7 ರಾಜ್ಯ ಚುನಾವಣೆ: ಅಷ್ಟೂ ರಾಜ್ಯಗಳಲ್ಲಿಯೂ ಕಾಂಗ್ರೆಸ್‌ ಅಸ್ತವ್ಯಸ್ತ – ಹೈಕಮಾಂಡ್‌ ದಿಗ್ಭ್ರಮೆ!; ಡೀಟೇಲ್ಸ್‌

ಕಾಂಗ್ರೆಸ್ ನಾಯಕತ್ವವು ಪಂಜಾಬ್‌ನಲ್ಲಿ ಉದ್ವಿಗ್ನತೆಯನ್ನು ಎದುರಿಸುತ್ತಿದೆ. ಇಲ್ಲಿ ಮಾತ್ರವಲ್ಲದೆ, 2022 ರಲ್ಲಿ ಚುನಾವಣೆ ನಡೆಯಲಿರುವ ಬಹುಪಾಲು ರಾಜ್ಯಗಳಲ್ಲಿ ಪಕ್ಷಕ್ಕೆ ತೊಡಕು ಉಂಟಾಗುತ್ತಿದೆ. ಪಕ್ಷವು ಅಧಿಕಾರಕ್ಕೆ ಬರಲು ಅವಕಾಶವಿರುವ ರಾಜ್ಯಗಳ ರಾಜ್ಯ ಘಟಕಗಳಲ್ಲಿ ಭಿನ್ನಾಭಿಪ್ರಾಯವನ್ನು ಶಮನ ಮಾಡಲು ಹೈಕಮಾಂಡ್ ಕಠಿಣ ಕೆಲಸವನ್ನು ಮಾಡುತ್ತಿದೆ. ಮುಂದಿನ ವರ್ಷ 7 ರಾಜ್ಯಗಳು ವಿಧಾನಸಭಾ ಚುನಾವಣೆಗಳು ನಡೆಯಲಿವೆ (ಗೋವಾ, ಮಣಿಪುರ, ಉತ್ತರಾಖಂಡ, ಪಂಜಾಬ್, ಯುಪಿ, ಗುಜರಾತ್ ಮತ್ತು ಹಿಮಾಚಲ ಪ್ರದೇಶ).

ಕಾಂಗ್ರೆಸ್‌ ಹೈಕಮಾಂಡ್‌ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹಾಗೂ ರಾಜ್ಯ ನಾಯಕರು ಮತ್ತು ಶಾಸಕರೊಂದಿಗೆ ಸರಣಿ ಸಭೆಗಳನ್ನು ನಡೆಸಿದೆ. ಇದೀಗ ಪಕ್ಷವು ಮುಂದಿನ ತಿಂಗಳ ಆರಂಭದಲ್ಲಿ ರಾಜ್ಯ ಘಟಕದಲ್ಲಿ ಸಾಂಸ್ಥಿಕ ಬದಲಾವಣೆಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಆದಾಗ್ಯೂ, ಚುನಾವಣೆ ನಡೆಯಲಿರುವ ಇತರ ರಾಜ್ಯಗಳಿಗೆ ಸಂಬಂಧಿಸಿದಂತೆ ಪಕ್ಷವು ಇನ್ನೂ ಯಾವುದೇ ಚರ್ಚೆಯನ್ನು ಕೈಗೊಂಡಿಲ್ಲ. ಆದ್ಯತೆಯ ಆಧಾರದ ಮೇಲೆ ಗಮನಹರಿಸದಿದ್ದರೆ, ಇತ್ತೀಚಿನ ಕೇರಳ ಚುನಾವಣೆಗಳಲ್ಲಿ ಎದುರಿಸಿದಂತೆಯೇ ಪಕ್ಷವು ಬಿಕ್ಕಟ್ಟನ್ನು ಎದುಸಿಬೇಕಾಗುತ್ತದೆ. ಅಲ್ಲಿ ಎಡಪಂಥೀಯರು ಎರಡನೇ ಬಾರಿಗೆ ಗೆದ್ದಿದ್ದಾರೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲೂ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿದೆ.

ಇದನ್ನೂ ಓದಿ: ಮಹಾರಾಷ್ಟ್ರ: ಸೇನಾ ಮತ್ತು ಕಾಂಗ್ರೆಸ್ ನಡುವಿನ ಬಿರುಕು ಏನನ್ನು ಸೂಚಿಸುತ್ತಿದೆ?

ಉತ್ತರಾಖಂಡ: 2000ದಲ್ಲಿ ಉತ್ತರಾಖಂಡ ರಾಜ್ಯವು ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೂ ರಾಜ್ಯದಲ್ಲಿ ಒಂದೇ ಸರ್ಕಾರ ಎರಡು ಬಾರಿ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ಪ್ರತಿ ಚುನಾವಣೆಯಲ್ಲಿಯೂ ಸರ್ಕಾರಗಳು ಬದಲಾಗುತ್ತಿವೆ. ಅಲ್ಲಿಯೂ ಭಿನ್ನಾಭಿಪ್ರಾಯ ಹೊಂದಿರುವ ಒಂದು ಗುಂಪು ಮಾಜಿ ಸಿಎಂ ಹರೀಶ್‌ ರಾವತ್‌ ಅವರನ್ನು ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿ ಎಂದು ಘೋಷಿಸುವುದರೊಂದಿಗೆ ಸಾಂಸ್ಥಿಕ ಬದಲಾವಣೆಗಳನ್ನು ಕಾಣಲಿದೆ ಎಂದು ಹೇಳಿದ್ದಾರೆ, ಆದರೆ, ಇದನ್ನು ರಾವತ್‌ ನಿರಾಕರಿಸಿದ್ದಾರೆ. ಇಂದಿರಾ ಹೃದಯೇಶ್ ಅವರ ನಿಧನದ ನಂತರ ಪಕ್ಷವು ಶೀಘ್ರದಲ್ಲೇ ಹೊಸ ವಿರೋಧ ಪಕ್ಷದ ನಾಯಕನ ಹೆಸರನ್ನು ಪ್ರಕಟಿಸುವ ನಿರೀಕ್ಷೆಯಿದೆ. ರಾಜ್ಯದ ಮುಖಂಡರು ಹೊಸ ಮುಖ್ಯಸ್ಥರನ್ನು ನೇಮಿಸಬೇಕು ಎಂದು ನಿರ್ಧರಿಸಿದ್ದರಿಂದ, ಈ ಹುದ್ದೆಗೆ ಲಾಬಿ ನಡೆಯುತ್ತಿದೆ.

ಉತ್ತರ ಪ್ರದೇಶ: ಪ್ರಿಯಾಂಕಾ ಗಾಂಧಿ ಅವರ ನೇತೃತ್ವದಲ್ಲಿ ರಾಜ್ಯ ಘಟಕವನ್ನು ಬಲಪಡಿಸುವ ಕೆಲಸ ನಡೆಯುತ್ತಿದೆ. ಆದರೂ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪ್ರಮುಖ ಪಕ್ಷವಾಗಿ ಉಳಿದಿಲ್ಲ. ಪಕ್ಷದ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಅವರನ್ನು ಬದಿಗೊತ್ತಲಾಗಿದೆ ಎಂದು ಹಲವರು ಆರೋಪಿಸಿದ್ದಾರೆ, ಅವರೆಲ್ಲರೂ ಕಾಂಗ್ರೆಸ್‌ ಒಳಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಚುನಾವಣೆಗೆ ಎಂಟು ತಿಂಗಳ ಮೊದಲು ಜಿತಿನ್ ಪ್ರಸಾದ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವುದು ಪಕ್ಷದ ಹಲವರಿಗೆ ಖುಷಿ ತಂದಿದೆ.

ಗೋವಾ: ದುರ್ಬಲ ನಾಯಕತ್ವ ಮತ್ತು ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿಗೆ ಎಂದು ಉಲ್ಲೇಖಿಸಿದ್ದ ಪಕ್ಷದ ಮಹಿಳಾ ವಿಭಾಗದ ಮುಖ್ಯಸ್ಥ ಪ್ರತಿಮಾ ಕೌಟಿನ್ಹೋ ಅವರು ಪಕ್ಷ ತೊರೆದು ಎಎಪಿಗೆ ಸೇರ್ಪಡೆಯಾಗಿದ್ದಾರೆ.  ಇದಾದ ನಂತರ, ಕಾಂಗ್ರೆಸ್ ಲೋಕಸಭಾ ಸಂಸದ ಫರ್ನ್ಸಿಸ್ ಸರ್ಡಿನ್ಹಾ ಅವರು ರಾಜ್ಯ ಮುಖ್ಯಸ್ಥ ಗಿರೀಶ್ ಚೋಡಂಕರ್ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಪಕ್ಷವು ತನ್ನ ಅವಕಾಶಗಳನ್ನು ಹೆಚ್ಚಿಸಲು ಚುನಾವಣೆಗೆ ಮುಂಚಿತವಾಗಿ ಗೋವಾ ಕಾಂಗ್ರೆಸ್ ಮುಖ್ಯಸ್ಥರನ್ನು ಬದಲಾಯಿಸುವ ಅಗತ್ಯವಿದೆ ಎಂದು ಸರ್ಡಿನ್ಹಾ ಹೇಳಿದ್ದಾರೆ.

ಇದನ್ನೂ ಓದಿ: ರಾಜೀನಾಮೆ ನೀಡದೆ BJP ಸೇರಿರುವ 10 ಶಾಸಕರು ಪಕ್ಷಕ್ಕೆ ಮರಳಲು ಅವಕಾಶವಿಲ್ಲ: ದಿನೇಶ್‌ ಗುಂಡೂರಾವ್

ಗೋವಾ ರಾಜ್ಯ ಘಟಕವು ದೀರ್ಘಕಾಲದವರೆಗೆ ಬಿಕ್ಕಟ್ಟಿನಿಂದ ಬಳಲುತ್ತಿದೆ. ಅಲ್ಲದೆ, ಪಕ್ಷದ ನಾಯಕತ್ವವು ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ. 2019ರಲ್ಲಿ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್‌ ವಿರೋಧ ಪಕ್ಷವಾದ ನಂತರ, ಇದ್ದ 19 ಕಾಂಗ್ರೆಸ್ ಶಾಸಕರಲ್ಲಿ 10 ಮಂದಿ ಬಿಜೆಪಿಗೆ ಸೇರಿದ್ದಾರೆ.

ಗುಜರಾತ್: ಪ್ರಮುಖ ರಾಜ್ಯವಾದ ಗುಜರಾತ್‌ನಲ್ಲಿ 2017ರಲ್ಲಿ ನಡೆದ ವಿಧಾನಸಭಾ ಚುನಾವನೆಯಲ್ಲಿ ಕಾಂಗ್ರೆಸ್ ಬಿಜೆಪಿಗೆ ಕಠಿಣ ಹೋರಾಟ ನೀಡಿತು. ಆದರೆ, ನಂತರದಲ್ಲಿ ಪಕ್ಷದ ಹಲವಾರು ಶಾಸಕರು ಬದಿಗೆ ಸರಿದರು. ಗುಜರಾತ್‌ ಕಾಂಗ್ರೆಸ್‌ನಲ್ಲಿ ಬಣವಾದವು ಮುನ್ನೆಲೆಯಲ್ಲಿದೆ. ಹೀಗಾಗಿ ಪಕ್ಷವು ರಾಜ್ಯ ಮುಖ್ಯಸ್ಥರನ್ನು ನೇಮಕ ಮಾಡಬೇಕಾಗಿಲ್ಲವಾದರೂ ಫೆಬ್ರವರಿ-ಮಾರ್ಚ್ 2022 ರಲ್ಲಿ ಚುನಾವಣೆಗಳು ನಿಗದಿಯಾಗಿದೆ. ಇಲ್ಲಿಗೆ ಎಐಸಿಸಿ ಉಸ್ತುವಾರಿ ನೇಮಕವೂ ಬಾಕಿ ಇದೆ.

ರಾಜೀವ್ ಸಾತವ್ ಅವರ ನಿಧನದ ನಂತರ ಈ ಹುದ್ದೆ ಖಾಲಿ ಬಿದ್ದಿದೆ. ವರದಿಗಳ ಪ್ರಕಾರ, ಕಾರ್ಯನಿರತ ಅಧ್ಯಕ್ಷರಾಗಿ ನೇಮಕಗೊಂಡ ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್ ಕೂಡ ಅತೃಪ್ತರಾಗಿದ್ದು, ಎಎಪಿ ಜೊತೆ ಮಾತುಕತೆ ನಡೆಸುತ್ತಿದ್ದಾರೆ

ಹಿಮಾಚಲ ಪ್ರದೇಶ: ಕಾಂಗ್ರೆಸ್ಸಿನ ಅತಿ ಉನ್ನತ ನಾಯಕ ಮತ್ತು ಆರು ಬಾರಿ ಸಿಎಂ ಆಗಿದ್ದ ವೀರಭದ್ರ ಸಿಂಗ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪಕ್ಷವು ಬಣವಾದವನ್ನು ಎದುರಿಸುತ್ತಿದೆ. ಪಕ್ಷದ ಮುಖಂಡರು ಯುನೈಟೆಡ್ ಫ್ರಂಟ್ ಹಾಕುವ ಅವಶ್ಯಕತೆಯಿದೆ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಯಾರೊಂದಿಗೂ ಮೈತ್ರಿ ಇಲ್ಲ; ಬಿಎಸ್‌ಪಿ ಏಕಾಂಗಿಯಾಗಿ ಸ್ಪರ್ಧಿಸುತ್ತದೆ: ಮಾಯಾವತಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights