೆಪಿ ದೇಣಿಗೆ ಪಡೆದಿವೆ ಎಂಬುದು ಸುಳ್ಳು.
ಒಟ್ಟಾರೆಯಾಗಿ ಹೇಳುವುದಾದರೆ, ಚುನಾವಣಾ ಆಯೋಗ ಪ್ರಕಟಿಸಿರುವ ಚುನಾವಣಾ ಬಾಂಡ್ಗಳ ಮಾಹಿತಿಯಲ್ಲಿ ಯಾವ ಕಂಪನಿ ದೇಣಿಗೆ ನೀಡಿದೆ ಎಂಬುದನ್ನು ಹೇಳೀದೆಯೇ ಹೊರತು, ಸ್ಪಷ್ಟವಾಗಿ ಇದೇ ರಾಜಕೀಯ ಪಕ್ಷಕ್ಕೆ ನೀಡಿದೆ ಎಂದಿಲ್ಲ. ಹಾಗಾಗಿ, ಹಬ್ ಪವರ್ ಕಂಪನಿ ಕಾಂಗ್ರೆಸ್ ಪಕ್ಷಕ್ಕೆ 10 ಕೋಟಿ ನೀಡಿದೆ ಎಂಬುದು ಖಚಿತವಾಗಿಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಏನ್ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಲೋಕಸಭಾ ಚುನಾವಣಾ ಹಿನ್ನಲೆ ಬಿಜೆಪಿ ಮತ್ತು ಕಾಂಗ್ರೆಸ್ನಿಂದ ಬಂಪರ್ ಕೊಡುಗೆ ಎಂದು ಸುಳ್ಳು ಸಂದೇಶ ಹಂಚಿಕೆ

