ಕಾಬೂಲ್‌ನಿಂದ ಹೊರಟ ವಿಮಾನದಿಂದ ಬಿದ್ದು ಇಬ್ಬರು ಸಾವು : ಭಯಾನಕ ದೃಶ್ಯ ಸೆರೆ..!
ಕ್ಷಣಕ್ಷಣಕ್ಕೂ ಕಾಬೂಲನಲ್ಲಿ ಉದ್ವಿಗ್ನ ವಾತಾವರಣ ಹೆಚ್ಚಾಗುತ್ತಿದೆ. ಉಗ್ರರಿಂದ ಪ್ರಾಣ ಉಳಿಸಿಕೊಳ್ಳಲು ವಿಮಾನದ ಹೊರಭಾಗದಲ್ಲಿ ನಿಂತುಕೊಂಡಿದ್ದ ಜನರ ಪೈಕಿ ಇಬ್ಬರು ವಿಮಾನ ಟೆಕ್ ಆಫ್ ಆದ ಬಳಿಕ ಬಿದ್ದು ಸಾವನ್ನಪ್ಪಿದ್ದಾರೆ. ಸದ್ಯ ಈ ಭಯಾನಕ ದೃಶ್ಯಗಳು ಕ್ಯಾಮಾರಾದಲ್ಲಿ ಸೆರೆಯಾಗಿವೆ.
ಟೆಹ್ರಾನ್ ಟೈಮ್ಸ್ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ, ವಿಮಾನ ಕಾಬೂಲ್ ನಿಂದ ಹಾರುವುದನ್ನು ಕಾಣಬಹುದು. ವಿಮಾನ ಆಕಾಶದೆತ್ತರಕ್ಕೆ ಹಾರುತ್ತಿದ್ದಂತೆ ಇಬ್ಬರು ವ್ಯಕ್ತಿಗಳು ಕೆಳಗೆ ಬೀಳುವ ದೃಶ್ಯ ಸೆರೆಯಾಗಿದೆ.
DISCLAIMER: DISTURBING FOOTAGE❗️❗️❗️
Two people who tied themselves to the wheels of an aircraft flying from Kabul, tragically fall down. pic.twitter.com/Gr3qwGLrFn— Tehran Times (@TehranTimes79) August 16, 2021
ಅಫ್ಘಾನಿಸ್ತಾನವನ್ನು ತೊರೆಯಲು ಕಾಬೂಲ್‌ನ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾವಿರಾರು ಅಫ್ಘಾನ್ ಪ್ರಜೆಗಳು ನೆರೆದಿದ್ದರು. ಜನಸಂದಣಿಯು ಏರ್‌ಪೋರ್ಟ್‌ನ ಟಾರ್‌ಮ್ಯಾಕ್ ಅನ್ನು ಅಡ್ಡಿಪಡಿಸಿದಾಗ ಯುಎಸ್ ಪಡೆಗಳು ಗಾಳಿಯಲ್ಲಿ ಗುಂಡು ಹಾರಿಸಿದವು ಎಂದು ವರದಿಗಳು ಬಂದಿವೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಾರೀ ಗುಂಡಿನ ದಾಳಿ ನಡೆದ ವರದಿಗಳ ನಡುವೆ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ.
ಸದ್ಯ ವಿಮಾನ ಟೆಕ್ ಆಫ್ ಆಗುತ್ತಿದ್ದಂತೆ ವಿಮಾನದಿಂದ ಇಬ್ಬರು ಕೆಳಗೆ ಬಿಳುವ ದೃಶ್ಯಗಳು ಸೆರೆಯಾಗಿದ್ದು, ಕಾಬೂಲ್ ನ ಭಯಾನುಕತೆಗೆ ಹಿಡಿದ ಕನ್ನಡಿಯಾಗಿದೆ.