FACT CHECK | ಲೋಕಸಭಾ ಚುನಾವಣಾ ಹಿನ್ನಲೆ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಬಂಪರ್ ಕೊಡುಗೆ ಎಂದು ಸುಳ್ಳು ಸಂದೇಶ ಹಂಚಿಕೆ
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮತದಾರರನ್ನು ಸೆಳೆಯಲು ಬಿಜೆಪಿ ಮತ್ತು ಕಾಂಗ್ರೆಸ್ ಕಸರತ್ತು ನಡೆಸಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಮೂರು ತಿಂಗಳ “ಉಚಿತ ಮೊಬೈಲ್ ರೀಚಾರ್ಜ್” ಯೋಜನೆಯನ್ನು ನೀಡಲು ಮುಂದಾಗಿವೆ ಎಂದು ಪ್ರತಿಪಾದಿಸಿ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಸೋಶಿಯಲ್ ಮೀಡಿಯಾ ಮತ್ತು ವಾಟ್ಸಾಪ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ‘ಮೂರು ತಿಂಗಳ ಉಚಿತ ರೀಚಾರ್ಜ್’ ನೀಡುತ್ತಿದ್ದರೆ ಕಾಂಗ್ರೆಸ್ ಕೂಡ ಹಿಂದೆ ಬೀಳದೆ ದೇಶದ ಎಲ್ಲರಿಗೂ ಮೂರು ತಿಂಗಳ ಉಚಿತ ರೀಚಾರ್ಜ್ ಯೋಜನೆಯನ್ನು ಕೊಡುಗೆಯಾಗಿ ನೀಡಲು ನಿರ್ಧರಿಸಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಏನ್‌ಸುದ್ದಿ.ಕಾಂಗೆ ವಾಟ್ಸಾಪ್ ಸಂದೇಶಗಳ ಮೂಲಕ ಈ ಯೋಜನೆಯ ಸತ್ಯಾಸತ್ಯತೆಗಳನ್ನು ಪರಿಶೀಲಿಸುವಂತೆ ವಿನಂತಿಸಿದ್ದಾರೆ. ಹಾಗಿದ್ದರೆ ಫೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಮೂರು ತಿಂಗಳ ಉಚಿತ ಮೊಬೈಲ್ ರಿಚಾರ್ಜ್ ಯೋಜನೆಯನ್ನು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮತದಾರರನ್ನು ಸೆಳೆಯಲು ಇಂತಹ ಯೋಜನೆಗೆ ಮುಂದಾಗಿರುವುದು ನಿಜವೇ ಎಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಯಾವುದೇ ಘೋಷಣೆ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.
ಉಚಿತ ರೀಚಾರ್ಜ್‌ಗೆ ಕೇಂದ್ರ ಸರ್ಕಾರದ ಯಾವುದೇ ಪ್ರಕಟಣೆ ನೀಡಿಲ್ಲ. ಸುತ್ತೋಲೆಗಳೂ ಬಂದಿಲ್ಲ. ಯಾವುದೇ ಸಾರ್ವಜನಿಕ ಡೊಮೇನ್‌ಗಳಲ್ಲಿ ಈ ಯೋಜನೆಯ ಬಗ್ಗೆ ಮಾಹಿತಿಯಿಲ್ಲ. ಯಾವುದೇ ಸುದ್ದಿಸಂಸ್ಥೆ ಕೂಡ ಸುದ್ದಿ ಮಾಡಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲರಿಗೂ ಉಚಿತವಾಗಿ ರೀಚಾರ್ಜ್ ಮಾಡಲಿದೆ ಎಂದು ಹಲವಾರು ಸುದ್ದಿಸಂಸ್ಥೆಗಳು ಅದನ್ನು ವರದಿ ಮಾಡುತ್ತಿವೆ.
ವೈರಲ್ ಪೋಸ್ಟ್‌ನಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಬ್ಲಾಗ್‌ಗಳನ್ನು ತೆರೆದುಕೊಳ್ಳುತ್ತದೆ. ಆ ಬ್ಲಾಗ್, ಜನರ ಫೋನ್ ಸಂಖ್ಯೆ ಸೇರಿದಂತೆ ಕಲವು ಮಾಹಿತಿಗಳನ್ನು ಆಗ್ರಹಿಸುವ ವಂಚನೆ ವೆಬ್‌ಸೈಟ್ ಆಗಿದೆ. ಪೋಸ್ಟ್‌ನಲ್ಲಿದ್ದ ವೆಬ್‌ಸೈಟ್ ಲಿಂಕ್ ‘http://hgfc.buzz/pywe9ne/79168321815506180121dff7df’ ಮೇಲೆ ಕ್ಲಿಕ್ ಮಾಡಿದರೆ, ಅದು ನಮ್ಮ ಮೊಬೈಲ್ ನಂಬರ್ ಸೇರಿದಂತೆ ವೈಯಕ್ತಿಕವಾಗಿ ಕೇಳುವ ನಕಲಿ ವೆಬ್‌ಸೈಟ್‌ಗೆ ನಮ್ಮನ್ನು ಸಂಪರ್ಕಿಸುತ್ತದೆ. ಈ ಹಿಂದೆಯೂ ಇಂತದ್ದೇ ಹಲವಾರು ನಕಲಿ ಪೋಸ್ಟ್‌ಗಳು ವೈರಲ್ ಆಗಿದೆ ಉಚಿತ ರೀಚಾರ್ಜ್ ಈ ಹಿಂದೆಯೂ ಹಲವು ನಕಲಿ ಪೋಸ್ಟ್‌ಗಳು ವೈರಲ್ ಆಗಿದ್ದವು.
ಕಳೆದ ವರ್ಷ ನವೆಂಬರ್‌ನಲ್ಲಿ ಮೋದಿ ಅವರು 239 ರೂ.ಗಳ 28 ದಿನದ ರೀಜಾರ್ಚ್ ನೀಡುತ್ತಿದ್ದಾರೆ ಎಂದು ಪೋಸ್ಟ್ ವೈರಲ್ ಆಗಿದೆ. ಅದರಲ್ಲಿಯೂ, ನಮ್ಮ ಮಾಹಿತಿಯನ್ನು ಸಂಗ್ರಹಿಸುವ ನಕಲಿ ಲಿಂಕ್ ಅನ್ನು ಹರಿಬಿಡಲಾಯಿತು. ವೈರಲ್ ಸಂದೇಶಕ್ಕೆ ಲಿಂಕ್ ಮಾಡಲಾದ ವೆಬ್‌ಸೈಟ್ ಬಳಕೆದಾರರ ಡೇಟಾವನ್ನು ಸಂಗ್ರಹಿಸುತ್ತದೆ ಮತ್ತು ಹಣಕಾಸಿನ ಹಗರಣಗಳಿಗೆ ಕಾರಣವಾಗಬಹುದು.
ಈಗ ವೈರಲ್ ಆಗುತ್ತಿರುವ ಪೋಸ್ಟ್ ಕೂಡ ನಕಲಿಯಾಗಿದೆ. ಯಾರು ಕೂಡ ಪೋಸ್ಟ್‌ನ ಲಿಂಕ್ ಮೇಲೆ ಕ್ಲಿಕ್ ಮಾಡಿ, ತಮ್ಮ ವೈಯಕ್ತಿಕ ದಾಖಲೆಗಳನ್ನು ನಕಲಿ ವೆಬ್‌ಸೈಟ್‌ನಲ್ಲಿ ನಮೂದಿಸಬೇಡಿ ಎಂದು ವಿನಂತಿಸಲಾಗಿದೆ.
ಬಿಜೆಪಿ ಅಥವಾ ಕಾಂಗ್ರೆಸ್ ಇಂತಹ ಯಾವುದೇ ಯೋಜನೆಗಳನ್ನು ಜಾರಿ ಮಾಡಿಲ್ಲ ವೆಬ್‌ಸೈಟ್‌ಗಳಲ್ಲಿ ಇರುವ ಲಿಂಕ್‌ಗಳನ್ನು ನಂಬಿ ಮೋಸ ಹೋಗಬಾರದೆಂದು ಎಚ್ಚರಿಕೆ ನೀಡಲಾಗಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಇಂತಹದ್ದೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, ಬಿಜೆಪಿ ಮತ್ತು ಕಾಂಗ್ರೆಸ್, ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಉಚಿತ ರೀಚಾರ್ಜ್ ಯೋಜನೆಯನ್ನು ನೀಡಲಿವೆ ಎಂಬುದು ಸುಳ್ಳು. ಹಾಗಾಗಿ ಈ ಸಂದೇಶಗಳನ್ನು ನಂಬಿ ಜನರು ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಮೋಸಹೋಗುವುದು ಖಚಿತ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ರಾಹುಲ್ ಗಾಂಧಿ ಹಿಂದೂ ದೇವರ ಮೂರ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದು ನಿಜವೇ?