ಪಿವಿ ಸಿಂಧು ಜೊತೆ ಐಸ್ ಕ್ರೀಮ್ ಸೇವಿಸಿದ ಪ್ರಧಾನಿ ಮೋದಿ..!

ಕೊಟ್ಟ ಭರವಸೆಯಂತೆ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ. ಸಿಂಧು ಜೊತೆಗೆ ಪ್ರಧಾನಿ ಮೋದಿ ಐಸ್​ ಕ್ರೀಂ ಸೇವಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ಧ್ವಜಾರೋಹಣದ ಬಳಿಕ ತಮ್ಮ ನಿವಾಸದಲ್ಲಿ ವಿಶೇಷ ಅತಿಥಿಗಳಾಗಿ ಟೋಕಿಯೊ ಒಲಿಂಪಿಕ್ಸ್ 2020 ಕ್ಕೆ ಹೋದ ಭಾರತದ ಸಂಪೂರ್ಣ ತಂಡವನ್ನು ಆಹ್ವಾನಿಸಿದ್ದರು.

ಟೋಕಿಯೊಗೆ ಭಾರತ ತಂಡವು ಹೊರಡುವ ಮುನ್ನ, ಮೋದಿ ಭಾರತೀಯ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದ್ದರು. ಈ ಮೂಲಕ 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಪ್ರೇರೇಪಿಸಿದ್ದರು. ಸಂವಾದದ ಸಮಯದಲ್ಲಿ ಮೋದಿಯವರು ಭಾರತೀಯ ಆಟಗಾರ್ತಿ ಪಿವಿ ಸಿಂಧು ಅವರು ಟೋಕಿಯೊದಿಂದ ಹಿಂದಿರುಗಿದ ನಂತರ ಒಟ್ಟಿಗೆ ಐಸ್ ಕ್ರೀಂ ಸೇವಿಸುವುದಾಗಿ ಭರವಸೆ ನೀಡಿದ್ದರು.

ಕೊಟ್ಟ ಭರವಸೆಯನ್ನು ಈಡೇರಿಸಲು ಪಿಎಂ ಸಿಂಧು ಜೊತೆ ಐಸ್ ಕ್ರೀಂ ಸೇವಿಸಿದ್ದಾರೆ. ಭಾರತವು ಒಲಿಂಪಿಕ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಟೋಕಿಯೊದಲ್ಲಿ ಕಂಚಿನ ಪದಕ ಗೆದ್ದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights