ಫ್ಯಾಕ್ಟ್‌ಚೆಕ್: ಗುಜರಾತ್‌ನಲ್ಲಿ AAP ಚುನಾವಣಾ ಪ್ರಚಾರಕ್ಕೆ ಬೃಹತ್ ಜನ ಸಮೂಹ ಸೇರಿತ್ತೆ?

ಗುಜರಾತ್‌ ವಿಧಾನಸಭೆ ಚುನಾವಣೆಗೆ ಇನ್ನೆರಡು ವಾರಗಳು ಬಾಕಿ ಇದ್ದು, ಕಣದಲ್ಲಿರುವ ವಿವಿಧ ರಾಜಕೀಯ ಪಕ್ಷಗಳ ನಾಯಕರು  ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ಚುರುಕುಗೊಳಿಸಿದ್ದಾರೆ. ಆಮ್ ಆದ್ಮಿ ಪಕ್ಷ (AAP) ಬಾರಿ ಜನರನ್ನು ಸೇರಿಸಿ ಮೆರವಣಿಗೆ ನಡೆಸುತ್ತಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಗುಜರಾತ್‌ನ AAP ಮುಖ್ಯಸ್ಥ ಗೋಪಾಲ್ ಇಟಾಲಿಯಾ ಅವರ ಸೂರತ್‌ನಲ್ಲಿ “ಗ್ರ್ಯಾಂಡ್ ರೋಡ್‌ಶೋ”  ಎಂಬ ಹೇಳಿಕೆಯೊಂದಿಗೆ ಸಾರ್ವಜನಿಕ ರ್ಯಾಲಿಯಲ್ಲಿ ಸೇರಿದ ಭಾರಿ ಜನಸಮೂಹದ ಫೋಟೋ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋ ಗುಜರಾತ್‌ನ ಜನರ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಪ್ರತಿಪಾದಿಸಿ ಫೇಸ್‌ಬುಕ್ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಫೋಟೋ ನಿಜವಾಗಿಯೂ ಗುಜರಾತ್‌ನ AAP ಪರವಾದ ರ್ಯಾಲಿಗೆ ಸೇರಿದ ಜನ ಸಮೂಹವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜುಲೈ 21, 2017 ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯವರ ಫೇಸ್‌ಬುಕ್ ನಲ್ಲಿ ಮಾಡಿದ  ಪೋಸ್ಟ್‌ ಲಭ್ಯವಾಗಿದೆ. ಮಮತಾ ಬ್ಯಾನರ್ಜಿಯವರು ಹಂಚಿಕೊಂಡಿರುವ ಫೋಟೋ ಮತ್ತು ಗುಜರಾತ್‌ನ AAP ರ್ಯಾಲಿ ಎಂದು ಪ್ರತಿಪಾದಿಸಿ ಹಂಚಿಕೊಂಡಿರುವ ಫೋಟೋ ಒಂದೇ ಹೋಲಿಕೆಯನ್ನು ಹೊಂದಿವೆ.

ಮಮತಾ ಬ್ಯಾನರ್ಜಿಯವರು ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ ದಿನಾಂಕವನ್ನು ಕೀವರ್ಡ್ ಗಳನ್ನು ಬಳಸಿಕೊಂಡು ಮತ್ತಷ್ಟು ಸರ್ಚ್ ಮಾಡಿದಾಗ, 2017 ರಲ್ಲಿ ಕೋಲ್ಕತ್ತಾದಲ್ಲಿ ಹುತಾತ್ಮರ ದಿನದಂದು ಟಿಎಂಸಿ ರ್ಯಾಲಿಯಲ್ಲಿ ತೆಗೆದ ಚಿತ್ರ ಎಂದು ತಿಳಿದು ಬಂದಿದೆ.

ದಿ ಹಿಂದೂ ವರದಿಯ ಪ್ರಕಾರ ರ್ಯಾಲಿಯಲ್ಲಿ ಮಮತಾ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ, ಬಿಜೆಪಿಯನ್ನು ವಿರೋಧಿಸಲು ಯಾವುದೇ ಶಕ್ತಿಗಳು ಒಗ್ಗೂಡಿದರೆ ತಮ್ಮ ಪಕ್ಷವು ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ದ್ವೇಷ ಪ್ರಚೋದನೆಯನ್ನು ಎದುರಿಸಲು ತನ್ನ ಪಕ್ಷದ ಕಾರ್ಯಕರ್ತರು ದೃಢವಾಗಿ ನಿಲ್ಲಬೇಕು ಎಂದು ಹೇಳಿದ್ದರು.

ಜುಲೈ 21 1993 ರಂದು, ಎಡರಂಗದ ಸರ್ಕಾರದ ಅಧಿಕಾರಾವದಿಯಲ್ಲಿ, TMC ಯೂತ್ ಕಾಂಗ್ರೆಸ್ ಪ್ರದರ್ಶನದ ಮೇಲೆ ಕೋಲ್ಕತ್ತಾ ಪೊಲೀಸರು ಗುಂಡು ಹಾರಿಸಿದ್ದರು, ಇದರಲ್ಲಿ 13 ಜನರು ಸಾವನ್ನಪ್ಪಿದರು. ತೃಣಮೂಲ ಈ ಘಟನೆಯನ್ನು ಹುತಾತ್ಮರ ದಿನವನ್ನಾಗಿ ಸ್ಮರಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ತೃಣಮೂಲ ಕಾಂಗ್ರಸ್‌ 2017 ರಲ್ಲಿ ಆಯೋಜಿಸಿದ್ದ ಹುತಾತ್ಮರ ದಿನದ ಸಂದರ್ಭದಲ್ಲಿ ಸೇರಿದ ಭಾರೀ ಜನಸ್ತೋಮವನನು, ಪ್ರಸ್ತುತ ಗುಜರಾತ್‌ನ ವಿಧಾನ ಸಭಾ ಚುನಾವಣಾ ಪ್ರಚಾರದ ವೇಳೆ AAP ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಭಾರೀ ಸಂಖ್ಯೆಯಲ್ಲಿ ಸೇರಿದ ಜನ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ದಿ ಹಿಂದೂ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಎಳೆನೀರನ್ನು ಬಿಸಿ ಮಾಡಿ ಕುಡಿದರೆ ಕ್ಯಾನ್ಸರ್ ಗುಣವಾಗುವುದೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights