ಸ್ನೇಹಿತರಿಂದಲೇ ಬಾಲಕನ ಹತ್ಯೆ; ಕೈಕಾಲು ಕತ್ತರಿಸಿ ಕಾಡಿನಲ್ಲಿ ಶವ ಎಸೆದ ಹಂತಕರು

14 ವರ್ಷದ ಬಾಲಕನೊಬ್ಬನನ್ನು ಆತನ ಸ್ನೇಹಿತರು ಕತ್ತು ಕೊಯ್ದು, ಕೈಕಾಲುಗಳನ್ನು ಕತ್ತರಿಸಿ, ಗೋಣಿಚೀಲಗಳಲ್ಲಿ ಶವವನ್ನು ತುಂಬಿ ಕಾಡಿನಲ್ಲಿ ಎಸೆದಿರುವ ಘಟನೆ ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕ ಹತ್ಯೆಗೀಡಾದ ಹಿಂದಿನ ರಾತ್ರಿ ನಿಗೂಢವಾಗಿ ನಾಪತ್ತೆಯಾಗಿದ್ದಾನೆ ಎಂದು ಬಾಲಕನ ಕುಟುಂಬದವರು ಬುಧವಾರ ದೂರು ದಾಖಲಿಸಿದ್ದರು ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಪವನ್ ಕುಮಾರ್ ತಿಳಿಸಿದ್ದಾರೆ.

ತನಿಖೆಯ ಸಂದರ್ಭದಲ್ಲಿ, ಹತ್ಯೆಗೊಳಗಾದ ಬಾಲಕನ 14 ವರ್ಷದ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಆತ ಮಂಗಳವಾರ ರಾತ್ರಿ 8.30ರ ಸುಮಾರಿಗೆ ಜಸಿದಿಹ್ ಪೊಲೀಸ್ ಠಾಣೆ ವ್ಯಾಪ್ತಿಯ ರೋಹಿಣಿ ಗ್ರಾಮದ ತನ್ನ ಮನೆಯ ಹೊರಗೆ ಸಂತ್ರಸ್ತ ಬಾಲಕನನ್ನು ಭೇಟಿಯಾದನು. ನಂತರ, ಕುಮ್ರಾಬಾದ್ ಸ್ಟೇಷನ್ ರಸ್ತೆಗೆ ಹೋದರು, ಅಲ್ಲಿ ಇನ್ನೊಬ್ಬ ಸ್ನೇಹಿತ ಅವಿನಾಶ್ ಎಂಬಾತ ಅವರೊಂದಿಗೆ ಸೇರಿಕೊಂಡರು. ಮೂವರೂ ಪಳಂಗ ಪಹಾಡ್ ಜಂಗಲ್ ಕಡೆಗೆ ಹೋಗುತ್ತಿದ್ದಾಗ ಅವಿನಾಶ್ ಮತ್ತು ಹತ್ಯೆಯಾದ ಬಾಲಕನ ನಡುವೆ ವಾಗ್ವಾದ ನಡೆದಿದೆ ಎಂದು ಕುಮಾರ್ ಹೇಳಿದ್ದಾರೆ.

ಮಾತಿನ ಚಕಮಕಿಯ ನಡುವೆ ಅವನಾಶ್‌ ಚಾಕುವನ್ನು ತೆಗೆದುಕೊಂಡು ಆತನಿಗೆ ಇರಿದಿದ್ದಾನೆ ಮತ್ತು ನಂತರ ಅವನ ಕತ್ತು ಸೀಳಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ.

ಪೊಲೀಸರು ಶವವನ್ನು ವಶಕ್ಕೆ ಪಡೆದುಕೊಂಡಿದ್ದು, ಅವಿನಾಶ್‌ನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅವಿನಾಶ್ ಕೂಡ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ರಕ್ತಸಿಕ್ತ ಚಾಕು ಮತ್ತು ಬಲಿಪಶುವಿನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕುಮಾರ್ ಹೇಳಿದ್ದಾರೆ.

ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 201 (ಅಪರಾಧದ ಸಾಕ್ಷ್ಯಾಧಾರ ನಾಶ), 120 ಬಿ (ಅಪರಾಧದ ಪಿತೂರಿ), 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಹೈಟಿಯಲ್ಲಿ ಭೀಕರ ದುರಂತ: ಟ್ರಕ್‌ ಸ್ಪೋಟಗೊಂಡು 60ಕ್ಕೂ ಹೆಚ್ಚು ಜನರು ಸಾವು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights