FACT CHECK | ಬೆಲ್ಲಿ ಡ್ಯಾನ್ಸರ್ ಚಿತ್ರಕ್ಕೆ ಸ್ಮೃತಿ ಇರಾನಿ ಫೋಟೊವನ್ನು ಎಡಿಟ್ ಮಾಡಿ ಹಂಚಿಕೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ನೃತ್ಯ ಮಾಡುವ ಉಡುಪಿನಲ್ಲಿ ಇರುವ  ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಉಡುಗೆಯಲ್ಲಿ ಇರುವ ಚಲುವೆಯನ್ನು ಗುರುತಿಸಿ ಎಂಬ ಸಾಲುಗಳೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಸ್ಮೃತಿ ಇರಾನಿ ಒಬ್ಬ ಕಲಾವಿದೆ ಹೌದು, ಬಹಳ ಹಿಂದೆ ಸ್ಮೃತಿ ಇರಾನಿ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗಿದ್ದರೆ ಈ ವೈರಲ್ ಪೋಸ್ಟ್‌ನಲ್ಲಿರುವ ಚಿತ್ರದಲ್ಲಿ ಕಾಣುತ್ತಿರುವುದು ಸ್ಮೃತಿ ಇರಾನಿ ಅವರೆಯೇ ? ಎಂದು  ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಸ್ಟ್‌ಅನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ಟ್ರಿಪ್ ಅಡ್ವೈಸರ್ ಎಂಬ ವೆಬ್‌ಸೈಟ್‌ನಲ್ಲಿ ಫೋಟೋದ ಮೂಲ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ಈ ಫೋಟೋ ಹೋಟೆಲ್ ಕ್ಲಬ್ ಎಕ್ಸೆಲ್ಸಿಯರ್‌ನ ಫೋಟೋ ಗ್ಯಾಲರಿಯಲ್ಲಿದೆ. ಆ ಫೋಟೋವನ್ನು ನೀವು ಇಲ್ಲಿ ನೋಡಬಹುದು.

Comparison of the viral image with the TripAdvisor image, highlighted with yellow and red arrows. (Source: Facebook/TripAdvisor/Modified by Logically Facts)

ಫೋಟೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಸ್ಮೃತಿ ಇರಾನಿಯ ಮುಖ ಮತ್ತು ತಲೆಯ ಭಾಗವು ದೇಹದ ಇತರೆ ಭಾಗಗಳಿಗೆ ಹೊಂದಿಕೆಯಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ, ಬೇರೆ ಯಾರದ್ದೂ ಚಿತ್ರಕ್ಕೆ ಸ್ಮೃತಿ ಇರಾನಿ ಚಿತ್ರವನ್ನು ಸೇರಿಸಿ ಎಡಿಟ್ ಮಾಡಿ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಚಿತ್ರವನ್ನು ಈ ಹಿಂದೆಯೂ ಹಂಚಿಕೊಂಡಿರುವುದು ತನಿಖೆಯ ವೇಳೆ ತಿಳಿದು ಬಂದಿದೆ. ಅದೇ ಚಿತ್ರವನ್ನು 2022 ರಲ್ಲಿ ಸಹ ಹಂಚಿಕೊಳ್ಳಲಾಗಿತ್ತು.

“ಬೆಲ್ಲಿ ಡ್ಯಾನ್ಸರ್ ಆನ್ ದಿ ಟರ್ಕಿಶ್ BBQ ನೈಟ್” ಎಂದು ಫೋಟೋ ಅಡಿಯಲ್ಲಿ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಕಲರ್‌ನಲ್ಲಿರುವ ಈ ಫೋಟೋವನ್ನು ಬೆಲ್ಲಿ ಡ್ಯಾನ್ಸರ್‌ನ ಮುಖದ ಬದಲು ಸ್ಮೃತಿ ಇರಾನಿ ಅವರ ಮುಖದೊಂದಿಗೆ ಎಡಿಟ್ ಮಾಡಲಾಗಿದೆ ಮತ್ತು ಕಪ್ಪು ಮತ್ತು ಬಿಳಿ ಬಣ್ಣಕ್ಕೆ ಬದಲಾಯಿಸಲಾಗಿದೆ. ವಾಸ್ತವವಾಗಿ ಮೂಲ ಫೋಟೋದಲ್ಲಿರುವುದು ಸ್ಮೃತಿ ಇರಾನಿ ಅಲ್ಲ. ಬೆಲ್ಲಿ ನೃತ್ಯ ಕಲಾವಿದೆಯ ಫೋಟೋವನ್ನು ಎಡಿಟ್ ಮಾಡಿ ಸ್ಮೃತಿ ಇರಾನಿ ಮುಖವನ್ನು ಇರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.”

ಒಟ್ಟಾರೆಯಾಗಿ ಹೇಳುವುದಾದರೆ, ಬೆಲ್ಲಿ ನೃತ್ಯ ಕಲಾವಿದೆಯ ಫೋಟೋವನ್ನು ಎಡಿಟ್ ಮಾಡಿ, ಸಚಿವೆ ಸ್ಮೃತಿ ಇರಾನಿ ಮುಖವನ್ನು ಸೇರಿಸಲಾಗಿದೆ. ಅವರ ಮೂಲ ಫೋಟೋ ಹೋಟೆಲ್ ಕ್ಲಬ್ ಎಕ್ಸೆಲ್ಸಿಯರ್‌ನ ಟ್ರಿಪ್ ಅಡ್ವೈಸರ್ ವೆಬ್‌ಸೈಟ್‌ನ ಆಲ್ಬಮ್‌ನಲ್ಲಿದೆ. ಮೂಲ ಫೋಟೋದಲ್ಲಿರುವ ಬೆಲ್ಲಿ ನೃತ್ಯ ಕಲಾವಿದೆಯ ಉಡುಪಿನ ಬಣ್ಣ ಹಸಿರು ಬಣ್ಣದಲ್ಲಿದೆ ಆದರೆ ಎಡಿಟ್ ಮಾಡಿದ ಚಿತ್ರಕ್ಕೆ ಸ್ಮೃತಿ ಇರಾನಿ ಫೋಟೋ ಸೇರಿಸಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಲೋಕಸಭಾ ಚುನಾವಣಾ ಹಿನ್ನಲೆ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಬಂಪರ್ ಕೊಡುಗೆ ಎಂದು ಸುಳ್ಳು ಸಂದೇಶ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights