ಕೇರಳ: ಚುನಾವಣೆಯಲ್ಲಿ ಬಿಜೆಪಿ ಪಡೆದದ್ದು ಮೂರೇ ಓಟು!
ಇತ್ತೀಚೆಗೆ ಕೇರಳದ ಗ್ರಾಮ ಪಂಚಾಯತಿಯ ವಾರ್ಡ್‌ವೊಂದಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಕೇವಲ ಮೂರು ಮತಗಳನ್ನು ಮಾತ್ರ ಪಡೆದಿದ್ದು, ವಿರೋಧಿಗಳಿಂದ ನಗೆಪಾಟಲಿಕೆಗೆ ಈಡಾಗಿದೆ.
ಉಪಚುನಾವಣೆ ನಡೆದ ಕೊಟ್ಟಾಯಂ ಜಿಲ್ಲೆಯ ಎಲಿಕುಲಂ ಗ್ರಾಮ ಪಂಚಾಯತ್ ಎಲಮಗುಲಂ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 3 ಮತಗಳನ್ನು ಪಡೆದಿದ್ದಾರೆ.
2020ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಗೆದ್ದಿದ್ದ ಕಾಂಗ್ರೆಸ್ ಅಭ್ಯರ್ಥಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆಸಲಾಗಿತ್ತು. ಫಲಿತಾಂಶವು ಆಗಸ್ಟ್ 13ರಂದು ಪ್ರಕಟವಾಗಿದ್ದು, ಬಿಜೆಪಿ ಅಭ್ಯರ್ಥಿ ಜಯಪ್ರಕಾಶ್‌ಗೆ 3 ಮತಗಳನ್ನು ಪಡೆದಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 512 ಮತ ಪಡೆದು ಗೆದ್ದಿದ್ದಾರೆ. 353 ಮತ ಪಡೆದು ಎಡ ಪಕ್ಷವು ಎರಡನೇ ಸ್ಥಾನ ಪಡೆದುಕೊಂಡಿದೆ.
2020ರಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಈ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ 2 ಮತಗಳನ್ನು ಪಡೆದಿದ್ದರು ಎಂದು ಬಿಜೆಪಿ ಹೇಳಿಕೊಂಡಿದೆ.
ಇದನ್ನೂ ಓದಿ: ಮೂರು ತಿಂಗಳ ಮಗುವಿನ ಮೇಲೆ ಬಾಲಕನಿಂದ ಅತ್ಯಾಚಾರ; ಪ್ರಕರಣ ದಾಖಲು!